fbpx
ದೇವರು

ಇಂದು ಧನ ತ್ರಯೋದಶಿ ಅದೃಷ್ಟ ಹಾಗೂ ಧನ ಪ್ರಾಪ್ತಿಗಾಗಿ ಈ ದಿನ ಹೇಗೆ ಕುಬೇರ ಮತ್ತು ಲಕ್ಷ್ಮೀ ದೇವಿಯ ಆರಾಧನೆ ಮಾಡಬೇಕು ಗೊತ್ತಾ

ನವೆಂಬರ್ 5 ನೇ ತಾರೀಖು ಧನ ತ್ರಯೋದಶಿ ದಿನ ಈ ದಿನ ಹೇಗೆ ಮತ್ತು ಯಾಕೆ ಕುಬೇರ ಮತ್ತು ಲಕ್ಷ್ಮೀ ದೇವಿಯ ಆರಾಧನೆ ಮಾಡಬೇಕು ?

ನಿಮಗೆ ಶಾಪ ಮತ್ತು ರೋಗಗಳಿಂದ ಮುಕ್ತಿ ಬೇಕಾ ? ವಾಸ್ತು ದೋಷಗಳು ಪರಿಹಾರವಾಗಬೇಕೆ ? ನೀವು ಲಕ್ಷ್ಮಿ ಕುಬೇರರ ವರಪುತ್ರರಾಗಬೇಕೆ ?ಧನ ತ್ರಯೋದಶಿಯನ್ನು ಆಡುಭಾಷೆಯಲ್ಲಿ “ ಧನ ತೇರಸ್” ಎಂದು ಕರೆಯಲಾಗುತ್ತದೆ. ಇದನ್ನು ದೀಪಾವಳಿ ಹಬ್ಬಕ್ಕೆ ಮುನ್ನುಡಿ ಬರೆಯುವ ದಿನದ ಆಚರಣೆ ಎಂದು ನವಂಬರ್ 5 ನೇ ತಾರೀಖಿನಂದು ಬರುವ ಅಶ್ವಯುಜ ಮಾಸ, ಕೃಷ್ಣ ಪಕ್ಷದ ತ್ರಯೋದಶಿಯ ದಿನ ಅಂದರೆ ನವೆಂಬರ್ 5 ನೇ ತಾರೀಖು, ಸೋಮವಾರದ ದಿನವೇ ಧನ ತ್ರಯೋದಶಿಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನಕ್ಕೆ ಇಂದೂ ಪುರಾಣದಲ್ಲಿ ವಿಶೇಷ ಮಹತ್ವವಿದೆ. ಸಂಧ್ಯಾಕಾಲ ಧನ ತ್ರಯೋದಶಿಯ ಪೂಜೆ ಮಾಡುವುದಕ್ಕೆ ಸೂಕ್ತ ಸಮಯವಾಗಿದೆ. ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮೀ ದೇವಿಯನ್ನು ಮನೆಗೆ ಕರೆಯಲು ಶುಭ ಮುಹೂರ್ತವಿದು. ಈ ಸಮಯದಲ್ಲಿ ನೀವು ಶ್ರೀಮನ್ನಾರಾಯಣನ ಮನದನ್ನೆಯನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸಿದರೆ ನಿಮ್ಮ ದಾರಿದ್ರ್ಯ ದೂರವಾಗುತ್ತದೆ.
ದನ ದೇವತೆಯೊಂದಿಗೆ ಕುಬೇರನನ್ನು ಪೂಜಿಸಿದರೆ ಅಪಾರ ಫಲಗಳನ್ನು ಪಡೆಯಬಹುದು. ಧನ ತ್ರಯೋದಶಿಯ ದಿನ ಸಂಜೆ ಲಕ್ಷ್ಮೀ ದೇವಿಯೊಂದಿಗೆ ಕುಬೇರನನ್ನು ಪೂಜೆ ಮಾಡಿ, ಇದರಿಂದ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ. ಶ್ರದ್ಧಾ ಭಕ್ತಿಯಿಂದ ಈ ದಿನ ಲಕ್ಷ್ಮಿ ಕುಬೇರನನ್ನು ಪೂಜಿಸುವುದರಿಂದ ಪೂರ್ವ ಜನ್ಮದ ಪಾಪಗಳು ಪರಿಹಾರವಾಗುತ್ತವೆ, ವಾಸ್ತು ದೋಷಗಳು ದೂರವಾಗುತ್ತವೆ ಎನ್ನುವ ನಂಬಿಕೆ ಇದೆ. ಈ ಪೂಜೆಯಿಂದ ಲಕ್ಷ್ಮಿ ಕುಬೇರರ ಸಂಪೂರ್ಣ ಕೃಪೆ ನಿಮ್ಮ ಮೇಲೆ ಇರುತ್ತದೆ, ಈ ಪೂಜೆಯಿಂದ ಲಕ್ಷ್ಮಿ ಅಭಿವೃದ್ಧಿಯನ್ನು ಮಾಡುತ್ತಾಳೆ, ಕುಬೇರ ಧನ ಹರಿದು ಹೋಗುವುದನ್ನು ತಡೆಯುತ್ತಾನೆ ಎನ್ನುವ ನಂಬಿಕೆ ಇದೆ.

