ಮನೋರಂಜನೆ

ನಾಪತ್ತೆಯಾಗಿದ ದುನಿಯಾ ವಿಜಿ ಮೊದಲ ಪತ್ನಿಗೆ ಮಧ್ಯಂತರ ಜಾಮೀನು ಮಂಜೂರು

ದುನಿಯಾ ವಿಜಿ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಪತ್ನಿ ನಾಗರತ್ನ ನಾಪತ್ತೆಯಾಗಿದ್ದಾರೆ. ಇವತ್ತಿಗೆ 7 ದಿನವಾದರೂ ನಾಗರತ್ನ ಪತ್ತೆಯಾಗದೇ ಇರೋದು ಗಿರಿನಗರ ಪೊಲೀಸರಿಗೆ ತಲೆನೋವಾಗಿದೆ. ಘಟನೆ ಸಂಬಂಧ ಸೆರೆಸಿಕ್ಕ ಸಿಸಿಟಿವಿ ವಿಡಿಯೋ ಆಧರಿಸಿ ಡಿಸಿಪಿ ಅಣ್ಣಾಮಲೈ ಅವರು ನಾಗರತ್ನ ಅವರನ್ನು ಬಂಧಿಸುವಂತೆ ಗಿರಿನಗರ ಇನ್ ಸ್ಪೆಕ್ಟರ್ ಕೊಟ್ರೇಶಿ ಅವರಿಗೆ ಸೂಚನೆ ನೀಡಿದ್ದಾರೆ.

“ಅವರಿಗಾಗಿ ಪೊಲೀಸರ ಶೋಧ ಕಾರ್ಯ ಮುಂದುವರೆದಿದೆ, ಕೀರ್ತಿಗೌಡ ಮೇಲೆ ಹಲ್ಲೆ ಮಾಡಿದ ಸಿಸಿಟಿವಿ ದೃಶ್ಯಗಳು ಬಿಡುಗಡೆಯಾದ ದಿನದಿಂದ ನಾಗರತ್ನ ನಾಪತ್ತೆಯಾಗಿದ್ದಾರೆ. ಹೀಗಾಗಿ ಒಂದು ವಾರದ ಒಳಗೆ ಉತ್ತರ ನೀಡಬೇಕೆಂದು ಸೂಚನೆ ನೀಡಿದ್ದೇವೆ” ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾ ಮಲೈ ತಿಳಿಸಿದರು.ಇತ್ತೀಚಿನ ದಿನಗಳಲ್ಲಿ ಹಲವು ವಿವಾದಗಳ ಮೂಲಕ ಸುದ್ದಿ ಆಗುತ್ತಿರುವ ದುನಿಯಾ ವಿಜಯ್ ಹಾಗೂ ಅವರ ಕುಟುಂಬಕ್ಕೆ ಎಚ್ಚರಿಕೆ ನೀಡಿರುವ ಅಣ್ಣಾಮಲೈ ಅವರು ಪರಸ್ಪರ ಕಿತ್ತಾಡಿಕೊಳ್ಳುವುದು ಬೇಡವೆಂದು ಎಚ್ಚರಿಕೆ ನೀಡಿದ್ದಾರೆ.ಎರಡು ಕುಟುಂಬಗಳಿಗೆ ದುನಿಯಾ ವಿಜಯ್ ಕುಟುಂಬದವರು ಪದೇ ಪದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಸಮಾಜದ ಶಾಂತಿ ಕದಡುತ್ತಿದ್ದಾರೆ ಎಂದು ಎಚ್ಚರಿಕೆ ನೀಡಲಾಗಿದ್ದು, ಸಿಆರ್ ಪಿಸಿ ಕಲಂ 107 ನೋಟಿಸ್ ಜಾರಿ ಮಾಡಲಾಗಿತ್ತು ಹಾಗೂ ಮೊನ್ನೆಯಷ್ಟೇ ದುನಿಯಾ ವಿಜಯ್ರವರಿಗೆ ನೋಟೀಸ್ ಕೂಡ ಕಳುಯಿಸಲಾಗಿತ್ತು.

