ಮನೋರಂಜನೆ

ಈ ಕಾರಣಕ್ಕಾಗಿ ವೇದಿಕೆ ಮೇಲೆ ಗಳಗಳನೆ ಕಣ್ಣೀರಿಟ್ಟ ಸರಿಗಮಪ ಕುರಿಗಾಹಿ ಹನುಮಂತ

ಎಲ್ಲರ ಮೆಚ್ಚಿನ ಸಂಗೀತ ಕಾರ್ಯಕ್ರಮ ಸರಿಗಮಪ ಸೀಸನ್​ 17 ಶುರುವಾಗಿದೆ ,ಎಂದಿನಂತೆ ಈ ಸಲ ಕೂಡ ಒಳ್ಳೆಯ ಪ್ರತಿಭೆ ಇರುವ ಸ್ಪರ್ಧಿಗಳು ಸೆಲೆಕ್ಟ್ ಆಗಿದ್ದಾರೆ,ಆ ಸೆಲೆಕ್ಟ್ ಆಗಿರೋ ಸ್ಪರ್ಧಿಗಳಲ್ಲಿ ಒಂದು ರೇಂಜ್ ಗೆ ಫೇಮಸ್ ಹಾಗೂ ಪಾಪ್ಯುಲರ್ ಆಗಿರೋ ಸ್ಪರ್ಧಿ ಹನುಮಂತ ,ಈ ಹುಡುಗ ಯಾವುದೇ ಸಂಗೀತ ಶಾಲೆಗಳಲ್ಲಿ ಓದಿ ಸಂಗೀತವನ್ನು ಕಲಿತಿಲ್ಲ ಆದರೆ ಮುಗ್ಧ ಮನಸ್ಸಿನಿಂದ ಹಾಡಲು ಆರಂಭ ಮಾಡಿದ್ರೆ ಯಾವ ಸಿಂಗರ್​ಗೂ ಕಡಿಮೆ ಇಲ್ಲದಂತೇ ಹಾಡಿ ತೀರ್ಪುಗಾರರ ಮನಸನ್ನು ಗೆದ್ದಿದ್ದಾರೆ.ಈ ಹುಡುಗನ ಕೆಲಸ ಕುರಿ ಮೇಯಿಸೋದು ,ಬಾಲ್ಯದಿಂದಲೂ ಹನುಮಂತ ಕುರಿ ಕಾಯುವ ಕೆಲಸ ಮಾಡುತ್ತಿದ್ದಾರೆ.

ಓದಿದ್ದು ಕೇವಲ ಐದನೇ ತರಗತಿ. ಸಂಗೀತ ಕಲಿಯಲು ಯಾವುದೇ ಸಂಗೀತ ಶಾಲೆಗೂ ಹೋಗಿಲ್ಲ. ಕುರಿಗಳನ್ನ ಮೇಯಿಸುತ್ತಾ ಮೊಬೈಲಿನಲ್ಲಿ ಹಾಡು ಕೇಳುತ್ತಾ ಇಂಪಾಗಿ ಹಾಡುಗಳನ್ನ ಹಾಡುವುದನ್ನು ಕಲಿಯುತ್ತಿದ್ದನಂತೆ . ಕುರಿ ಮೇಯಿಸುತ್ತಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ ಸೀಸನ್ 15’ ಕಾರ್ಯಕ್ರಮಕ್ಕೆ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ತಾಂಡಾದ ನಿವಾಸಿ ಹನುಮಂತ ಆಯ್ಕೆಯಾಗಿದ್ದು, ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

 

 

 

ಇದೇ ಭಾನುವಾರ ಖಾಸಗಿ ವಾಹಿನಿಯಲ್ಲಿ ‘ಜೀ ಕುಟುಂಬ ಅವಾರ್ಡ್ಸ್ ‘ಕಾರ್ಯಕ್ರಮ ಪ್ರಸಾರವಾಗಿದೆ. ಈ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕಿರುತೆರೆಯಲ್ಲಿ ನಟಿಸಿ ಜನರ ಮೆಚ್ಚುಗೆಯನ್ನು ಪಡೆದಿರುವ ನಟ-ನಟಿ ಸೇರಿದಂತೆ ಕಲಾವಿದರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಜನತೆ ಮೆಚ್ಚಿದೆ ಅಚ್ಚುಮೆಚ್ಚಿನ ಸ್ಪರ್ಧಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಗೆ 5 ಮಂದಿ ನಾಮಿನೇಟ್ ಆಗಿದ್ದರು. ಆದರೆ ಕೊನೆಯಲ್ಲಿ ಸರಿಗಮಪ ಸೀಸನ್ 5ರ ಸ್ಪರ್ಧಿ ಹನುಮಂತನಿಗೆ ಪ್ರಶಸ್ತಿ ಲಭಿಸಿದೆ. ಈ ಸಂದರ್ಭದಲ್ಲಿ ಹನುಮಂತ ವೇದಿಕೆಯ ಮೇಲೆ ಹೋಗಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಅದೇ ಸಂದರ್ಭದಲ್ಲಿ ಹನುಮಂತನಿಗೆ ವಾಹಿನಿ ಒಂದು ಸರ್ಪ್ರೈಸ್ ನೀಡಿದೆ. ಆದರೆ ಆ ಸರ್ಪ್ರೈಸ್ ನೋಡಿ ಹನುಮಂತ ವೇದಿಯ ಮೇಲೆಯೇ ಕಣ್ಣೀರು ಹಾಕಿದ್ದಾರೆ.ಹಿಂದೆ ಸರಿಗಮಪ ವೇದಿಕೆಯಲ್ಲಿ ತಾಯಿಯನ್ನು ನೆನೆದು ಹನುಮಂತ ಭಾವುಕರಾಗಿದ್ದರು. ಆದ್ದರಿಂದ ಪ್ರಶಸ್ತಿಯ ಜೊತೆ ಅವರ ತಾಯಿ ಶೀಲವ್ವ ಅವರನ್ನು ಕರೆಸಲಾಗಿತ್ತು. ಆಗ ವೇದಿಕೆಯ ಮೇಲೆ ತಾಯಿಯನ್ನು ನೋಡಿ ಒಂದು ಕ್ಷಣ ಹನುಮಂತ ಮೂಕರಾಗಿ ನಿಂತು ಕಣ್ಣೀರು ಹಾಕಿದ್ದಾರೆ. ಬಳಿಕ ಹನುಮಂತನ ಆಸೆಯಂತೆ ತಮ್ಮ ಮನೆಯಿಂದ ಜೋಳದ ರೊಟ್ಟಿ ತಂದು ತಾಯಿ ಕೈಯಿಂದ ವೇದಿಕೆಯ ಮೇಲೆಯೇ ತಿನ್ನಿಸಿದ್ದಾರೆ.ಹನುಮಂತ ಜೊತೆಗೆ ವೇದಿಕೆ ಮೇಲಿದ್ದ ನಿರೂಪಕರು ಕೂಡ ಸೇರಿ ಕುಳಿತು ಅವರ ಕೈಯಿಂದ ಕೈತ್ತುತ್ತು ಸವಿದಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top