 

 

 

ನಿಮಗೆಲ್ಲ ಗೊತ್ತಿರುವ ಹಾಗೆ ಧನ್ವಂತರಿ ದೇವಾನು ದೇವತೆಗಳ ವೈದ್ಯ ಚಿಕಿತ್ಸಾ ಎಂದೇ ಪ್ರಸಿದ್ಧಿಯಾಗಿರುವ, ಮನುಷ್ಯರ ಸಕಲ ವಿಧದ ವ್ಯಾಧಿಗಳನ್ನು ದೂರ ಮಾಡುವವನು ಧನ್ವಂತರಿ ಇಂತಹ ಧನ್ವಂತರಿ ಜನಿಸಿದ್ದು ಇದೇ ಧನ ತ್ರಯೋದಶಿಯಂದು ಎನ್ನುವುದು ಆಯುರ್ವೇದ ಶಾಸ್ತ್ರದ ನಂಬಿಕೆ. ಹೀಗಾಗಿ ಈ ದಿನ ವೈದ್ಯರು ಧನ್ವಂತರಿಯನ್ನು ಆರಾಧಿಸುತ್ತಾರೆ. ಧನ ತ್ರಯೋದಶಿಯ ದಿನ ಗ್ರಹ ಹಾಗೂ ನಕ್ಷತ್ರಗಳ ಅದ್ಭುತ ಯೋಗವಾಗುತ್ತದೆ. ಹೀಗಾಗಿ ಈ ದಿನ ಸಂಜೆ ಧನ್ವಂತರಿ ಪೂಜೆಯನ್ನು ಮಾಡುವುದರಿಂದ ಉತ್ತಮ ಆರೋಗ್ಯ ಭಾಗ್ಯ ಲಭಿಸುತ್ತದೆ.
ಧನ್ವಂತರಿ ಆರಾಧನೆಯ ಫಲಗಳು.
ರೋಗಗಳಿಂದ ಮುಕ್ತಿ, ಆರೋಗ್ಯ ಸುಧಾರಣೆ, ಜಾತಕದಲ್ಲಿರುವ ದೋಷಗಳು ಪರಿಹಾರ, ಜೀವನದಲ್ಲಿ ಸುಖ ಸಮೃದ್ಧಿ ಪ್ರಾಪ್ತಿ, ಬೇವು ಬೆಲ್ಲ ಸೇವನೆಯಿಂದ ಆರೋಗ್ಯ ಪ್ರಾಪ್ತಿ, ಆರೋಗ್ಯ ಇರುವವರ ಬಳಿ ಲಕ್ಷ್ಮೀ ದೇವಿ ಖಂಡಿತವಾಗಿಯೂ ಇದ್ದೇ ಇರುತ್ತಾಳೆ, ಈ ಮಾತು ಅಕ್ಷರಶಃ ನಿಜ, ನೀವು ಆರೋಗ್ಯವಾಗಿದ್ದರೆ ಕೆಲಸ ಮಾಡುವುದಕ್ಕೆ ಆಗುತ್ತದೆ, ಕೆಲಸ ಮಾಡುವುದರಿಂದ ಹಣ ಸಂಪಾದನೆ ಮಾಡಬಹುದು, ಹೀಗಾಗಿಯೇ ಲಕ್ಷ್ಮಿಯ ಕೃಪೆ ನಿಮ್ಮ ಮೇಲೆ ಆಗಬೇಕು ಎಂದರೆ ಖಂಡಿತವಾಗಿಯೂ ಧನ್ವಂತರಿಯನ್ನು ಆರಾಧಿಸಲೇಬೇಕು.ಸಮುದ್ರ ಮಂಥನದ ವೇಳೆ ಧನ್ವಂತರಿ ಕೈಯಲ್ಲಿ ಅಮೃತದ ಕಲಶವನ್ನು ಹಿಡಿದು ಪ್ರಕಟಗೊಂಡಿದ್ದರು. ಹೀಗಾಗಿಯೇ ಉತ್ತರ ಭಾರತದಲ್ಲಿ ಧನ ತ್ರಯೋದಶಿಯಂದು ಇಂದಿಗೂ ಹೊಸ ಪಾತ್ರೆಗಳನ್ನು ಖರೀದಿಸುವ ಪದ್ಧತಿ ರೂಢಿಯಲ್ಲಿದೆ.

