fbpx
ಮನೋರಂಜನೆ

47 ದಾಟಿದರು ಸಿಂಗಲ್,ಕೊನೆಗೂ ಅದರ ಹಿಂದಿನ ಗುಟ್ಟು ಬಿಚ್ಚಿಟ್ಟ ನಟಿಮಣಿ ಟಬೂ

ಭಾರತ ಚಿತ್ರರಂಗ ಕಂಡ ಖ್ಯಾತ ನಟಿ ಟಬೂ, 4 ನವೆಂಬರ್ 1971 ಹೈದರಾಬಾದ್ ತೆಲಂಗಾಣದಲ್ಲಿ ಒಂದು ಮುಸ್ಲಿಂ ಮನೆತನದಲ್ಲಿ ಜನ್ಮಿಸುತ್ತಾರೆ,ಇವರ ಮೂಲ ಹೆಸರು ತಬಸ್ಸುಮ್ ಫಾತಿಮಾ ಹಶ್ಮಿ,ಇವರ ತಂದೆ ತಾಯಿ ಅಮಲ್ ಹಶ್ಮಿ ಹಾಗೂ ರಿಜ್ವನ.ಚಿಕ್ಕವಯಸ್ಸಿನಲ್ಲಿಯೇ ಇವರ ತಂದೆ -ತಾಯಿ ವಿಚ್ಛೇದನ ಪಡೆಯುತ್ತಾರೆ ಇದರ ಪರಿಣಾಮ ಇಲ್ಲಿಯವರೆಗೂ ತಂದೆಯ ಮುಖ ನೋಡಿಲ್ಲವಂತೆ ಈ ನಟಿ ತನಗೆ ಚಿಕ್ಕವಳಿದ್ದಾಗ ಸೀಗಬೇಕಿದ್ದ ಪ್ರೀತಿ, ಕಾಳಜಿ ಸಿಗದಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆಟಬೂ.ಇವರ ತಾಯಿ ಸ್ಕೂಲ್ ಟೀಚರ್ ತಾಯಿ,ಅಜ್ಜಿ ಹಾಗೂ ಅಜ್ಜನ ಆಸರೆಯಲ್ಲಿ ಬೆಳೆದರು ಟಬೂ,ಹುಟ್ಟಿದು ಹೈದರಾಬಾದ್ ಸ್ಕೂಲ್ ಶಿಕ್ಷಣ ಪಡೆದದು ಕೂಡ ಅಲ್ಲೇ ನಂತರ 1983 ರಲ್ಲಿ ಮುಂಬೈ ಗೆ ತೆರಳುತ್ತಾರೆ ಟಬೂ ಅಲ್ಲೇ ಅವರ ಕಾಲೇಜು ಶಿಕ್ಷಣ ಪಡೆಯುತ್ತಾರೆ.ನಂತರ ಸಿನಿ ಬದುಕಿಗೆ ಪಾದಾರ್ಪಣೆ ಮಾಡುತ್ತಾರೆ ,ಇವರಿಗೆ ಟಬೂ ಮಾಡಿರುವ ಚಿತ್ರಗಳ ಒಟ್ಟು ಸಂಖ್ಯೆ 100 ಕ್ಕೂ ಹೆಚ್ಚು ,ತೆಲುಗು ,ಹಿಂದಿ ,ತಮಿಳು ಇಂಗ್ಲಿಷ್, ಮಲಯಾಳಂ, ಮರಾಠಿ ಹಾಗೂ ಬಂಗಾಳಿ ಭಾಷೆಗಳಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ.ಇವರಿಗೆ ಅವರು ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ,2011ರಲ್ಲಿ ಪದ್ಮಶ್ರಿ ಪ್ರಶಸ್ತಿ ಇವರ ಮೂಡಿಗೇರಿತು,ಒಟ್ಟು 6 ಫಿಲ್ಮಫೇರ್​ ಪ್ರಶಸ್ತಿಗಳು ಇವರ ಕೈಸೇರಿವೆ.

