fbpx
ದೇವರು

ಅತಿ ಶ್ರೇಷ್ಠವಾದ ಧನ ತ್ರಯೋದಶಿಗೂ ಯಮ ಧರ್ಮರಾಜನಿಗೂ ಇರುವ ನಂಟೇನು,ಯಮ ಧರ್ಮರಾಜ ಈ ಒಂದು ದಿನಕ್ಕೆ ಹೆದರುವುದಾದರೂ ಯಾಕೆ ಗೊತ್ತಾ

ಯಮ ಧರ್ಮರಾಜನಿಗೂ ಧನ ತ್ರಯೋದಶಿಗೂ ಇರುವ ನಂಟು ಏನು ? ಯಮ ಏಕೆ ಈ ಒಂದು ದಿನಕ್ಕೆ ಹೆದರುತ್ತಾನೆ ?
ಧನತ್ರಯೋದಶಿಯ ದಿನಕ್ಕೆ ಸಾವಿನ ದೈವ ಸಾಕ್ಷಾತ್ ಯಮನೇ ಭಯ ಪಡುತ್ತಾನೆ. ನಾವು ಪಾಲಿಸುವ ಒಂದು ಆಚರಣೆಗೆ ಅಪಮೃತ್ಯು ತಡೆಯುವ ಶಕ್ತಿ ಇದೆ. ಈ ಬಗ್ಗೆ ಪುರಾಣಗಳಲ್ಲಿಯೂ ಸಹ ಉಲ್ಲೇಖವಿದೆ. ಈ ಆಚರಣೆ ಯಾವುದು ? ಅದರ ಪ್ರಾಮುಖ್ಯತೆ ಏನು ? ಬನ್ನಿ ತಿಳಿದುಕೊಳ್ಳೋಣ.

 

 

 

ಯಮರಾಜನನ್ನು ಖುಷಿ ಪಡಿಸುವ ದಿನವಿದು.ಈ ದಿನಕ್ಕೆ ಸ್ವಯಂ ಯಮನೆ ಭಯಪಡುತ್ತಾನೆ. ಈ ದಿನ ಯಮನನ್ನು ಪೂಜಿಸಿದವರಿಗೆ ಆಕಾಲ ಮೃತ್ಯು ದೋಷ ಪರಿಹಾರವಾಗುತ್ತದೆ. ನವೆಂಬರ್ 5 ನೇ ತಾರೀಖಿನಂದು ಧನ ತ್ರಯೋದಶಿಯನ್ನು ಆಚರಿಸಲಾಗುತ್ತದೆ. ಇದನ್ನು ಆಡುಭಾಷೆಯಲ್ಲಿ “ ಧನ ತೇರಸ್” ಎಂದು ಕರೆಯಲಾಗುತ್ತದೆ. ಈ ದಿನ ಈ ರೀತಿ ಯಮನಿಗೆ ಪೂಜೆ ಮಾಡಿದರೆ, ನಿಮಗೆ ಅಪಮೃತ್ಯು ದೋಷ ಮತ್ತು ಅಪ ಮೃತ್ಯುವಿನ ಭಯ ನಿವಾರಣೆಯಾಗುತ್ತದೆ.ಧನ ತ್ರಯೋದಶಿಯ ದಿನ ಲಕ್ಷ್ಮಿ ಕುಬೇರರ ಆರಾಧನೆ ಮತ್ತು ಧನ್ವಂತರಿಯ ಪೂಜೆಯ ಜೊತೆಗೆ ಮಾಡಲೇಬೇಕಾದ ಮತ್ತೊಂದು ಪೂಜೆ ಇದೆ. ಅದೇ ಯಮ ಪೂಜೆ. ಯಮನಿಗೂ ಧನತ್ರಯೋದಶಿಗೂ ವಿಶೇಷ ಸಂಬಂಧ ಇದೆ. ಹೀಗಾಗಿ ಈ ದಿನ ಯಮನನ್ನು ಆರಾಧಿಸುವ ಪದ್ಧತಿ ಇದೆ.