 

ಚಿನ್ನ, ಬೆಳ್ಳಿ, ಖರೀದಿಗೆ ಧನ ತ್ರಯೋದಶಿ ಮಹತ್ವದ ದಿನವೇಕೆ ?
ಸಾಕ್ಷಾತ್ ಮಹಾಲಕ್ಷ್ಮಿಯೇ ಹೇಳಿದ್ದಾಳೆ ತ್ರಯೋದಶಿಯ ದಿನದ ಪೂಜೆ . ಲಕ್ಷ್ಮಿ ದೇವಿ ಹೇಳಿರುವಂತೆ ಪೂಜೆ ಮಾಡಿದರೆ ಕಡು ಬಡವನೂ ಶ್ರೀಮಂತನಾಗಬಹುದು. ಧನ ತ್ರಯೋದಶಿಯಂದು ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಶುಭದಿನ. ಅದರಲ್ಲೂ ಚಿನ್ನ ,ಬೆಳ್ಳಿ, ತಾಮ್ರ ಹೀಗೆ ಯಾವುದನ್ನಾದರು ಖರೀದಿ ಮಾಡುವುದು ಈ ದಿನದ ವಿಶೇಷ. ಕೆಲವು ನಂಬಿಕೆಗಳ ಪ್ರಕಾರ ಧನ ತ್ರಯೋದಶಿಯಂದು ಬಂಗಾರ ಅಥವಾ ಇತರೆ ವಸ್ತುಗಳನ್ನು ಖರೀದಿ ಮಾಡುವುದರಿಂದ ಅದು ಹದಿಮೂರು ಪಟ್ಟು ವೃದ್ಧಿಸುತ್ತದೆ ಎನ್ನಲಾಗುತ್ತದೆ. ಆದರೆ ಬೆಳ್ಳಿ ಖರೀದಿಗೆ ಈ ದಿನ ವಿಶೇಷ ಮಹತ್ವ ನೀಡಲಾಗಿದೆ. ಯಾಕೆಂದರೆ ಬೆಳ್ಳಿ ಚಂದ್ರನ ಪ್ರತೀಕ, ಚಂದ್ರ ಶೀತಲತೆಯನ್ನು ಪಸರಿಸುತ್ತಾನೆ, ಜೊತೆಗೆ ಸಂತೋಷವನ್ನು ಕರುಣಿಸುತ್ತಾನೆ,