 

 

 

ವಿಜಿ ಮೊದಲನೇ ಹೆಂಡತಿ ನಾಗರತ್ನ ರವರ ಮೇಲೆ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಇಶ್ಯೂ ಮಾಡಲಾಗಿತ್ತು ಆದ್ರೆ ನಾಗರತ್ನ ನಾಪತ್ತೆಯಾಗಿದ್ದಾರೆ,ಈಗ ನಾಗರತ್ನ ರವರಿಗೆಮಧ್ಯಂತರ ಜಾಮೀನು ಮಂಜೂರು ನೀಡಲಾಗಿದೆ,ಹೌದು ನಾಗತ್ನ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಜೊತೆಗೆ ದೀಪಾವಳಿ ಹಬ್ಬ ಇರುವ ಕಾರಣ ಜಾಮೀನು ನೀಡಬೇಕೆಂದು ನಾಗರತ್ನ ಪರ ವಕೀಲರು ವಾದ ಮಂಡಿಸಿದ್ದರು. ನಿರೀಕ್ಷಣಾ ಜಾಮೀನು ಅರ್ಜಿ ಇತ್ಯರ್ಥವಾಗುವವರೆ ಮಧ್ಯಂತರ ಜಾಮೀನು ನೀಡಲಾಗಿದೆ ಎಂದಿದೆ ಕೋರ್ಟ್.ವಿಜಿ ಎರಡನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ಪ್ರಕರಣದ ಬಳಿಕ ನಾಗರತ್ನ ನಾಪತ್ತೆಯಾಗಿದ್ದರು. ಬಳಿಕ ನಿರೀಕ್ಷಣಾ ಜಾಮೀನು ನೀಡುವಂತೆ ಕೋರ್ಟ್ ಮೊರೆಹೋಗಿದ್ದರು.

ಈ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಿರುವ ಸೆಷನ್ಸ್ ನ್ಯಾಯಾಲಯ 50 ಸಾವಿರ ರೂ. ಬಾಂಡ್, ಒಬ್ಬರು ಶ್ಯೂರಿಟಿ ಮೇರೆಗೆ ಜಾಮೀನು ಮಂಜೂರು ಮಾಡಿದೆ. ಪೊಲೀಸರ ತನಿಖೆಗೆ ಸಹಕರಿಸುವಂತೆ ಸೂಚನೆ ನೀಡಿದ್ದು ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿದೆ.ನಾಗತ್ನ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಜೊತೆಗೆ ದೀಪಾವಳಿ ಹಬ್ಬ ಇರುವ ಕಾರಣ ಜಾಮೀನು ನೀಡಬೇಕೆಂದು ನಾಗರತ್ನ ಪರ ವಕೀಲರು ವಾದ ಮಂಡಿಸಿದ್ದರು. ನಿರೀಕ್ಷಣಾ ಜಾಮೀನು ಅರ್ಜಿ ಇತ್ಯರ್ಥವಾಗುವವರೆ ಮಧ್ಯಂತರ ಜಾಮೀನು ನೀಡಲಾಗಿದೆ ಎಂದಿದೆ ಕೋರ್ಟ್. ನಟ ವಿಜಯ್ ಜೈಲಿನಲ್ಲಿದ್ದ ಸಂದರ್ಭದಲ್ಲಿ ನಾಗರತ್ನ ಅವರು ಕೀರ್ತಿಗೌಡ ಮನೆಗೆ ನುಗ್ಗಿ ಹಲ್ಲೆ ನಡೆಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಸಂಬಂಧ ಕೀರ್ತಿಗೌಡ ದಾಖಲಿಸಿರುವ ದೂರಿನನ್ವಯ ತನ್ನನ್ನು ಬಂಧಿಸಲೆಂದೇ ಪೊಲೀಸರು ಬಂದಿರಬಹುದು ಎಂಬ ಭೀತಿಯಲ್ಲಿ ನಾಗರತ್ನ ಬಾಗಿಲು ತೆಗೆಯಲು ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top