ದೇವರು

ನವೆಂಬರ್ 7 ನೇ ತಾರೀಖು ದೀಪಾವಳಿ ಅಮಾವಾಸ್ಯೆ ಈ ಶುಭ ದಿನ ಲಕ್ಷ್ಮಿದೇವಿ ಕಟಾಕ್ಷ ಪಡೆಯಲು ಧನಲಕ್ಷ್ಮೀ ಪೂಜೆಯನ್ನು ಹೀಗೆ ಮಾಡಿ

ದೀಪಾವಳಿಯು ಅಶ್ವೀಜ ಮಾಸದ, ಕೃಷ್ಣ ಪಕ್ಷದಲ್ಲಿ ಪ್ರಾರಂಭವಾಗಿ, ಕಾರ್ತಿಕ ಮಾಸದ ಪಾಡ್ಯದಲ್ಲಿ ಅಂತ್ಯಗೊಳ್ಳುವುದು. ದೀಪಾವಳಿ ಮೂರು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಮೊದಲನೇ ದಿನ ನರಕ ಚತುರ್ದಶಿ,ಎರಡನೇ ದಿನ ಅಮಾವಾಸ್ಯೆಯ ಲಕ್ಷ್ಮೀಪೂಜೆ, ಮೂರನೇ ದಿನ ಬಲಿಪಾಡ್ಯಮಿಯ ದಿನ ಬಲೀಂದ್ರನ ಆರಾಧನೆಯನ್ನು ಮಾಡುವುದು.ನಮಗೆ ವರ್ಷದಲ್ಲಿ ಹನ್ನೆರಡು ಅಮಾವಾಸ್ಯೆಗಳು ಬರುತ್ತವೆ. ಅಧಿಕ ಮಾಸ ಬಂದಾಗ ಮಾತ್ರ 13 ಅಮಾವಾಸ್ಯೆಗಳು ಬರುತ್ತವೆ. ಈ ಎಲ್ಲ ಅಮಾವಾಸ್ಯೆಗಳಲ್ಲಿ ಲಕ್ಷ್ಮೀ ದೇವಿಗೆ ಅತ್ಯಂತ ಪ್ರಿಯವಾದ ಅಮಾವಾಸ್ಯೆ ಎಂದರೆ ಈ ದೀಪಾವಳಿಯಲ್ಲಿ ಬರುವ ಅಮಾವಾಸ್ಯೆ. ಈ ದೀಪಾವಳಿಯ ಅಮವಾಸ್ಯೆಯ ದಿನ ಶ್ರದ್ಧೆ, ಭಕ್ತಿಯಿಂದ ನಿರ್ಮಲವಾದ ಮನಸ್ಸಿನಿಂದ ಲಕ್ಷ್ಮಿ ದೇವಿಯ ಆರಾಧನೆ ಮಾಡಿದರೆ ಲಕ್ಷ್ಮಿ ದೇವಿಯು ಸ್ಥಿರವಾಗಿ ವಾಸ ಮಾಡುತ್ತಾಳೆ.

ಆದರೆ ಲಕ್ಷ್ಮಿ ದೇವಿಗೆ ಇನ್ನೊಂದು ಹೆಸರು ಚಂಚಲೆ. ಆದ್ದರಿಂದ ನಮ್ಮ ಮನೆಗೆ ಬರುವುದು ಹೋಗುವುದು ಅಂತಹದ್ದನ್ನು ಮಾಡುತ್ತ ಇರುತ್ತಾಳೆ . ಅಂದರೆ ದುಡ್ಡು ಬರುವುದು ಹೋಗುವುದು ಅಂತಹದ್ದು ನಡೆಯುತ್ತಾ ಇರುತ್ತದೆ. ಆದ್ದರಿಂದ ಈ ದೀಪಾವಳಿಯ ದಿನ ನಾವು ಹೇಳುವ ಹಾಗೆ ಲಕ್ಷ್ಮಿ ದೇವಿಯ ಆರಾಧನೆ ಮಾಡಿದರೆ ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬರುವುದು ಖಚಿತ. ಹಾಗೆಯೇ ಹೊರಗಡೆ ಹೋಗುವುದು ಕೂಡ ಕಡಿಮೆಯಾಗುತ್ತದೆ. ಅಂದರೆ ಆದಾಯ ಹೆಚ್ಚಾಗಿ ಖರ್ಚುಗಳು ಕಡಿಮೆಯಾಗುತ್ತವೆ ಎಂದರ್ಥ.ಸ್ಥಿರ ಲಕ್ಷ್ಮಿಯ ಅನುಗ್ರಹ ನಮಗೆ ಲಭಿಸುವ ಅವಕಾಶಗಳು ಹೆಚ್ಚು. ಈ ದೀಪಾವಳಿಯ ಅಮಾವಾಸ್ಯೆ ದಿನ ಕುಟುಂಬದವರೆಲ್ಲ ಅಭ್ಯಂಜನ ಸ್ನಾನವನ್ನು ಮಾಡಬೇಕು. ಮುತ್ತೈದೆಯರು ಅರಿಶಿನವನ್ನು ಹಚ್ಚಿಕೊಂಡು ಸ್ನಾನವನ್ನು ಮಾಡಬೇಕು . ಈ ದಿನ ಚಿಕ್ಕ ಮಕ್ಕಳನ್ನು ಕೂರಿಸಿ ಮನೆಯ ಹಿರಿಯರು ಆ ಮಗುವಿಗೆ ಆರತಿಯನ್ನು ಮಾಡಿ, ಆಶೀರ್ವಾದ ಮಾಡಬೇಕು. ಹಾಗೆಯೇ ಇನ್ನೊಂದು ಮುಖ್ಯವಾದ ಕೆಲಸವನ್ನು ಕೂಡ ಮಾಡಬೇಕಾಗುತ್ತದೆ.