ಧನ ತ್ರಯೋದಶಿಯ ದಿನಕ್ಕೆ ಪೌರಾಣಿಕ ಹಿನ್ನೆಲೆ ಇದೆ.
ಒಮ್ಮೆ ಲಕ್ಷ್ಮೀ ನಾರಾಯಣರು ಭೂಮಿಯಲ್ಲಿ ಸಂಚರಿಸುತ್ತ, ದಕ್ಷಿಣ ದಿಕ್ಕಿಗೆ ಬರುತ್ತಾರೆ. ಆದರೆ ಮಹಾಲಕ್ಷ್ಮಿಯನ್ನು ಅಲ್ಲಿಯೇ ನಿಲ್ಲಿಸುವ ಮಹಾ ವಿಷ್ಣು, ವಿಶೇಷ ಕಾರ್ಯ ನಿಮಿತ್ತ ಮುಂದೆ ಒಬ್ಬನೇ ಹೋಗುತ್ತಾನೆ. ಮಹಾಲಕ್ಷ್ಮಿಗೆ ಇಲ್ಲಿಂದ ಮುಂದಕ್ಕೆ ನೀನು ಬರಬೇಡ, ಇಲ್ಲಿಯೇ ಇರು ಎಂದು ಆಜ್ಞಾಪಿಸಿ ಹೊರಡುತ್ತಾನೆ. ಮಹಾಲಕ್ಷ್ಮಿ ಕುತೂಹಲ ತಡೆಯಲಾಗದೇ ಪತಿಯ ಆಜ್ಞೆಯನ್ನು ಮೀರಿ ಹೊರಟು ಬಿಡುತ್ತಾಳೆ. ಹೀಗೆ ಸಾಗುವಾಗ ಮಹಾಲಕ್ಷ್ಮಿ ಒಂದು ಹೊಲದಲ್ಲಿ ಬೆಳೆದ ಕಬ್ಬು ನೋಡಿ ಆಸೆ ಪಟ್ಟು ಅದನ್ನು ಕಿತ್ತು ತಿನ್ನುತ್ತಾಳೆ, ಜೊತೆಗೆ ಅಲ್ಲಿ ಬೆಳೆದ ಹೂವುಗಳನ್ನು ಕಿತ್ತು ಅವುಗಳಿಂದ ತನ್ನನ್ನು ಸಿಂಗಾರ ಮಾಡಿಕೊಳ್ಳುತ್ತಾಳೆ, ಆಗ ಅಲ್ಲಿಗೆ ಬರುವ ಮಹಾವಿಷ್ಣು ತನ್ನ ಮಾತನ್ನು ಮೀರಿ ಬಂದ ಲಕ್ಷ್ಮಿಯನ್ನು ಕಂಡು ಕೋಪಗೊಳ್ಳುತ್ತಾನೆ.

 

 

 

ಯಾವ ಬೆಳೆಯನ್ನು ನೀನು ತಿಂದೆಯೋ, ಅದೇ ರೈತನ ಮನೆಯಲ್ಲಿ ಇನ್ನು ಹನ್ನೆರಡು ವರ್ಷಗಳ ಕಾಲ ನೆಲೆಸು ಎಂದು ಹೇಳಿ ಹೊರಟು ಹೋಗುತ್ತಾನೆ. ಮಹಾಲಕ್ಷ್ಮಿ ಮಹಾವಿಷ್ಣುವಿನ ಆಜ್ಞೆ ಪಾಲಿಸಲು ಆ ಬಡ ರೈತನ ಮನೆಯಲ್ಲಿ ಹನ್ನೆರಡು ವರ್ಷಗಳ ಕಾಲ ನೆಲೆಸುತ್ತಾಳೆ . ಒಮ್ಮೆ ಮಹಾಲಕ್ಷ್ಮಿ ಆ ರೈತನ ಹೆಂಡತಿಗೆ ನನ್ನನ್ನು ನೀನು ವಿಧಿವತ್ತಾಗಿ ಪೂಜಿಸು, ನಿನ್ನ ಎಲ್ಲಾ ಕಷ್ಟಗಳನ್ನು ನಿವಾರಣೆಯಾಗುತ್ತವೆ, ಒಳ್ಳೆಯದನ್ನು ಮಾಡುತ್ತೇನೆ ನಿನ್ನನ್ನು ಉದ್ದರಿಸುತ್ತೇನೆ ಎಂದು ಹೇಳುತ್ತಾಳೆ. ಮಹಾಲಕ್ಷ್ಮಿಯ ಆಜ್ಞೆಯಂತೆ ರೈತನ ಪತ್ನಿ ಸಿರಿ ದೇವಿಯನ್ನು ಪೂಜಿಸುತ್ತಾಳೆ, ಪರಿಣಾಮವಾಗಿ ರೈತ ಶ್ರೀಮಂತನಾಗುತ್ತಾನೆ. ಅವನ ಮನೆಯಲ್ಲಿ ಧನ, ಧಾನ್ಯ, ಐಶ್ವರ್ಯ ತುಂಬಿ ತುಳುಕುತ್ತದೆ.ಹೀಗೆ 12 ವರ್ಷಗಳು ಕಳೆದು ಹೋಗುತ್ತದೆ, ಸಮಯ ಮುಗಿದ ಕಾರಣ ತನ್ನ ಪತ್ನಿಯನ್ನು ಕರೆದೊಯ್ಯಲು ಸಾಕ್ಷಾತ್ ಮಹಾವಿಷ್ಣು ವೈಕುಂಠದಿಂದ ರೈತನ ಮನೆಗೆ ಬರುತ್ತಾನೆ. ಆದರೆ ಮಹಾಲಕ್ಷ್ಮಿಯನ್ನು ವೈಕುಂಟಕ್ಕೆ ಕಳುಹಿಸಲು ಇಷ್ಟವಿರಲಿಲ್ಲ, ಯಾವುದೇ ಕಾರಣಕ್ಕೂ ಸಹ ಲಕ್ಷ್ಮೀದೇವಿಯನ್ನು ಹೋಗಲು ಬಿಡುವುದಿಲ್ಲ ಎಂದು ಹಠ ಹಿಡಿಯುತ್ತಾನೆ, ಆಗ ಮಹಾವಿಷ್ಣು ನಡೆದ ವೃತ್ತಾಂತವನ್ನು ವಿವರಿಸುತ್ತಾನೆ, ಈಗ ಇಲ್ಲಿ ನೆಲೆಸಿದ ಸಮಯ ಮುಗಿದಿದೆ, ಮಹಾಲಕ್ಷ್ಮಿಯನ್ನು ನನ್ನೊಡನೆ ಕಳುಹಿಸಿಕೊಡು ಎಂದು ಹೇಳುತ್ತಾನೆ, ಏನೇ ಹೇಳಿದರೂ ರೈತ ಒಪ್ಪುವುದಿಲ್ಲ, ಮಹಾಲಕ್ಷ್ಮಿ ರೈತರನ್ನು ಸಮಾಧಾನ ಮಾಡುತ್ತಾಳೆ.

