fbpx
ದೇವರು

ಶ್ರೀ ಕೃಷ್ಣ ಪರಮಾತ್ಮನಿಗೂ ದೀಪಾವಾಳಿಗೂ ಇದೆ ಅಂತೇ ಅವಿನಾಭಾವ ಸಂಬಂಧ,ಇಷ್ಟಾರ್ಥ ಸಿದ್ದಿಗಾಗಿ ನರಕ ಚತುರ್ದಶಿಯ ಆಚರಣೆಗಳು ಹೇಗೆ ಮಾಡ್ಬೇಕು ಗೊತ್ತಾ

ಶ್ರೀ ಕೃಷ್ಣನಿಗೂ ದೀಪಾವಳಿ ಆಚರಣೆಗೂ ಅವಿನಾಭಾವ ನಂಟು ಇದೆ. ದೀಪಾವಳಿಗೂ ದ್ವಾಪರಯುಗದಲ್ಲಿ ನಡೆದ ಒಂದು ಘಟನೆಗೂ ಸಂಬಂಧ ಇದೆ . ಅದೇ ನರಕಾಸುರನ ವಧೆ. ನರಕಾಸುರನ ವಧೆ ಯಾರಿಂದ ಆಯಿತು ಎನ್ನುವುದನ್ನು ಬನ್ನಿ ತಿಳಿದುಕೊಳ್ಳೋಣ.

ದೀಪಾವಳಿಯ ಎರಡನೇ ದಿನ ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಕೃಷ್ಣನಿಗೂ ನರಕಾಸುರನ ವಧೆಗೂ ಮತ್ತು ದೀಪಾವಳಿಗೂ ಇದೆ ಅವಿನಾಭಾವ ನಂಟು. ನರಕ ಚತುರ್ದಶಿಯಂದು ನಡೆದಿತ್ತು ನರಕಾಸುರನ ವಧೆ.ಮಹಾವಿಷ್ಣು ಲೋಕ ರಕ್ಷಣೆಯ ಉದ್ದೇಶದಿಂದ ವರಾಹಾ ಆವತಾರವನ್ನು ತಳೆಯುತ್ತಾನೆ. ಈ ಸಂದರ್ಭದಲ್ಲಿ ಅವನ ಶರೀರದಿಂದ ಒಂದು ಬೆವರ ಹನಿ ಭೂಮಿಗೆ ಬಿದ್ದ ಪರಿಣಾಮ ಭೂದೇವಿಗೆ ನರಕಾಸುರ ಮಗನಾಗಿ ಜನಿಸುತ್ತಾನೆ. ಭೂದೇವಿ ಮಹಾವಿಷ್ಣುವನ್ನು ಬೇಡಿ, ತನ್ನ ಮಗ ನರಕಾಸುರನಿಗೆ ವೈಷ್ಣವಾಸ್ತ್ರವನ್ನು ವರವಾಗಿ ಕೊಡಿಸುತ್ತಾಳೆ. ಇದರಿಂದ ಬಲಿಷ್ಠನಾದ ನರಕಾಸುರ ಲೋಕಕ್ಕೆ ಕಂಟಕನಾಗುತ್ತಾನೆ.

