ಮನೋರಂಜನೆ

ರಾಜಮೌಳಿ- ರಾಮ್ ಚರಣ್- ಜೂ.ಎಂಟಿಆರ್ ಕಾಂಬಿನೇಷನ್’ನ ಮೆಗಾ ಚಿತ್ರಕ್ಕೆ ಮುಹೂರ್ತ ಫಿಕ್ಸ್.

ಭಾರತೀಯ ಚಿತ್ರರಂಗದ ಅತ್ಯುತ್ತಮ ನಿರ್ದೇಶಕ ಎನಿಸಿಕೊಂಡಿರುವ ಜಕ್ಕಣ್ಣ ಎಂದೇ ಹೆಸರಾಗಿರುವ ಎಸ್.ಎಸ್. ರಾಜಮೌಳಿ ಬಾಹುಬಲಿ ಎಂಬ ಮಹೋನ್ನತ ಸಿನಿಮಾದ ಮೂಲಕ ಇಂಡಿಯಾದ ಸಿನಿಮಾರಂಗವನ್ನು ಇಡೀ ಜಗತ್ತಿಗೇ ಪರಿಚಯಿಸಿದ್ದ ವಿಚಾರ ಈಗ ಇತಿಹಾಸ. ಇಂಥ ರಾಜಮೌಳಿಯವರು ಬಾಹುಬಲಿ ಸರಣಿಯ ನಂತರ ಮುಂದೆ ಯಾವ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಸಿನಿಪ್ರಿಯರ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

 

 

ಬಾಹುಬಲಿ ಭರ್ಜರಿ ಯಶಸ್ಸಿನ ನಂತರ ರಾಜಮೌಳಿ ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾಕ್ಕೆ ಕೈ ಹಾಕಿದ್ದು ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಯಂಗ್ ಟೈಗರ್ ಜೂನಿಯರ್ NTR ಒಟ್ಟಾಗಿ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ರಾಜಮೌಳಿ ಪ್ರಕಟಿಸಿದ್ದರು. ಆಗಲೇ ಈ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿತ್ತು. ಅದಾದ ನಂತರ ಈ ಸಿನಿಮಾದ ಬಗ್ಗೆ ಸುದ್ದಿಯೇ ಇರಲಿಲ್ಲ.

ಆದರೆ ಈಗ ರಾಜಮೌಳಿ ಈ ಸಿನಿಮಾದ ಚಿತ್ರೀಕರಣಕ್ಕೆ ಮುಹೂರ್ತ ನಿಗದಿ ಮಾಡಿದ್ದಾರೆ. ಹೌದು ಇದೇ ತಿಂಗಳ 11ರಂದು ಬೆಳಿಗ್ಗೆ 11ಕ್ಕೆ ಚಿತ್ರಕ್ಕೆ ಕಿಕ್​ ಸ್ಟಾರ್ಟ್​ ಸಿಗಲಿದೆ ಎಂದು ಪ್ರಕಟಿಸಿದ್ದಾರೆ. ಇಲ್ಲಿದೆ ಅದರ ವಿಡಿಯೋ.

ಈಗಾಗಯೇ ಚಿತ್ರದ ಮೋಷನ್ ಫಿಕ್ಚರ್ ಬಿಡುಗಡೆಗೊಂಡಿದ್ದು ಅದರಲ್ಲಿ ‘#RRR’ ಎನ್ನುವ ಅಕ್ಷರಗಳು ಮಾತ್ರ ಕಾಣಿಸಿದ್ದು ಇದು ಚಿತ್ರದ ಶೀರ್ಷಿಕೆಯಲ್ಲ ಬದಲಾಗಿ ರಾಜಮೌಳಿ, ರಾಮ್ ಚರಣ್ ಹಾಗೂ ಜ್ಯೂ. ಎನ್.ಟಿ.ರಾಮ್ ರಾವ್ ಅವರ ಹೆಸರುಗಳ ಮೊದಲ ಅಕ್ಷರಗಳಾಗಿವೆ. ಚಿತ್ರಕ್ಕೆ ಯಾವ ಶೀರ್ಷಿಕೆ ಇಡಲಾಗಿದೆ ಎಂಬುದನ್ನು ಇನ್ನೂ ಬಹಿರಂಗ ಗೊಳಿಸಿಲ್ಲ.

ಉಳಿದಂತೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರೇ ಈ ಚಿತ್ರಕ್ಕೂ ಕೂಡ ಕಥೆ ಬರೆದಿದ್ದು ಎಂದಿನಂತೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಲಿದ್ದಾರಂತೆ.ಚಿತ್ರ ಈ ವರ್ಷದ ಅಕ್ಟೋಬರ್ ನಲ್ಲಿ ಅದ್ದೂರಿ ಮುಹೂರ್ತದ ಮೂಲಕ ಸೆಟ್ಟೇರಲಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top