ಅರೋಗ್ಯ

ಕೊಕುಮ್ (ಮುರುಗಲ ಹಣ್ಣು) ಜೂಸ್ ಕುಡಿದ್ರೆ ಎಷ್ಟೆಲ್ಲಾ ಲಾಭಗಳು ಇವೆ ಅಂತ ತಿಳ್ಕೊಂಡ್ಮೇಲೆ ಕೊಕುಮ್ ಜೂಸ್ ಹುಡ್ಕೊಂಡ್ ಹೋಗಿ ಕುಡ್ಕೊಂಡು ಬರ್ತೀರಾ.

ಕೊಕುಮ್ (ಗ್ರ್ಯಾಸಿನಿಯ ಇಂಡಿಕಾ) ಬಹು ಆರೋಗ್ಯ ಮತ್ತು ಔಷಧೀಯ ಪ್ರಯೋಜನಗಳನ್ನು ಹೊಂದಿದೆ. ಕೊಕುಮ್ ಹಣ್ಣುಗಳು ಆಕ್ಸಿಡೆಂಟ್ಗಳ ವಿರೋಧಿ ಗುಣಗಳ ಅತ್ಯುತ್ತಮ ಮೂಲವಾಗಿದೆ ಇದರಿಂದಾಗಿ ವಿವಿಧ ಕಾಯಿಲೆಗಳಿಂದ ದೂರವಿರಲು ಸಹಾಯ ವಾಗುತ್ತದೆ.ನೋವು, ಗೆಡ್ಡೆ, ಗ್ಯಾಸ್ಟ್ರಿಕ್ , ಮಲಬದ್ಧತೆ ,ಪೈಲ್ಸ್ ಇತ್ಯಾದಿಗಳ ವಿರುದ್ಧ ಹೋರಾಡುತ್ತದೆ , ಕೊಕುಮ್ ಹಣ್ಣಿನ ಹೊರ ಕವಚವನ್ನು ಮಸಾಲೆಯಾಗಿ ಬಳಸಲಾಗುತ್ತದೆ , ಇದನ್ನು ಭಾರತೀಯ ಹಣ್ಣುಗಳ ‘ತಂಪಾದ ರಾಜ’ ಎಂದು ಕೂಡ ಕರೆಯಲಾಗುತ್ತದೆ.

 

 

 

 

ಆಂಟಿ ಆಕ್ಸಿಡೆಂಟ್ :ಕೊಕುಮ್ ಹಣ್ಣುಗಳು ಆಕ್ಸಿಡೆಂಟ್ಗಳ ವಿರೋಧಿ ಗುಣಗಳ ಅತ್ಯುತ್ತಮ ಮೂಲವಾಗಿದೆ ಇದರಿಂದಾಗಿ ವಿವಿಧ ಕಾಯಿಲೆಗಳಿಂದ ದೂರವಿರಲು ಸಹಾಯವಾಗುತ್ತದೆ.ಇದು ಜೀವಕೋಶ ಪುನರುತ್ಪಾದನೆ ಮತ್ತು ದುರಸ್ತಿಗೆ ಕೂಡ ಉತ್ತೇಜನ ನೀಡುತ್ತದೆ , ‘ಫ್ರೀ ರಾಡಿಕಲ್’ಗಳಿಂದ ಆರೋಗ್ಯವನ್ನು ರಕ್ಷಿಸುತ್ತದೆ.

ಅಲರ್ಜಿ ತಡೆಯುತ್ತದೆ :ಚರ್ಮದ ಮೇಲೆ ಮೂತ್ರನಾಳದ ಅಲರ್ಜಿ ಇತರ ಸಮಸ್ಯೆಗಳಿಗೆ ಕೊಕುಮ್ ಹಣ್ಣಿನ ತಂಪಾದ ಗುಣಗಳು ಸಹಾಯಮಾಡುತ್ತದೆ , ಅಷ್ಟೇ ಅಲ್ಲದೆ ಉರಿ ಊತದಂತಹ ಸಮಸ್ಯೆಗಳಿಗೂಸಹಾಯಕ .

ಮಲಬದ್ಧತೆ ತಡೆಯುತ್ತದೆ :ಮಲಬದ್ಧತೆಯಿಂದ ಬಳಲುತ್ತಿರುವ ವ್ಯಕ್ತಿಯು ಕೊಕುಮ್ ಒಣಗಿದ ಹಣ್ಣುಗಳ ಸಿಪ್ಪೆಯನ್ನು ರಾತ್ರಿಯಲ್ಲಿ 500 ಮಿಗ್ರಾಂ ಪ್ರಮಾಣದಲ್ಲಿ ನೀಡಲಾಗುತ್ತದೆ. ಇದು ಮಲಬದ್ಧತೆಯನ್ನು ಸರಾಗಗೊಳಿಸುವ ಸಹಾಯ ಮಾಡುತ್ತದೆ.

ಅಸಿಡಿಟಿ :ಆಮ್ಲತೆ ಅಥವಾ ಹೈಪರ್ಯಾಸಿಡಿಟಿ ಹೊಂದಿರುವವರು ಕೊಕುಮ್ ಒಣಗಿದ ಹಣ್ಣುಗಳ ಸಿಪ್ಪೆಗೆ ಸಕ್ಕರೆ ಮತ್ತು ಸ್ವಲ್ಪ ಪ್ರಮಾಣದ ಉಪ್ಪನ್ನು ಸೇರಿಸಿ ಸೇವಿಸಿ ಇದು ಆಮ್ಲತೆ ಮತ್ತು ಹೈಪರ್ಯಾಸಿಟಿ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ.

ಹೊಟ್ಟೆ ನೋವು :ಉರಿಯೂತ, ಹೊಟ್ಟೆ ನೋವು , ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರು ಕೊಕುಮ್ ಒಣಗಿದ ಹಣ್ಣುಗಳ ಸಿಪ್ಪೆಗೆ , ಶುಂಠಿ, ಜೇನುತುಪ್ಪ, ಸಕ್ಕರೆ ಮತ್ತು ಉಪ್ಪು ಸೇರಿಸಿ ತಿಂದರೆಹೊಟ್ಟೆ ನೋವು ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಒಡೆದ ಹಿಮ್ಮಡಿ ಸಮಸ್ಯೆ :ಒಡೆದ ಹಿಮ್ಮಡಿ ಸಮಸ್ಯೆಯಿಂದ ಬಳಲುತ್ತಿರುವವರು ಕೊಕುಮ್ ಬೆಣ್ಣೆಯ ಸಾರವನ್ನು ಪಾದಗಳಿಗೆ ಹಚ್ಚಿಕೊಂಡರೆ ಒಡೆದ ಹಿಮ್ಮಡಿ ಸಮಸ್ಯೆ ದೂರವಾಗುತ್ತೆ.

ಅಜೀರ್ಣ :ಅಜೀರ್ಣದಿಂದ ಬಳಲುತ್ತಿರುವವರು ಕೊಕುಮ್ ಅನ್ನು ಕಪ್ಪು ಮೆಣಸು ಮತ್ತು ಉಪ್ಪಿನೊಂದಿಗೆ ತೆಗೆದುಕೊಳ್ಳಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top