ಮನೋರಂಜನೆ

ಬಹುಭಾಷಾ ನಟಿ ಸಿತಾರಾ ಈವರೆಗೂ ಮದುವೆಯಾಗಿಯೇ ಇಲ್ಲ- ಕಾರಣವೇನು ಗೊತ್ತಾ?

ತೊಂಬತ್ತರ ದಶಕದಲ್ಲಿ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿದ್ದವರು ಬಹುಭಾಷಾ ನಟಿ ಸಿತಾರಾ. ಅಂದವಾದ ಮುಖ, ಸೆಳೆಯುವ ಕಂಗಳು, ಮಿಂಚಿನ ನೋಟ, ಕಿರುನಗೆಯ ಮೂಲಕವೇ ಸಾವಿರಾರು ಯುವಕರ ಗುಂಡಿಗೆಗೆ ಗುಂಡಿಟ್ಟಿದ್ದ ಸಿತಾರಾ ಈಗಲೂ ಒಂಟಿಯಾಗಿಯೇ ಇದ್ದಾರೆ ಎನ್ನುವ ವಿಷಯ ಅನೇಕರಿಗೆ ಗೊತ್ತಿರುವುದಿಲ್ಲ. ಹೌದು, 42ವರ್ಷ ವಯಸ್ಸಿನ ಸಿತಾರಾ ಇಲ್ಲಿಯವರೆಗೂ ಮದುವೆಯಾಗದೆ ಹಾಗೆಯೇ ಉಳಿದುಕೊಂಡಿದ್ದಾರೆ.. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರೂ ಮದುವೆಯಾಗದೆ ಹಾಗೆ ಉಳಿಯಲು ಕಾರಣವೇನು ಅಂತೀರಾ ಮುಂದೆ ಓದಿ.

ಆ ಸಮಯದಲ್ಲಿ ಭಾರತದ ಅತಿ ಸುಂದರ ನಟಿಯರಲ್ಲಿ ಸಿತಾರಾ ಕೂಡ ಒಬ್ಬಳು, ಸಿನಿಮಾ ಕ್ಷೇತ್ರದಲ್ಲಿ ಇವರು ಸೃಷ್ಟಿಸಿದ್ದ ಸಂಚಲನದಿಂದಾಗಿ ಯಾವುದೇ ಸಾಲು ಸಾಲು ಆಫರ್ ಗಳು ಹುಡುಕಿಕೊಂಡು ಬರುತ್ತಿದ್ದವು. ಸೌತ್ ಸಿನಿ ದುನಿಯಾದ ಬಿಗ್ ಸ್ಟಾರ್ ಹೀರೋಗಳ ಜೊತೆಯಲ್ಲೆಲ್ಲಾ ನಾಯಕಿಯಾಗಿ ಬಣ್ಣ ಹಚ್ಚಿರುವ ಜೀವನದಲ್ಲಿ ಕೆಲವು ಆಕಸ್ಮಿಕ ಕಹಿ ಘಟನೆಗಳು ಕೂಡ ನಡೆದಿವೆ.. ಅಷ್ಟಕ್ಕೂ ತಾವು ಇಲ್ಲಿಯವರೆಗೂ ಮದುವೆಯಾಗದೇ ಉಳಿದುಕೊಂಡಿರುವುದು ಯಾಕೆ? ಮದುವೆಯಾಗದಿರಲು ಕಾರಣವೇನು? ಎಂಬುದನ್ನು ಸ್ವತಃ ಅವರೇ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ..

 

 

ಸಿತಾರಾ ಅವರಿಗೆ 2010 ರಲ್ಲೇ ಮದುವೆಯಾಗಿದೆ ಎಂಬ ಸುದ್ದಿ ಹೊರಬಂದಿತ್ತು, ಆದರೆ ಅದು ಸುಳ್ಳು ಎಂಬ ವಿಚಾರ ಕೂಡ ಸಂದರ್ಶನದ ಮೂಲಕವೇ ಬಹಿರಂಗಗೊಂಡಿದೆ.