ನರಕ ಚತುರ್ದಶಿ ಹಬ್ಬದ ಪೌರಾಣಿಕ ಹಿನ್ನೆಲೆಯ ಬಗ್ಗೆ ನಿಮಗೆ ಗೊತ್ತೇ ?
ಪೌರಾಣಿಕ ಕಥೆಗಳಲ್ಲಿ ನರಕ ಚತುರ್ದಶಿ ಆಚರಣೆಗೆ ಬಂದ ಬಗ್ಗೆ ವಿವರಿಸಲಾಗಿದೆ. ಅದರಲ್ಲಿರುವ ಪ್ರಕಾರ ನರಕಾಸುರನು ಭೂ ದೇವಿಯ ಮಗ ಇವನು ಒಬ್ಬ ಚಾಣಾಕ್ಷ ರಾಕ್ಷಸನಾಗಿದ್ದನು. ಮೂರು ಲೋಕಗಳನ್ನು ಪಡಿಸಿಕೊಳ್ಳುವ ಶಕ್ತಿ ಹೊಂದಿದ್ದ. ನನಗೆ ಸಾವೇ ಬರಬಾರದು ಎಂದು ಹಂಬಲಿಸಿ ತನ್ನ ಆಯುಷ್ಯವನ್ನು ಗಟ್ಟಿಗೊಳಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಿದ .ಇದಕ್ಕಾಗಿ ಬ್ರಹ್ಮನ ಬಳಿ ನರಕಾಸುರ ಅಮರತ್ವದ ವರವನ್ನು ಪಡೆದಿದ್ದ. “ಹೇ ಬ್ರಹ್ಮದೇವನೇ ನೀನು ನನಗೆ ಚಿರಂಜೀವಿ ವರವನ್ನು ಅನುಗ್ರಹಿಸುವುದು ಬೇಡ. ನನ್ನ ತಾಯಿ ಭೂದೇವಿಯ ಹೊರತು ಇನ್ಯಾರಿಂದಲೂ ನನಗೆ ಸಾವು ಬರಬಾರದು. ಒಂದು ವೇಳೆ ಸಾವು ಬರುವುದಾದರೆ ಅದು ನನ್ನ ತಾಯಿಯಿಂದ ಮಾತ್ರ ಬರುವಂತೆ ಆಗಲಿ ಎಂದು ಬ್ರಹ್ಮನಲ್ಲಿ ಪ್ರಾರ್ಥನೆ ಮಾಡಿಕೊಂಡನು” ಹಾಗೆಯೇ ಆಗಲಿ ಎಂದು ಆಶೀರ್ವದಿಸಿದ.

 

 

 

