ಸಮಾಚಾರ

ದೀಪಾವಳಿಗೆ ಬಂತು ಬಂಗಾರದ ಮಿಠಾಯಿ ಇದರ ಕೆಜಿ ಬೆಲೆ ಕೇಳಿದ್ರೆ ನಿಮ್ ತಲೆ ತಿರುಗೋದು ಖಂಡಿತಾ

ದೀಪಾವಳಿ ಬಂತು ಅಂದ್ರೆ ಸಾಕು ಆಫರ್ ,ಡಿಸ್ಕೌಂಟ್ ಇನ್ನೂ ಅನೇಕ ವಿಶೇಷ ರೀತಿಯ ವಾತಾವರಣ ಸೃಷ್ಟಿ ಯಾಗುತ್ತದೆ ,ದೀಪಾವಳಿ ಹಬ್ಬಕ್ಕೆ ಇರೋ ಖದರ್ ಬೇರೆ ,ಅನೇಕರು ದೀಪಾವಳಿಗೆ ಸಿಹಿ ಹಂಚಿ ಅನೇಕ ಗಿಫ್ಟ್ ಗಳನ್ನೂ ಕೊಟ್ಟು ಆಚರಿಸುತ್ತಾರೆ,ಈ ವರ್ಷದ ದೀಪಾವಳಿ ವಿಶೇಷ ಏನು ಅಂದ್ರೆ ಬಂಗಾರದ ಮಿಠಾಯಿ,ಏನ್ ಇದು ಅನ್ಕೊಂಡ್ರಾ?ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ದೀಪಾವಳಿ ಹಿನ್ನೆಲೆಯಲ್ಲಿ ಅನೇಕ ವಿಶೇಷ ವಸ್ತುಗಳು ಮಾರುಕಟ್ಟೆಗೆ ಬಂದಿವೆ. ಈ ಬಾರಿ ಬಂಗಾರದ ಮಿಠಾಯಿ ಎಲ್ಲರ ಗಮನ ಸೆಳೆಯುತ್ತಿದೆ. ಲಕ್ನೋದ ಮಾರುಕಟ್ಟೆಗೆ ಬಂಗಾರದ ಮಿಠಾಯಿ ಬಂದಿದೆ. ಈ ಮಿಠಾಯಿಯನ್ನು ಅಮೆರಿಕಾ, ಆಸ್ಟ್ರೇಲಿಯಾ ಹಾಗೂ ಅಪಘಾನಿಸ್ತಾನದಿಂದ ತರಿಸಿಕೊಳ್ಳಲಾಗಿದೆ.

ಮಿಠಾಯಿ ಒಳಗೆ ಮೆವೊ ಇದ್ದು, ಹೊರಗೆ 24 ಕ್ಯಾರೆಟ್ ಬಂಗಾರದ ಪದರವಿದೆ. ಇದೊಂದೇ ಅಲ್ಲ ಬೆಳ್ಳಿಯ ರಾಕೆಟ್, ಚರಕ, ಬೆಂಕಿ ಕಡ್ಡಿ ಕೂಡ ಗ್ರಾಹಕರ ಗಮನ ಸೆಳೆಯುತ್ತಿದೆ. ಬಂಗಾರದ ಮಿಠಾಯಿ ಬಂಗಾರದ ಬಿಸ್ಕಿಟ್ ನಂತೆ ಕಾಣುತ್ತದೆ. ಮಿಠಾಯಿ ಒಳಗೆ ಅಮೆರಿಕಾದ ಬ್ಲಾಕ್ಬೆರಿ, ಅಪಘಾನಿಸ್ತಾನದ ಒಣದ್ರಾಕ್ಷಿ ಹಾಗೂ ಆಸ್ಟ್ರೇಲಿಯಾದ ಒಣ ಹಣ್ಣುಗಳಿವೆ. ಮೇಲೆ ಬಂಗಾರವಿದೆ.

 

 

 

ಎಕ್ಸೊಟಿಕಾ ಹೆಸರಿನ ಈ ಮಿಠಾಯಿಯನ್ನು ಉಡುಗೊರೆ ನೀಡಬಹುದಾಗಿದೆ. ಇದ್ರ ಬೆಲೆ ಕೆ.ಜಿ. ಗೆ 50,000 ರೂಪಾಯಿಯಾಗಿದೆ. 50 ಸಾವಿರ ರೂಪಾಯಿ ನೀಡಿ ಕೆ.ಜಿ. ಮಿಠಾಯಿ ಖರೀದಿಸಲು ಜನರು ಬರೋದು ಕಷ್ಟ. ಹಾಗಾಗಿ ಒಂದೊಂದು ಮಿಠಾಯಿಯನ್ನೇ ಸ್ಪೆಷಲ್ ಪ್ಯಾಕ್ ಮಾಡಲಾಗಿದ್ದು, ಕಡಿಮೆ ಬೆಲೆಗೆ ಗ್ರಾಹಕರು ಖರೀದಿ ಮಾಡಬಹುದು ಎಂದು ಅಂಗಡಿ ಮಾಲೀಕರು ಹೇಳಿದ್ದಾರೆ. ಬೆಳ್ಳಿ ಪಟಾಕಿ ಕೂಡ ಅಂಗಡಿಯಲ್ಲಿದೆ. ಇದ್ರ ಬೆಲೆ 25 ಸಾವಿರ ರೂಪಾಯಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top