 

 

 

ಚಿಕ್ಕವಯಸ್ಸಿನಲ್ಲಿಯೇ ತಂದೆ -ತಾಯಿ ವಿಚ್ಛೇದನ ಪಡೆದ ಪರಿಣಾಮ ಮದುವೆ ಬಗ್ಗೆಯೇ ಜಿಗುಪ್ಸೆಗೊಂಡಿದ್ದರಂತೆ ಟಬೂ,ಆದ್ರೆ ಬಣ್ಣದ ಲೋಕ ಇವರನ್ನು ಅದೆಷ್ಟೊ ಸಂಬಂಧಗಳ ಸರಮಾಲೆಯಲ್ಲಿ ಜೋಡಿಸಿತು ಪ್ರೇಮ್ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ಸಹನಟ ಸಂಜಯ್​ ಕಪೂರ್​ ಜೊತೆ ಪ್ರೇಮಾಂಕುರವಾಗಿತ್ತಂತೆ. ಆದರೆ ಇದು ಕೊನೆತನಕ ಉಳಿಯಲಿಲ್ಲ.ನಂತರ ಇವರ ಲೈಫ್​ಗೆ ಎಂಟ್ರಿ ಕೊಟ್ಟಿದ್ದೇ ಸೌತ್​ ಇಂಡಸ್ಟ್ರಿ ಸ್ಟಾರ್​ ನಟ ಅಕ್ಕಿನೇನಿ ನಾಗಾರ್ಜುನ್​ ಮದುವೆಯಾದ ನಂತರವೂ ಟಬೂ ಜೊತೆ 10 ವರ್ಷಗಳ ಕಾಲ ಡೇಟಿಂಗ್​ ಮಾಡಿದ್ದ ನಟ.

ಆದರೆ ಕೊನೆಗೆ ಅಮಲಾ ಹಾಗೂ ನಾಗಾರ್ಜುನ್​ ಅವರ ನಡುವಿನ ಪ್ರೀತಿಯಿಂದಾಗಿ ತಾನಾಗಿಯೇ ಹಿಂದೆ ಸರಿದರು ಟಬೂ ,ಸಣ್ಣ ವಯಸ್ಸಿನಲ್ಲಿಯೇ ಹೆತ್ತವರ ಪ್ರೀತಿ ಕಾಣದ ಚೆಲುವೆಗೆ ಬದುಕಿನುದ್ದಕ್ಕೂ ಒಬ್ಬರನ್ನು ನಂಬಿ ಕೈಹಿಡಿಯುವುದು ಕಷ್ಟವಾಯಿತಂತೆಆದರೂ 40ರವರೆಗೂ ಗಾಸಿಪ್, ​ರಿಲೇಶನ್​ಶಿಪ್​ನಲ್ಲಿದ್ದರು. ಕೊನೆಗೆ ಮದುವೆ ನನ್ನಿಂದಾಗದು ಎಂಬ ಕಠಿಣ ನಿರ್ಧಾರಕ್ಕೆ ಬಂದರುಸದ್ಯ ಮದುವೆಯಾಗುವ ವಿಚಾರಕ್ಕೆ ದಿ ಎಂಡ್ ಹೇಳಿ ಸದ್ಯ ಸಿನಿ ಕರಿಯರ್​ ಜೊತೆ ಜೊತೆಗೆ ಫ್ರೆಂಡ್ಸ್​ ಫ್ಯಾಮಿಲಿಯೊಂದಿಗೆ ಜೀವನ ಕಳೆಯುತ್ತಿದ್ದಾರೆ2019ರಲ್ಲಿ ಭಾರತ್ ಚಿತ್ರದ ಮೂಲಕ ಮತ್ತೆ ಹೊಸ ಕಮ್​ ಬ್ಯಾಕ್​ ಮಾಡಲಿರುವ ಬ್ಯೂಟಿಫುಲ್​ ನಟಿ ಟಬೂ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top