ಮನೋರಂಜನೆ

ಶಾರುಖ್ ಅಮೀರ್ ಖಾನ್‌ರನ್ನೇ ಮೀರಿಸಿದ ರಾಕಿಂಗ್ ಸ್ಟಾರ್ ಯಶ್.

ಪ್ರೇಕ್ಷಕರ ವಲಯದಲ್ಲಿ ಭಾರಿ ಕುತೂಹಲ ಹುಟ್ಟುಹಾಕಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಗ್ಗೆ ಯಶ್ ಅಭಿಮಾನಿಗಳು ಸೇರಿದಂತೆ ಸಿನಿರಸಿಕರೆಲ್ಲರಲ್ಲೂ ಭಯಂಕರ ನಿರೀಕ್ಷೆ ಮೂಡಿದೆ. ಅದ್ಧೂರಿ ಮೇಕಿಂಗ್, ಪೋಸ್ಟರ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವಂತಹ ಸ್ಟಿಲ್ಲುಗಳ ಮೂಲಕವೇ ಭಾರಿ ಸಂಚಲನ ಸೃಷ್ಟಿಸಿರುವ ಈ ಚಿತ್ರ ಎಬ್ಬಿಸಿರೋ ಅಲೆ ಕಂಡು ಬಹುತೇಕರು ಅಚ್ಚರಿಗೊಂಡಿದ್ದಾರೆ.

ಯಶ್ ಇದೀಗ ಬಾಲಿವುಡ್ ಸೂಪರ್ ಸ್ಟಾರ್ ನಟರಿಗೂ ತೀವ್ರ ಪೈಪೋಟಿ ನೀಡುತ್ತಿದ್ದು, ಅಮೀರ್ ಖಾನ್, ಶಾರುಖ್ ಖಾನ್ ರನ್ನೇ ಹಿಂದಿಕ್ಕಿದ್ದಾರೆ. ಪ್ರಸ್ತುತ ಯಶ್ ಅಭಿನಯದ ಕೆಜಿಎಫ್ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದು, ಕೇವಲ ಕರ್ನಾಟಕ ಮಾತ್ರವಲ್ಲದೇ ಯಶ್ ಅಭಿನಯದ ಚಿತ್ರ ಕೆಜಿಎಫ್ ಭಾರತದ ಮೂರನೇ ಬಹು ನಿರೀಕ್ಷಿತ ಚಿತ್ರವಾಗಿದೆ..

 

 

ಹೌದು ಯಶ್ ಅಭಿನಯದ ಕೆಜಿಎಫ್ ಚಿತ್ರ ಬಾಲಿವುಡ್‌ ಬಾದ್ ಷಾ ಶಾರುಖ್ ಖಾನ್ ಅಭಿನಯದ ಝೀರೋ ಚಿತ್ರ, ಅಮೀರ್ ಖಾನ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರಗಳನ್ನು ಹಿಂದಿಕ್ಕಿದ್ದು, ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಐಎಂಡಿಬಿಯ ಮೋಸ್ಟ್‌ ಆಯಂಟಿಸಿಪೇಟೆಡ್‌ ಗ್ಲೋಬಲ್‌ ಮೂವಿಸ್ ಹಾಗೂ ಟಿವಿ ಟ್ರೆಂಡಿಂಗ್‌ ನ ಹಲವು ಭಾಷೆಗಳ ಚಿತ್ರಗಳ ಲಿಸ್ಟ್‌ನಲ್ಲಿ 3ನೇ ಸ್ಥಾನದಲ್ಲಿದೆ.

ಈ ಲಿಸ್ಟ್ ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ರೋಬೋ 2.0 ಚಿತ್ರ ಶೇ. 53.1 ರೇಟಿಂಗ್ಸ್ ನೊಂದಿಗೆ ಮೊದಲ ಸ್ಥಾನ, ವಿಜಯ್ ಅಭಿನಯದ ಸರ್ಕಾರ್ ಶೇ.27.3ರಷ್ಟು ರೇಟಿಂಗ್ಸ್ ನೊಂದಿಗೆ 2ನೇ ಸ್ಥಾನದಲ್ಲಿದೆ. ಯಶ್ ಅಭಿನಯದ ಕೆಜಿಎಫ್ ಚಿತ್ರ ಶೇ.5.7ರಷ್ಚು ರೇಟಿಂಗ್ಸ್ ನೊಂದಿಗೆ 3ನೇ ಸ್ಥಾನದಲ್ಲಿದ್ದು, ಶಾರುಖ್ ಅಭಿನಯದ ಝೀರೋ ಶೇ.4.9 ಮತ್ತು ಅಮೀರ್ ಖಾನ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರ ಶೇ.4.0 ರೇಟಿಂಗ್ಸ್ ನೊಂದಿಗೆ 4 ಮತ್ತು ಐದನೇ ಸ್ಥಾನಗಳಲ್ಲಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top