ಮನೋರಂಜನೆ

ಕೊನೆಗೂ ಮರಳಿ ಮಣ್ಣೆಗೆ,ಈ ಸ್ಟಾರ್ ನಟನಿಗೆ ಜೋಡಿಯಾದ ರಶ್ಮಿಕಾ

ಕಿರಿಕ್ ಪಾರ್ಟಿ ಎಂಬ ‘ಕನ್ನಡ’ ಸಿನಿಮಾ ಮೂಲಕವೇ ನೇಮು ಫೇಮು ಗಳಿಸಿಕೊಂಡು ಆನಂತರ ‘ಅಪ್ಪಟ ತೆಲುಗು’ ಹುಡುಗಿಯಂತೆ ಮಿಂಚುತ್ತಿರುವಾಕೆ ರಶ್ಮಿಕಾ ಮಂದಣ್ಣ. ಒಂದೇ ಒಂದು ಚಿತ್ರದ ಮೂಲಕ ನಂಬರ್ ಒನ್ ನಟಿಯರನ್ನೇ ಮೀರಿಸುವಂತೆ ಈಕೆ ಮಿರುಗಿದ ರೀತಿ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ಆ ನಂತರದಲ್ಲಿ ಕನ್ನಡದ ದೊಡ್ಡ ದೊಡ್ಡ ಸ್ಟಾರ್’ಗಳ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದ ಕಿರಿಕ್ ಹುಡುಗಿ ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಬ್ಯುಸಿಯಾಗಿದ್ದಾಳೆ.ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ನಟಿಸಿದ ‘ಗೀತಾ ಗೋವಿಂದಂ’ ಚಿತ್ರ ಬ್ಲಾಕ್‍ಬಸ್ಟರ್ ಹಿಟ್ ಆಗಿದೆ,ಗೀತಾ ಗೋವಿಂದಂ ಸಿನಿಮಾದಲ್ಲಿ ವಿಜಯ್ ಹಾಗೂ ರಶ್ಮಿಕಾ ಜೊತೆಗಿನ ಕಾಂಬಿನೇಷನ್’ಗೆ ತೆಲುಗು ಮಂದಿ ಫಿದಾ ಆಗಿದ್ದಾರೆ

ಈಗ ಸ್ಯಾಂಡಲ್‍ವುಡ್ ಮತ್ತು ಟಾಲಿವುಡ್ ನ ಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಫ್ಯಾನ್ ಫಾಲೋಯಿಂಗ್ ದಿನೇ ದಿನೇ ಗಗನ ಮುಟ್ಟುತ್ತಿದೆ,ಸಾಕಷ್ಟು ಅಭಿಮಾನಿಗಳ ಬಳಗವನ್ನೇ ಹೊಂದಿರುವ ರಶ್ಮಿಕಾಗೆ ಹುಡುಗರು ಮಾತ್ರವಲ್ಲಾ ಹುಡುಗಿಯರು ಕೂಡ ರಶ್ಮಿಕಾಗೆ ಫುಲ್ ಫಿದಾ ಆಗಿದ್ದಾರೆ ,ಈ ನಡುವೆಯ ರಶ್ಮಿಕಾಳ ಫ್ಯಾಷನೆಬಲ್ ಲುಕ್​, ಸ್ಟೈಲ್​ಗೆ, ಸ್ಮೈಲ್​ಗೆ ಬಿದ್ದವರ ಸಂಖ್ಯೆ ಏನು ಕಮ್ಮಿ ಇಲ್ಲ.ಈ ನಡುವೆ ಹೆಚ್ಚು ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಯಾಗಿದ ರಶ್ಮಿಕಾ ಈಗ ಮತ್ತೆ ಕೊನೆಗೂ ತವರಿನತ್ತ ಸ್ಯಾಂಡಲ್ವುಡ್ ಕಡೆ ಮುಖ ಮಾಡಿದ್ದಾರೆ .

 

 

 

ಕನ್ನಡದ ನಿರ್ದೇಶಕರೊಬ್ಬರು ಮತ್ತೆ ರಶ್ಮಿಕಾರನ್ನ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೇ ಈ ಬಾರಿ ಆಕೆ ಕನ್ನಡದಲ್ಲಿ ಯಾರ ಜೊತೆ ನಟಿಸ್ತಾ ಇದ್ದಾರೆ ಗೊತ್ತಾ.ಅದು ಬಿಗ್​ ಬಜೆಟ್​ ಸಿನಿಮಾ. ಬಹು ನಿರೀಕ್ಷಿತಾ ಚಿತ್ರ. ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಸಿನಿಮಾ, ಆ್ಕ್ಷನ್​ ಪ್ರಿನ್ಸ್​ ಧೃವಾ ಸರ್ಜಾ ಅವರ ‘ಪೊಗರು’ಗಾಗಿ ರಶ್ಮಿಕಾ ಮತ್ತೆ ಕನ್ನಡಕ್ಕೆ ಹಿಂದಿರುಗಿದ್ದಾರೆ.ಧ್ರುವ ಸರ್ಜಾರ ಪೊಗರು ಸಿನಿಮಾದ ಶೂಟಿಂಗ್​​​​ನ ಮೊದಲ ಶೆಡ್ಯುಲ್​ ಮುಗಿಸಿ, ಎರಡನೇ ಶೆಡ್ಯೂಲ್​ಗೆ ಬ್ರೇಕ್​ ನೀಡಿತ್ತು ಸಿನಿಮಾ ಟೀಮ್​. ಈಗ 2ನೇ ಶೆಡ್ಯೂಲ್​ ಶೂಟಿಂಗ್​ ಇದೇ ತಿಂಗಳು 20ರಿಂದ ಆರಂಭವಾಗಲಿದ್ದು, ರಶ್ಮಿಕಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ನಂದ ಕಿಶೋರ್​ ಆ್ಯಕ್ಷನ್​ ಕಟ್​ ಹೇಳ್ತಿರೋ ಪೊಗರು ಸಿನಿಮಾಕ್ಕೆ ಬಿ.ಎನ್​ ಗಂಗಾಧರ್​​​ ಹಣ ಹಾಕ್ತಾ ಇದ್ದಾರೆ. ಪೊಗರು ಸಿನಿಮಾದ ಮತ್ತೊಂದು ವಿಶೇಷ ಅಂದ್ರೆ, ಈ ಸಿನಿಮಾಕ್ಕೆ ಕಥೆ ಬರೆದಿರೋದು ಆ್ಯಕ್ಷನ್​ ಕಿಂಗ್​ ಅರ್ಜುನ್​​ ಸರ್ಜಾ ಅವ್ರು. ಒಟ್ಟಿನಲ್ಲಿ ರಶ್ಮಿಕಾ ಮಾಡಿದ್ದು ಕೆಲವೇ ಸಿನಿಮಾ ಆದ್ರೂ ಎಲ್ಲಾ ಟಾಪ್​​ ಸ್ಟಾರ್​​ಗಳ ಜೊತೆಗೆ ಮಿಂಚ್ತಾ ಇದ್ದಾರೆ. ರಶ್ಮಿಕಾ ಮಂದಣ್ಣ -ಧೃವಾ ರ ಕಾಂಬಿನೇಷನ್​ ವರ್ಔಟ್​ ಆದ್ರೆ ಸಿನಿ ರಸಿಕರಿಗೆ ಹಬ್ಬ ಖಂಡಿತಾ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top