 

 

 

ಉತ್ತರಾಣಿ ಗಿಡವನ್ನು ಬೇರಿನ ಸಮೇತ ಕಿತ್ತುಕೊಂಡು ಮನೆಗೆ ತರಬೇಕು. ಕುಟುಂಬದಲ್ಲಿ ಎಷ್ಟು ಜನ ಇರುತ್ತಾರೋ, ಅಷ್ಟು ಗಿಡಗಳನ್ನು ತರಬೇಕು. ಸ್ನಾನ ಮಾಡುವಾಗ ತಲೆ ಸುತ್ತ ಮೂರು ಬಾರಿ ವಿರುದ್ಧವಾಗಿ ಸುತ್ತಿ, ಆ ಗಿಡವನ್ನು ದೂರ ಎಸೆಯಬೇಕು. ಉತ್ತರಾಣಿ ಗಿಡದಿಂದ ದೃಷ್ಟಿ ತೆಗೆಯುವುದರಿಂದ ಅಪಮೃತ್ಯು ದೋಷಗಳು ಇದ್ದರೂ ಸಹ ಅವು ದೂರವಾಗುತ್ತವೆ. ಹೀಗೆ ಮಾಡುವುದರಿಂದ ದೋಷಗಳು ದೂರವಾಗಿ ಲಕ್ಷ್ಮಿ ಕಟಾಕ್ಷ ಸಹ ದೊರೆಯುತ್ತದೆ. ನಂತರ ಹೊಸ ಬಟ್ಟೆಯನ್ನು ದರಿಸಬೇಕು. ಸೂರ್ಯೋದಯಕ್ಕೆ ಮುನ್ನವೇ ಲಕ್ಷ್ಮಿ ಪೂಜೆಯನ್ನು ಮಾಡಬೇಕು.ಹಾಗೆಯೇ ಈ ದಿನ ಕುಲ ದೇವರನ್ನು ಸಹ ಮೊದಲಿಗೆ ಪೂಜಿಸಬೇಕು. ಅರಿಶಿಣ, ಕುಂಕುಮದಿಂದ ಲಕ್ಷ್ಮೀದೇವಿ ಮತ್ತು ಕುಲ ದೇವರನ್ನು ಪೂಜಿಸಬೇಕು. ದೇವಿಗೆ ಕೆಂಪು ಬಣ್ಣದ ಹೂವಿನಿಂದ ಅಲಂಕರಿಸಬೇಕು ಆದರೆ ಲಕ್ಷ್ಮೀದೇವಿ ಕಮಲಪ್ರಿಯೆ, ಪದ್ಮಪ್ರಿಯೆ. ಆದ್ದರಿಂದ ಕಮಲದ ಹೂವುಗಳಿಂದ ಪೂಜಿಸುವುದು ತುಂಬಾ ಒಳ್ಳೆಯದು.ಪೂಜೆ ಮಾಡುವಾಗ ಕಮಲದ ಹೂವು ಗಳಿಂದ ಸಹ ಹೋಮವನ್ನು ಮಾಡುತ್ತಾರೆ. ಒಂದು ವೇಳೆ ಕಮಲದ ಹೂವು ದೊರೆಯದಿದ್ದರೆ ಕೆಂಪು ಬಣ್ಣದ ಹೂವುಗಳನ್ನು ತುಪ್ಪದಲ್ಲಿ ಅದ್ದಿ, ಹೋಮದಲ್ಲಿ ಸಮರ್ಪಿಸಬಹುದು. ಲಕ್ಷ್ಮಿ ದೇವಿಯ ಅಷ್ಟೋತ್ತರ ಸ್ತೋತ್ರವನ್ನು ಪಠಿಸಬೇಕು, ದೀಪವನ್ನು ಸಮರ್ಪಿಸಬೇಕು.

ನೈವೇದ್ಯವಾಗಿ ಸ್ವಲ್ಪ ಬೆಲ್ಲವನ್ನು ಹಸುವಿನ ತುಪ್ಪದಲ್ಲಿ ದೇವರಿಗೆ ನೈವೇದ್ಯವಾಗಿ ಸಮರ್ಪಿಸಬೇಕು. ನಂತರ ಇದನ್ನು ಮನೆಯವರೆಲ್ಲ ಪ್ರಸಾದವಾಗಿ ಸ್ವೀಕರಿಸಬೇಕು. ಹಾಗೆಯೇ 5 ಬಾಳೆ ಹಣ್ಣನ್ನು ದೇವರಿಗೆ ನೈವೇದ್ಯವಾಗಿ ಇಟ್ಟು ನಂತರ ಇದನ್ನು ದೇವಸ್ಥಾನದಲ್ಲಿ ಪ್ರಸಾದವಾಗಿ ಹಂಚಬೇಕು. ಈ ದಿನ ಗೋಧೂಳಿ ಸಮಯದಲ್ಲಿ ದೀಪಾರಾಧನೆಯನ್ನು ಮುಖ್ಯವಾಗಿ ಮಾಡಬೇಕು.ದೀಪಾವಳಿ ಹಬ್ಬದ ದಿನ ಹೀಗೆ ಯಾರು ಪೂಜೆ ಮಾಡುತ್ತಾರೋ ? ಅಂಥವರಿಗೆ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ದೊರೆತು, ಅಖಂಡ ಐಶ್ವರ್ಯ ಸಂಪತ್ತು ಪ್ರಾಪ್ತಿಯಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top