ತಾನು ಪಡೆದ ದಿವ್ಯವಾದ ವರದ ಪ್ರಭಾವದಿಂದ ನರಕಾಸುರ ಎಲ್ಲೆಡೆಯಲ್ಲೂ ದಾಳಿ ಮಾಡಲು ಆರಂಭಿಸಿದ. ಭೂಮಂಡಲದಲ್ಲಿರುವ ಸಾಮ್ರಾಜ್ಯಗಳನ್ನು ಜಯಿಸಿದ. ದುಷ್ಟ ನರಕಾಸುರ ತನಗಾಗದ ವರದಿಂದ ಹಲವಾರು ಅನಾಚಾರಗಳನ್ನು ಮಾಡುತ್ತಾನೆ. ಕಪಟದಿಂದ 16,000 ಗೋಪಿಕೆಯರನ್ನು ಸೆರೆಹಿಡಿದು ಬಂಧಿಸಿರುತ್ತಾನೆ .ಒಮ್ಮೆ ದೇವಲೋಕದ ಮೇಲೆ ನರಕಾಸುರ ದಾಳಿ ಮಾಡುತ್ತಾನೆ. ದೇವಲೋಕದತ್ತ ಧಾವಿಸುತ್ತಿದ್ದಂತೆ ಇಂದ್ರ ಹಾಗೂ ಆಸ್ಥಾನದ ದೇವತೆಗಳು ಕಂಗಾಲಾಗಿ ಬಿಡುತ್ತಾರೆ. ದೇವ ಲೋಕದ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ಅಧಿತಿಯ ಕಿವಿಗಳನ್ನು ಅಲಂಕರಿಸಿದ್ದ ಕರ್ಣಭರಣಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದ. ಇದರಿಂದ ಘಾಸಿಗೊಂಡ ಅದಿತಿ ಸತ್ಯಭಾಮೆ ಇರುವಲ್ಲಿಗೆ ತೆರಳುತ್ತಾಳೆ. ಸತ್ಯಭಾಮೆ ಕೂಡಲೇ ಅದಿತಿಯನ್ನು ಕೃಷ್ಣನು ಇರುವಲ್ಲಿಗೆ ಕರೆದೊಯ್ಯುತ್ತಾಳೆ. ಎಲ್ಲವನ್ನೂ ಬಲ್ಲವನು ಭಗವಂತನಾದ ಶ್ರೀಕೃಷ್ಣ ಕೂಡಲೇ ಕಾರ್ಯೋನ್ಮುಖನಾಗುತ್ತಾನೆ.
ಸತ್ಯಭಾಮ ನನ್ನೊಡನೆ ಯುದ್ಧಕ್ಕೆ ಹೊರಡಲು ಸಿದ್ದಳಾಗು. ನೀನು ಯುದ್ಧದಲ್ಲಿ ನನಗೆ ಜೊತೆಯಾಗಬೇಕು ಎಂದು ಒಂದೊಮ್ಮೆ ಬಯಸಿದ್ದೆ, ಈಗ ಕಾಲ ಬಂದಿದೆ ಎಂದು ಶ್ರೀ ಕೃಷ್ಣ ಸತ್ಯಭಾಮೆಗೆ ಹೇಳುತ್ತಾನೆ. ಕೃಷ್ಣನ ಆಗಮನವನ್ನು ಕಂಡ ನರಕಾಸುರ ಗಹಗಹಿಸಿ ನಗುತ್ತಾನೆ. ಸೇನಾಪತಿ ಮೂರನಿಗೆ ಕೃಷ್ಣನನ್ನು ಸಂಹರಿಸು ಎಂಬ ಆದೇಶವನ್ನು ನೀಡುತ್ತಾನೆ . ಭಗವಂತನಾದ ಶ್ರೀ ಕೃಷ್ಣ ಮೂರನನ್ನು ಅನಾಯಾಸವಾಗಿ ಸಂಹರಿಸುತ್ತಾನೆ. ವಿಷಯವನ್ನು ತಿಳಿದ ನರಕಾಸುರ ಆನೆಗಳು ಹಾಗೂ ಅಶ್ವಗಳನ್ನು ನೂರಾರು ಅಸುರರ ಜೊತೆಗೂಡಿ ಯುದ್ಧ ಘೋಷಣೆಯನ್ನು ಮಾಡುತ್ತಾ ಅರಮನೆಯಿಂದ ಹೊರಗಡೆ ಬರುತ್ತಾನೆ . ನರಕಾಸುರ ಮತ್ತು ಕೃಷ್ಣನ ನಡುವೆ ಘೋರವಾದ ಯುದ್ಧವೇ ನಡೆದು ಬಿಡುತ್ತದೆ. ಯುದ್ಧದಲ್ಲಿ ಸತ್ಯಭಾಮೆ ಸೇರಿದಂತೆ ಗರುಡ ಕೂಡ ಪಾಲ್ಗೊಳ್ಳುತ್ತಾರೆ. ಶಕ್ತಿಯುತವಾದ ಆನೆಗಳು ಹಾಗೂ ಅಶ್ವಗಳನ್ನು ಗರುಡ ತನ್ನ ಬಲಿಷ್ಠವಾದ ರೆಕ್ಕೆಗಳಿಂದ ನೆಲಕ್ಕುರುಳಿಸಿ ಸೇನೆಯ ಮೇಲೆ ಪ್ರಯೋಗಿಸುತ್ತಾನೆ. ಬಹುಬೇಗನೇ ಯುದ್ಧ ಭೂಮಿಯಲ್ಲಿ ನರಕಾಸುರನ ಒಬ್ಬನನ್ನು ಬಿಟ್ಟು ಉಳಿದವರೆಲ್ಲರೂ ಹತರಾಗುತ್ತಾರೆ.