ಬಣ್ಣದ ಲೋಕದಲ್ಲಿ ಸ್ಟಾರ್ ಹೀರೋಯಿನ್ ಆಗಿ ನೆಲೆಯೂರಿದ್ದ ವೇಳೆ ಸಿತಾರಾಗೆ ನಟ ಮುರುಳಿ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಮುರುಳಿ ಅಕಾಲಿಕವಾಗಿ ನಿಧಾನವಾದಾಗ ಸಿತಾರಾ ಡಿಪ್ರೆಶನ್’ಗೆ ತುತ್ತಾಗಿದ್ದರಂತೆ.. ಚೆನ್ನಾಗಿ ಇದ್ದ ಮುರುಳಿ ಸತ್ತು ಮಲಗಿದ್ದನ್ನು ನೋಡಿದ್ದ ಸಿತಾರಾ ಜೀವನ ಇಷ್ಟೇನಾ ಎಂಬ ಜಿಗುಪ್ಸೆ ಮೂಡಿತ್ತಂತೆ.. ಮುರಳಿ ಅವರ ಸಾವಿನ ನೋವಿನಿಂದ ಹೊರಬರಲು ಸಿತಾರಾ ಅವರಿಗೆ ವರ್ಷಗಳೇ ಬೇಕಾಗಿದ್ದವಂತೆ. ಅದೇ ಸಮಯದಲ್ಲೇ ಸಿತಾರಾ ಅವರ ತಂದೆ ಕೂಡ ನಿಧರಾಗಿದ್ದರಾಗಿದ್ದಾರೆ. ಇದು ಅವರ ಮನಸ್ಸಿಗೆ ಮತ್ತಷ್ಟು ನೋವನ್ನುಂಟುಮಾಡಿತ್ತಂತೆ. ಈ ಎಲ್ಲಾ ಘಟನೆಗಳ ನಡುವೆ ಸಿತಾರಾ ಅವರಿಗೆ ಮದುವೆಯ ಬಗ್ಗೆ ಆಲೋಚನೆ ಬರಲೇ ಇಲ್ಲವಂತೆ.

ಸಿತಾರಾ ಮದುವೆಯಾಗುವುದಿಲ್ಲವೇ?
“ನಾನು ಈಗಲೂ ಸಿಂಗಲ್ ಆಗಿಯೇ ಇದ್ದೇನೆ, ಹಾಗಂತ ಮದುವೆಯಾಗಲು ಇದು ಸೂಕ್ತ ಸಮಯವಲ್ಲ. ಮದುವೆಯಾಗಬೇಕಲ್ಲಾ ಎಂಬ ಕಾರಣಕ್ಕೆ ಒಬ್ಬ ವ್ಯಕ್ತಿಯನ್ನು ಮದುವೆಯಾಗಲು ನನ್ನಿಂದ ಸಾಧ್ಯವಿಲ್ಲ.. ಮದುವೆಯಾಗಲು ಈತನೇ ಸರಿಯಾದ ವ್ಯಕ್ತಿ ಎಂದು ನನ್ನ ಮನಸ್ಸು ನನಗೆ ಹೇಳಬೇಕು ಅಂತವರು ಸಿಗಬೇಕು.. ಹಾಗೊಮ್ಮೆ ನಾನು ಮದುವೆಯಾದರೆ, ನನ್ನ ಸಹೋದರ ಮತ್ತು ತಾಯಿ ಹೆಚ್ಚು ಸಂತೋಷಪಡುತ್ತಾರೆ.” ಎಂದು ಸಿತಾರಾ ಹೇಳಿದ್ದಾರೆ.

ಸಿತಾರಾ ಪ್ರೀತಿಯಲ್ಲಿ ಬಿದ್ದಿದ್ದಾರಾ?
“ನಾನು ಪ್ರೀತಿಯಲ್ಲಿ ಬಿದ್ದಿದ್ದೆ. ಆ ಸಮಯವನ್ನ ನನ್ನ ಜೀವನದಲ್ಲೇ ಮರೆಯಲಾಗದು.. ಆದರೆ ಆ ವಿಷಯವನ್ನು ನಾನು ಖಾಸಗಿಯಾಗಿ ಇರಿಸಿಕೊಳ್ಳಲು ಬಯಸುತ್ತೇನೆ, ಹಾಗಾಗಿ ಸಾರ್ವಜನಿಕವಾಗಿ ಅದನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top