ಮನೋರಂಜನೆ

ಹಳೆಯ ನೆನಪಿಗೆ ಜಾರಿದ ಕನಸಿನ ರಾಣಿ

ಮಾಲಾಶ್ರೀಯವರು ಒಬ್ಬ ಖ್ಯಾತ ಕನ್ನಡ ನಟಿ. ಅವರು 1989ರಲ್ಲಿ ಸೂಪರ್ ಹಿಟ್ ಸಿನಿಮಾ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರವನ್ನು ಪಾರ್ವತಮ್ಮ ರಾಜ್‌ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ.ಹುಟ್ಟಿದು ಚೆನ್ನೈ ನಲ್ಲಿ ,ಇವರ ಮೂಲ ನಾಮ ದುರ್ಗಾ ,ಇವರು ಮಾಡಿರುವ ಚಿತ್ರಗಳ ಸಂಖ್ಯೆ 200 ಕ್ಕೂ ಹೆಚ್ಚು,ಮಾಲಾಶ್ರೀ ಒಂದು ಕಾಲದಲ್ಲಿ ಎಲ್ಲರ ಫೇವರಿಟ್ ನಟಿ ,ಆ ಕಾಲದಲ್ಲಿ ಕನಸಿನ ರಾಣಿ ಅಂತಾನೇ ಫೇಮಸ್ ಈಕೆ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ ,ಎಲ್ಲ ಪ್ರಮುಖ ನಟರ ಜೊತೆ ಅಭಿನಯ ಮಾಡಿದ ಕೀರ್ತಿ ಮಾಲಾಶ್ರೀ ಯವರಿಗೆ ಸೇರುತ್ತದೆ ,ಈಗಿನ ಹೀರೋಗಳಾದ ಗಣೇಶ್ ಹಾಗೂ ಕಿಚ್ಚ ಸುದೀಪ್ ರಾವ್ರ ಒಂದು ಕಾಲದ ಕ್ರಶ್ ಮಾಲಾಶ್ರೀ ಯವರಂತೆ .ಹಿಂದೆ ಎಲ್ಲ ತರಹದ ಪಾತ್ರಗಳನ್ನು ನೀರು ಕುಡಿದಂತೆ ಮಾಡುತಿದ್ದರಂತೆ ಮಾಲಾಶ್ರೀ .ಮದುವೆಯ ನಂತರ ಸಿನಿ ಜೀವನಕ್ಕೆ ಸ್ವಲ್ಪ ವರ್ಷಗಳ ಕಾಲ ಫುಲ್ ಸ್ಟಾಪ್ ಇಟ್ಟು ಮತ್ತೆ ಸಿನಿಮಾಗೆ ದುರ್ಗಾ ಎಂಬ ಆಕ್ಷನ್ ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡಿದರು.

 

 

 

ಈಗ ಹೆಚ್ಚಿಗೆ ಅವರು ಆಕ್ಷನ್ ಚಿತ್ರಗಳಲ್ಲಿ ಮಾಡುತ್ತಿದ್ದಾರೆ ಈಗಲೂ ಅವರ ಅಭಿನಯ ಚತುರತೆ ಸ್ವಲ್ಪ ಕೂಡ ಬದಲಾಗಿಲ್ಲ.ಕನಸಿನ ರಾಣಿ ಮಾಲಾಶ್ರೀ ಈಗ ಸಿನಿಮಾ ಹಾಗೂ ಪರ್ಸನಲ್ ಲೈಫ್ ಎರಡನ್ನು ಸಮವಾಗಿ ನೋಡುತ್ತಿದ್ದಾರೆ ,ಮಾಲಾಶ್ರೀ ಯವರು ,ಯಾಕೋ ಹಳೆ ಮೆಲುಕಿಗೆ ಜಾರಿದಂತಿದ್ದಾರೆ.ಹೌದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಳೆಯ ಫೋಟೋವೊಂದನ್ನು ಹಂಚಿಕೊಂಡು ಖುಷಿ ಪಟ್ಟಿದ್ದಾರೆ.ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಹದಿಹರೆಯದಲ್ಲಿದ್ದ ವೇಳೆಯಲ್ಲಿ ಅವರ ಜತೆಗೆ ತೆಗೆಸಿಕೊಂಡ ಫೋಟೋವೊಂದನ್ನು ಅಪ್‌ಲೋಡ್ ಮಾಡಿದ್ದಾರೆ ಮಾಲಾಶ್ರೀ. ಚಿತ್ರದಲ್ಲಿ ಮಾಲಾಶ್ರೀ ತಮ್ಮ ಎಳೆಯ ಕಂದ ಆರ್ಯನ್ ಅನ್ನು ತೊಡೆಯಲ್ಲಿ ಕೂರಿಸಿಕೊಂಡಿದ್ದರೆ, ಪಕ್ಕದಲ್ಲಿ ಪುನೀತ್ ಕುಳಿತಿದ್ದಾರೆ.ಚಿತ್ರವನ್ನು ಕಂಡು ಮಾಲಾಶ್ರೀ ಹಾಗೂ ಪುನೀತ್ ಇಬ್ಬರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಹಳೆ ಮೆಲುಕಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top