ಒಂದು ಸಂದರ್ಭದಲ್ಲಿ ನರಕಾಸುರ ತನ್ನ ಪ್ರಬಲ ಅಸ್ತ್ರ ವಾದ ತ್ರಿಶೂಲವನ್ನು ಶ್ರೀ ಕೃಷ್ಣನತ್ತ ಬೀಸುತ್ತಾನೆ. ಆ ಅಸ್ತ್ರವು ಭಗವಂತನಾದ ಶ್ರೀಕೃಷ್ಣನ ಎದೆಗೆ ಬಡಿದು ಆತ ಮೂರ್ಛೆ ತಪ್ಪಿ ಬೀಳುತ್ತಾನೆ. ಶ್ರೀ ಕೃಷ್ಣನು ಕೆಳಗೆ ಬಿದ್ದ ಕೂಡಲೇ ಸತ್ಯಭಾಮೆ ಒಂದು ಕ್ಷಣ ವಿಚಲಿತವಾಗುತ್ತಾಳೆ. ಕೂಡಲೇ ಎಚ್ಚೆತ್ತುಕೊಂಡ ಸತ್ಯಭಾಮೆ, ಕ್ಷಣಮಾತ್ರದಲ್ಲಿ ನರಕಾಸುರನ ಮೇಲೆ ಬಾಣವನ್ನು ಪ್ರಯೋಗಿಸುತ್ತಾಳೆ. ಅದು ಸರಿಯಾಗಿ ನರಕಾಸುರನನ್ನು ತಲೆಯನ್ನು ಕತ್ತರಿಸಿ ಬಿಡುತ್ತದೆ. ನರಕಾಸುರ ಹತನಾಗುತ್ತಾನೆ. ನರಕಾಸುರನ ವಧೆಯ ನಂತರ ಭಗವಂತನಾದ ಶ್ರೀ ಕೃಷ್ಣ ಸತ್ಯಭಾಮೆಯರನ್ನು ನೋಡಿ ಕಿರುನಗು ಸೂಸುತ್ತಾ ನಾಟಕ ಸೂತ್ರದಾರಿ ಶ್ರೀ ಕೃಷ್ಣ ನರಕಾಸುರನ ವಧೆ ನರಕಾಸುರನ ತಾಯಿ ಭೂದೇವಿ. ಭೂದೇವಿ ದ್ವಾಪರಯುಗದಲ್ಲಿ ಸತ್ಯಭಾಮೆಯ ರೂಪದಲ್ಲಿ ಅವತರಿಸಿದ್ದಳು.ಆದ್ದರಿಂದ ಸತ್ಯಭಾಮೆಯಾಗಿದ್ದ ಭೂದೇವಿಯಿಂದಲೇ ಅವನ ವಧೆಯಾಗುತ್ತದೆ.

 

 

 