ಧನ ತ್ರಯೋದಶಿಯ ದಿನದಂದು ಯಮರಾಜನ ಪೂಜಾ ವಿಧಾನ:ಧನ ತ್ರಯೋದಶಿಯಂದು ಯಮನನ್ನು ಪೂಜಿಸಿ,ಆರಾಧಿಸಬೇಕು. ಧನ ತ್ರಯೋದಶಿಯ ಈ ದಿನ ದೀಪ ದಾನದಿಂದ ಯಮನ ವಿಶೇಷ ಅನುಗ್ರಹವಾಗುತ್ತದೆ, ದೀಪ ದಾನದಿಂದ ಮೃತ್ಯುವಿನ ಭಯ ದೂರವಾಗುತ್ತದೆ. ಶ್ರದ್ಧೆಯಿಂದ ಯಮನನ್ನು ಆರಾಧಿಸಿದರೆ ಯಮನ ಆಶೀರ್ವಾದ ಪ್ರಾಪ್ತಿಯಾಗುತ್ತದೆ.ಹಿಂದೂ ಪುರಾಣಗಳ ಪ್ರಕಾರ ಮೃತ್ಯುವಿನ ದೈವ ಯಮರಾಜ.ಅಷ್ಟ ದಿಕ್ಪಾಲಕರಲ್ಲಿ ದಕ್ಷಿಣ ದಿಕ್ಕಿನ ಅಧಿಪತಿ, ಜಗತ್ತನ್ನು ಬೆಳಗುವ ಸೂರ್ಯನ ಮಗ, ನಮ್ಮ ಕರ್ಮಗಳಿಗೆ ಅನುಸಾರವಾಗಿ ಶಿಕ್ಷೆ ನೀಡುವ ಶನೇಶ್ಚರನ ತಮ್ಮ, ಇಷ್ಟೆಲ್ಲ ಹಿನ್ನೆಲೆ ಇರುವ ಯಮ ಧನ ತ್ರಯೋದಶಿಗೆ ಹೆದರುತ್ತಾನೆ. ಹೌದು ಮೃತ್ಯುವನ್ನು ತಡೆಯುವ ವಿಶೇಷ ಶಕ್ತಿ ಧನ ತ್ರಯೋದಶಿಗೆ ಇದೆಯಂತೆ. ಅಂದು ವಿಶೇಷವಾಗಿ ದಕ್ಷಿಣ ದಿಕ್ಕಿಗೆ 13 ದೀಪಗಳನ್ನು ಹಚ್ಚಿದರೆ ಅಕಾಲ ಮೃತ್ಯು, ಅಪಮೃತ್ಯು ನಿವಾರಣೆ ಯಾಗುತ್ತದೆಯಂತೆ. ಅಷ್ಟೇ ಅಲ್ಲದೆ ನರಕ ಪ್ರಾಪ್ತಿಯಾಗುವುದಿಲ್ಲವಂತೆ.

 

 

 

ಧನ ತ್ರಯೋದಶಿಯಂದು ಯಮನಿಗೆ ದೀಪ ಹಚ್ಚುವ ವಿಧಾನ:ಅಕ್ಕಿ ಅಥವಾ ಗೋಧಿ ಹಿಟ್ಟಿನಲ್ಲಿ ಹಣತೆ ತಯಾರಿಸಿ, 4 ಬತ್ತಿಯನ್ನು ಹಾಕಿ, ಎಳ್ಳೆಣ್ಣೆ ಹಾಕಿ, ದಕ್ಷಿಣ ದಿಕ್ಕಿನತ್ತ ಮುಖ ಮಾಡಿ ದೀಪ ಹಚ್ಚಿ, 13 ದೀಪಗಳನ್ನು ಹಚ್ಚುವುದು ಶ್ರೇಷ್ಠ,ಈ ದೀಪವನ್ನು ಮನೆಯ ಹೊರಗಡೆ ದಕ್ಷಿಣ ದಿಕ್ಕಿಗೆ ದೀಪ ಹಚ್ಚಬಹುದು. ಗೋಶಾಲೆ, ಬಾವಿ, ನದಿ ತೀರ, ದೇಗುಲಗಳಲ್ಲೂ ಯಮ ದೀಪ ಹಚ್ಚಬಹುದು. ದೀಪ ಹಚ್ಚಿದ ನಂತರ ಯಮ ಧರ್ಮರಾಜನನ್ನು ಶ್ರದ್ಧೆಯಿಂದ ಸ್ಮರಿಸಿ ಸಂಧ್ಯಾಕಾಲದಲ್ಲಿ ದೀಪ ಹಚ್ಚಬೇಕು.