ಸಾಕ್ಷಾತ್ ಲಕ್ಷ್ಮಿಯೇ ಹೇಳಿದ ಮಾತುಗಳು ಇವು “ನಾಳೆ ನಿನ್ನ ಮನೆಯನ್ನು ಶುದ್ಧಿಗೊಳಿಸಿ,ಸಂಧ್ಯಾ ಕಾಲದಲ್ಲಿ ಶುಚಿರ್ಭೂತರಾಗಿ ತುಪ್ಪದ ದೀಪ ಹಚ್ಚಿ, ಒಂದು ತಾಮ್ರದ ಚೊಂಬಿನಲ್ಲಿ ನಾಣ್ಯಗಳನ್ನು ತುಂಬಿ ನನ್ನನ್ನು ಅದರಲ್ಲಿ ಆವಾಹನೆ ಮಾಡಿ ಪೂಜಿಸಿ, ನೀವು ಹಾಗೆ ಮಾಡಿದಲ್ಲಿ ನಾನು ವರ್ಷಪೂರ್ತಿ ನಿಮ್ಮ ಮನೆಯಲ್ಲಿ ನೆಲೆಸಿರುತ್ತೇನೆ ಎಂದು ಹೇಳುತ್ತಾಳೆ. ಆನಂತರ ಬೆಳಕಿನ ಸ್ವರೂಪದಲ್ಲಿ ದಶ ದಿಕ್ಕುಗಳಲ್ಲಿಯೂ ಪ್ರಜ್ವಲಿಸಿ ಹರಡಿ ಲಕ್ಷ್ಮಿ ಮಾಯವಾಗುತ್ತಾಳೆ, ಅದರಂತೆ ಮರುದಿನ ಮಹಾಲಕ್ಷ್ಮಿಯನ್ನು ಆವಾಹನೆ ಮಾಡಿ ಪೂಜಿಸುತ್ತಾರೆ.ಮಹಾಲಕ್ಷ್ಮಿಯ ಅನುಗ್ರಹದಿಂದ ಧನ, ಧಾನ್ಯ , ಸಂಪತ್ತುಗಳನ್ನು ಪಡೆದು ಸುಖ ,ಸಂತೋಷದಿಂದ ನೂರು ವರ್ಷಗಳ ಕಾಲ ಆ ರೈತನ ಪರಿವಾರ ಬಾಳಿ ಬದುಕುತ್ತಾರೆ.ಅಂದಿನಿಂದ ಈ ಧನ ತ್ರಯೋದಶಿಯ ದಿನ ಆಚರಣೆಗೆ ಬಂದಿದೆ .ಆದ್ದರಿಂದ ಪ್ರತಿಯೊಬ್ಬರೂ ಲಕ್ಷ್ಮೀ ದೇವಿಯನ್ನು ಭಕ್ತಿ,ಶ್ರದ್ಧೆಯಿಂದ ಸಂಧ್ಯಾ ಕಾಲದಲ್ಲಿ ಆರಾಧಿಸಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top