ಇದಾದ ನಂತರ 16,000 ಗೋಪಿಕೆಯರನ್ನು ಬಿಡುಗಡೆ ಮಾಡಿ ಅವರಿಗೆ ಸಾಮಾಜಿಕ ನ್ಯಾಯ ಒದಗಿಸುತ್ತಾರೆ, ದೇವಿ ಅದಿತಿಯು ತನ್ನ ಕರ್ಣಾಭರಣ ಗಳನ್ನು ಮರಳಿ ಪಡೆಯುತ್ತಾಳೆ.ನರಕಾಸುರ ಸಂಹಾರವಾಗಿದ್ದು ಆಶ್ವಿಜ ಮಾಸ, ಕೃಷ್ಣ ಪಕ್ಷದ, ಚತುರ್ದಶಿಯ ದಿನ. ನರಕಾಸುರ ಸಂಹಾರ ವಾಗಿದ್ದೂ ಇದೇ ಅಶ್ವೀಜ ಕೃಷ್ಣ ಚತುರ್ದಶಿಯ ಕತ್ತಲೆಯ ಸಮಯದಲ್ಲಿ. ಹೀಗಾಗಿಯೇ ದೀಪಾವಳಿಯ ಪ್ರಮುಖ ದಿನ ಆಶ್ವಿಜ ಮಾಸದ, ಚತುರ್ದಶಿ ನರಕ ಚತುರ್ದಶಿ ಯಾಯಿತು.
ಇಂದೂ ಧರ್ಮದಲ್ಲಿ ದೀಪ ಶಕ್ತಿಯ ಸಂಕೇತ. ದೀಪದ ಬೆಳಕು ಎಲ್ಲಿರುತ್ತದೆಯೋ ಅಲ್ಲಿ ಕತ್ತಲು ಕವಿಯುವುದು. ದುಷ್ಟ ಶಕ್ತಿಗಳು ಪ್ರವೇಶಿಸುವುದಿಲ್ಲ. ದುಷ್ಟಶಕ್ತಿಯನ್ನು ಉಳಿಸುವುದಕ್ಕಾಗಿ ದೀಪಾವಳಿಯ ಸಂದರ್ಭದಲ್ಲಿ ಮನೆಯ ಪ್ರತಿ ಮೂಲೆಯಲ್ಲೂ ದೀಪ ಬೆಳಗಲಾಗುತ್ತದೆ. ಇದಿಷ್ಟೇ ಅಲ್ಲದೆ ನಮ್ಮೆಲ್ಲರ ಒಳಗೆ ಇರುವ ಬೆಳಕು ಹೊರಗು ಪ್ರಜ್ವಲಿಸಬೇಕು ಎನ್ನುವ ಕಾರಣಕ್ಕಾಗಿ ಪ್ರತಿ ಮನೆಯ ಬಾಗಿಲ ಹೊರಗೆ ದೀಪಗಳನ್ನು ಬೆಳಗಲಾಗುತ್ತದೆ. ಇಂತಹ ದೀಪದ ಹಬ್ಬದ ಪ್ರಮುಖ ದಿನವಾದ…..ನರಕ ಚತುರ್ದಶಿಯಂದು ಅನೇಕ ಆಚರಣೆಗಳನ್ನು ಪಾಲಿಸಲಾಗುತ್ತದೆ. ನರಕ ಚತುರ್ದಶಿಯಂದು ಅಭ್ಯಂಜನ ಸ್ನಾನ ಮಾಡುವುದು. ನರಕಾಸುರನನ್ನು ಸಂಹರಿಸಿದ ನಂತರ ಶ್ರೀ ಕೃಷ್ಣ ಸತ್ಯಭಾಮೆಯರು ತಮ್ಮ ರಾಜ್ಯಕ್ಕೆ ತೆರಳುತ್ತಾರೆ. ಯುದ್ಧ ಭೂಮಿಯಲ್ಲಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಅಭ್ಯಂಜನ ಸ್ನಾನ ಮಾಡುತ್ತಾರೆ . ಈ ಹಿನ್ನೆಲೆಯಲ್ಲಿ ನರಕ ಚತುರ್ದಶಿಯಂದು ಎಣ್ಣೆ ಸ್ನಾನ ಮಾಡುವ ಆಚರಣೆ ರೂಢಿಗೆ ಬಂದಿದೆ.

ನರಕ ಚತುರ್ದಶಿಯಂದು ಸಿಡಿಮದ್ದು ಸಿಡಿಸುವ ಉದ್ದೇಶವೇನು ಗೊತ್ತಾ ?
ಈ ಶುಭ ಸಂದರ್ಭದಲ್ಲಿ ಸಂಭ್ರಮದಿಂದ ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ನರಕಾಸುರ ಸಂಹಾರಕ್ಕಾಗಿ ನರಕ ಚತುರ್ದಶಿಯಂದು ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸಲಾಗುತ್ತದೆ .ಆಶ್ವಿಜ ಕೃಷ್ಣ ಚತುರ್ದಶಿ ಎಂದರೆ ನರಕ ಚತುರ್ದಶಿಯ ದಿನ ಕೆಲವು ಆಚರಣೆಗಳನ್ನು ಮಾಡುವುದರಿಂದ ಅನೇಕ ಫಲಗಳನ್ನು ಪಡೆಯಬಹುದು.

