ಭವಿಷ್ಯ

ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಮನುಷ್ಯನ ಗುಳಿ ಕೆನ್ನೆ ಅವನ ಗುಣಲಕ್ಷಣಗಳನ್ನು ಚೆನ್ನಾಗಿ ಹೇಳುತ್ತವೆಯಂತೆ

ಗುಳಿ ಕೆನ್ನೆಗಳ ಬಗ್ಗೆ ನಿಮಗೆಷ್ಟು ಗೊತ್ತು ? ಗುಳಿ ಕೆನ್ನೆಗಳ ಅಸಲಿ ರಹಸ್ಯವೇನು ಗೊತ್ತಾ ?

 

 

 

ತೊಂಬತ್ತು  ಪ್ರತಿಶತ ಜನರಿಗೆ ಈ ವಿಷಯ ಗೊತ್ತಿರುವುದಿಲ್ಲ.ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ ಇಪ್ಪತ್ತು  ಪ್ರತಿಶತ ಮಂದಿಗೆ ಗುಳಿ ಕೆನ್ನೆಗಳಿರುತ್ತವೆ. ತಲೆಯಲ್ಲಿರುವ “ಗ್ಜಿಮಾಟಿಕಸ್” ಎಂಬ ಒಂದು ಸ್ನಾಯುವಿನಿಂದಾಗಿ ಈ ತರಹ ಗುಳಿಗಳು ಬೀಳುತ್ತವಂತೆ. ವಾಸ್ತವದಲ್ಲಿ ಮುಖದ ವಿವಿಧ ಹಾವಭಾವಗಳನ್ನು ಬಿಂಬಿಸುವ “ಗ್ಜಿಮಾಟಿಕಸ್” ಎಂಬ ಸ್ನಾಯು ಸಹಕಾರಿಯಂತೆ.ಕೆಲವರಲ್ಲಿ ಕೆನ್ನೆಯೊಳಗೆ ಗ್ಜಿಮಾಟಿಕಸ್ ಸ್ನಾಯುವನ್ನು ಹೊಂದಿಕೊಂಡು ಇರುವ ಒಂದು ನರ ಒಳಭಾಗದೊಳಕ್ಕೆ ಆಕರ್ಷಿಸಲ್ಪಡುತ್ತದೆ….. ಮೇಲೆ ಗುಳಿ ಏರ್ಪಡುತ್ತದೆ. ನಕ್ಕಾಗ ಹಾಗೂ ಮತ್ತಷ್ಟು ಸ್ಪಷ್ಟವಾಗಿ ಕಾಣಿಸುತ್ತದೆ.

ಗುಳಿ ಕೆನ್ನೆಯ ವ್ಯಕ್ತಿಗಳ ಗುಣಗಳು:ಇವರು ಬಹುದೊಡ್ಡ ವ್ಯಕ್ತಿಗಳಾಗುತ್ತಾರೆ , ಎಲ್ಲರನ್ನು ತನ್ನೆಡೆಗೆ ಸುಲಭವಾಗಿ ಸೆಳೆಯುತ್ತಾರೆ ,ನಂಬಿಕೆಗೆ ಪಾತ್ರರು, ವಿಶ್ವಾಸವಂತರೂ , ಅವರಿಗೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಾರೆಪ್ರತಿ ಕ್ಷಣ ಆನಂದವಾಗಿರಲು ಪ್ರಯತ್ನಿಸುತ್ತಾರೆ, ಸಹಾನುಭೂತಿಯುಳ್ಳವರು , ಇತರರಿಗೆ ಸಹಾಯ ಹಸ್ತ ಚಾಚುವ ಮನಸ್ಥಿತಿಯನ್ನು  ಉಳ್ಳವರಾಗಿರುತ್ತಾರೆ , ಆಗಾಗ್ಗೆ ತಮಾಷೆಗಳನ್ನು ಸಹ ತುಂಬಾ ಗಾಢವಾಗಿ ತೆಗೆದುಕೊಳ್ಳುತ್ತಾರೆ.

 

 

 

ಗುಳಿ ಕೆನ್ನೆಗಳ ಬಗ್ಗೆ ಮತ್ತಷ್ಟು ಆಸಕ್ತಿದಾಯಕ ವಿಷಯಗಳು:ಇತ್ತೀಚೆಗೆ ಕೆಲವರು ತಮ್ಮ  ಕೆನ್ನೆಗಳಲ್ಲಿ ಗುಳಿ ಮೂಡಿಸಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾರೆ.ಚಿತ್ರರಂಗದಲ್ಲಿ ಹಾಗೂ ಸ್ಟೇಜ್ ಶೋಗಳನ್ನು ನೀಡುವವರಿಗೆ ಹೆಚ್ಚಾಗಿ ಗುಳಿ ಕೆನ್ನೆಗಳಿರುತ್ತವೆ. ಯುವಕರಿಗಿಂತ ಯುವತಿಯರೇ ಹೆಚ್ಚಾಗಿ ಗುಳಿ ಕೆನ್ನೆ ಯುಳ್ಳವರಾಗಿರುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top