ಇಷ್ಟಕ್ಕೂ ಧನ ತ್ರಯೋದಶಿಯ ದಿನದಂದು ಯಮನ ಪೂಜೆ ಮಾಡುವುದು ಯಾಕೆ ?ಎನ್ನುವುದಕ್ಕೆ ಪೌರಾಣಿಕ ಕಥೆಯ ಹಿನ್ನೆಲೆ ಇದೆ.
ಹಂಸ ಎನ್ನುವ ರಾಜ ಬೇಟೆಗೆ ಹೋದಾಗ ತನ್ನ ಜೊತೆಗಿದ್ದ ಸೈನಿಕರನ್ನು ಬಿಟ್ಟು ಕಾಡಿನಲ್ಲಿ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ದಾರಿಯಲ್ಲಿ ಹೋಗುವಾಗ ಹಿಮರಾಜ ಎಂಬುವರ ಮನೆಗೆ ಹೋಗುತ್ತಾನೆ. ಹಿಮರಾಜ ಹಂಸ ರಾಜನ ಬಗ್ಗೆ ತಿಳಿದು ವಿಶೇಷ ಸತ್ಕಾರವನ್ನು ಮಾಡುತ್ತಾನೆ. ಹಂಸ ರಾಜ ಅರಮನೆಗೆ ಹೋದ ದಿನವೇ ಹಿಮ ರಾಜನ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಅರಮನೆಗೆ ಬಂದ ಜ್ಯೋತಿಷಿ ಈ ಮಗು ಮದುವೆಯಾದ ನಾಲ್ಕೇ ದಿನಕ್ಕೆ ಸಾವಿಗೆ ಈಡಾಗುತ್ತದೆ ಎಂಬ ಭವಿಷ್ಯ ನುಡಿಯುತ್ತಾನೆ. ರಾಜ ತನ್ನ ಮಗುವಿನ ರಕ್ಷಣೆಗಾಗಿ ಆ ಮಗುವನ್ನು ಯಮುನಾ ನದಿಯ ತಟದಲ್ಲಿ ಬ್ರಹ್ಮಚಾರಿಯಾಗಿ ಬೆಳೆಸುತ್ತಾನೆ. ಅವನ ಮೇಲೆ ಸ್ತ್ರೀಯರ ನೆರಳೂ ಕೂಡ ಬೀಳದಂತೆ ಕಾಪಾಡುತ್ತಾನೆ. ಒಮ್ಮೆ ಹಂಸನ ಮಗಳು ಯಮುನಾ ನದಿಯ ತಟಕ್ಕೆ ಬರುತ್ತಾರೆ. ರಾಜನನ್ನು ಕಂಡು ಅವನ ಸೌಂದರ್ಯಕ್ಕೆ ಮರುಳಾಗಿ ಗಾಂಧರ್ವ ವಿವಾಹ ಮಾಡಿಕೊಳ್ಳುತ್ತಾಳೆ. ಮದುವೆಯಾದ ನಾಲ್ಕೇ ದಿನಕ್ಕೆ ಪೂರ್ವ ನಿಗದಿಯಂತೆ ತನ್ನ ಗಂಡನನ್ನು ಕಳೆದು ಕೊಳ್ಳುತ್ತಾಳೆ. ಈ ವಿಷಯ ಕೇಳಿ ಯಮನ ಹೃದಯ ಕರಗುತ್ತದೆ. ಆಗ ಯಮದೂತನೊಬ್ಬ ಯಮರಾಜನ ಬಳಿ ಮೃತ್ಯುವಿನಿಂದ ಪಾರಾಗಲು ಉಪಾಯವೇ ಇಲ್ಲವೇ ? ಎಂದು ಕೇಳುತ್ತಾನೆ. ಆಗ ಸಾಕ್ಷಾತ್ ಯಮಧರ್ಮರಾಯ ಅಕಾಲ ಮೃತ್ಯುವಿನಿಂದ ಪಾರಾಗುವುದಕ್ಕೆ ಒಂದು ಉಪಾಯ ಹೇಳುತ್ತಾನೆ.

ಧನ ತ್ರಯೋದಶಿಯ ದಿನ ಯಾರು ಯಮನನ್ನು ಪೂಜೆ ಮಾಡಿ ವಿಧಿಪೂರ್ವಕವಾಗಿ ದೀಪ ದಾನ ಮಾಡುತ್ತಾರೆ, ಅಂತವರು ಅಕಾಲ ಮೃತ್ಯುವಿನಿಂದ ಪಾರಾಗಲು ಹೀಗಾಗಿ ಧನತ್ರಯೋದಶಿಯ ದಿನ ಮಾಡುವ ಪೂಜೆಗೆ ಮತ್ತು ಯಮ ದೀಪದಾನಕ್ಕೆ ವಿಶೇಷ ಪ್ರಾಶಸ್ತ್ಯ ನೀಡಲಾಗಿದೆ. ಧನ ತ್ರಯೋದಶಿಯಂದು ಶ್ರದ್ಧಾ ಭಕ್ತಿಯಿಂದ ಆಚರಿಸಿದರೆ ದೀರ್ಘಾಯುಷ್ಯವನ್ನು ಪಡೆದು ಮುಂದೆ ಅಪಮೃತ್ಯುವಿನಿಂದ ಪಾರಾಗಿ ಸುಖ , ಶಾಂತಿಯಿಂದ ನೆಮ್ಮದಿಯಿಂದ ಜೀವಿಸಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top