ನರಕ ಚತುರ್ದಶಿಯ ದಿನ ಏನು ಮಾಡಬೇಕು ?
ಬ್ರಾಹ್ಮಿ ಮುಹೂರ್ತದಲ್ಲಿ ಅಭ್ಯಂಜನ ಸ್ನಾನ ಮಾಡಿ, ಆಕಾಶದಲ್ಲಿ ನಕ್ಷತ್ರಗಳು ಇರುವಾಗಲೇ ಅಭ್ಯಂಗ ಸ್ನಾನ ಮಾಡಬೇಕು.ಬೇರು ಇರುವ ಉತ್ತರಾಣಿ ಗಿಡದಿಂದ ತಲೆಯಿಂದ ಕಾಲಿನವರೆಗೆ, ಕಾಲಿನಿಂದ ತಲೆಯವರೆಗೆ ನೀರನ್ನು ಸಿಂಪಡಿಸುವ ಸಂಪ್ರದಾಯವಿದೆ. ಆಶ್ವಿಜ ಕೃಷ್ಣ ಚತುರ್ದಶಿಯ ದಿನ ಸೂರ್ಯನಿಗೆ ಅರ್ಘ್ಯ ನೀಡಿ, ಸೂರ್ಯದೇವನಿಗೆ ಭಕ್ತಿಯಿಂದ ನಮಸ್ಕರಿಸಿ .ಮನೆ ದೇವರಿಗೆ ಪೂಜೆ ಮಾಡಿ, ಗುರುಗಳಿಗೆ ಪೂಜೆ ಮಾಡಿ, ನಮಸ್ಕರಿಸಿ ನರಕ ಚತುರ್ದಶಿಯ ದಿನ ಶ್ರೀ ಕೃಷ್ಣ ಅಷ್ಟೋತ್ತರ ಪಠಿಸಿ.ಮನೆಯಲ್ಲಿ ನಿಮ್ಮ ಶಕ್ತಿಯ ಅನುಸಾರ ದೀಪಗಳನ್ನು ಬೆಳಗಿಸಿ. ಮಧ್ಯಾಹ್ನ ಬಡವರಿಗೆ ಭೋಜನ ಮಾಡಿಸಿ, ಅನುಕೂಲ ಇರುವವರು ಬಡವರಿಗೆ ವಸ್ತ್ರ ದಾನ ಮಾಡಿ, ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡಿ , ಸಂಜೆ ನರಕಾಸುರ ಸಂಹಾರ ಕಥೆ ಓದುವ ಕ್ರಮವಿದೆ. ಶ್ರೀಕೃಷ್ಣನಿಗೆ ತುಳಸಿಯನ್ನು ಅರ್ಪಿಸಿ, ಸಾಧ್ಯವಾದರೆ ಎಂಟು ದಿಕ್ಕುಗಳಲ್ಲೂ ಹಣತೆಗಳನ್ನು ಬೆಳಗಿಸಿ. ನರಕ ಚತುರ್ದಶಿ ಇಂದ ಬಲಿಪಾಡ್ಯಮಿಯವರೆಗೆ ನಿಷ್ಕಲ್ಮಶ ಮನಸ್ಸಿನಿಂದ ಭಗವಂತನ ಸೇವೆ ಮತ್ತು ಆರಾಧನೆಯನ್ನು ಮಾಡಬೇಕು. ಇದರಿಂದ ದೀರ್ಘಾಯುಷ್ಯ ಉತ್ತಮ ಆಯಸ್ಸು ಐಶ್ವರ್ಯ ಮತ್ತು ಸದ್ಬುದ್ಧಿಯನ್ನು ಆ ಭಗವಂತ ಕರುಣಿಸುತ್ತಾನೆ. ಜೀವನದಲ್ಲಿ ಯಾವ ಕಷ್ಟವೂ ಬರದಂತೆ ಜಗತ್ ರಕ್ಷಕ ಕಾಪಾಡುತ್ತಾನೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top