ಮನೋರಂಜನೆ

ರಾಮಮೌಳಿಯ ಮೆಗಾ ಕಾಂಬಿನೇಷನ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ಕನ್ನಡತಿ.

ಭಾರತೀಯ ಚಿತ್ರರಂಗದ ಅತ್ಯುತ್ತಮ ನಿರ್ದೇಶಕ ಎನಿಸಿಕೊಂಡಿರುವ ‘ಜಕ್ಕಣ್ಣ’ ನಾಮಾಂಕಿತ ಎಸ್.ಎಸ್. ರಾಜಮೌಳಿ ‘ಬಾಹುಬಲಿ’ ಎಂಬ ಮಹೋನ್ನತ ಸರಣಿ ಸಿನಿಮಾದ ಮೂಲಕ ಭಾರತೀಯ ಸಿನಿಮಾರಂಗವನ್ನು ಇಡೀ ಜಗತ್ತಿಗೇ ಪರಿಚಯಿಸಿದ್ದು ಈಗ ಇತಿಹಾಸ. ಇಂಥಾ ರಾಜಮೌಳಿ ಬಾಹುಬಲಿ ಸರಣಿಯ ನಂತರ ಯಾವ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಸಿನಿಪ್ರಿಯರ ಕುತೂಹಲಕ್ಕೆ ಐದಾರು ತಿಂಗಳ ಹಿಂದೆಯೇ ಕೊನೆಗೂ ತೆರೆ ಬಿದ್ದಿದೆ..

 

 

ಬಾಹುಬಲಿ ಭರ್ಜರಿ ಯಶಸ್ಸಿನ ನಂತರ ರಾಜಮೌಳಿ ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾಕ್ಕೆ ಕೈ ಹಾಕಿದ್ದು ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಯಂಗ್ ಟೈಗರ್ ಜೂನಿಯರ್ NTR ಒಟ್ಟಾಗಿ ಈ ಚಿತ್ರದಲ್ಲಿ ನಟಿಸಲಿದ್ದಾರಂತೆ. ಹೆಸರಿಡದ ಈ ಮೋಷನ್ ಪೋಸ್ಟರ್ ಅನ್ನು ನಿರ್ದೇಶಕ ರಾಜಮೌಳಿ ಬಿಡುಗಡೆ ಮಾಡಿದ್ದಾರೆ. ಮೋಷನ್ ಫಿಕ್ಚರ್ ನಲ್ಲಿ ‘#RRR’ ಎನ್ನುವ ಅಕ್ಷರಗಳು ಮಾತ್ರ ಕಾಣಿಸಿದ್ದು ಇದು ಚಿತ್ರದ ಶೀರ್ಷಿಕೆಯಲ್ಲ ಬದಲಾಗಿ ರಾಜಮೌಳಿ, ರಾಮ್ ಚರಣ್ ಹಾಗೂ ಜ್ಯೂ. ಎನ್.ಟಿ.ರಾಮ್ ರಾವ್ ಅವರ ಹೆಸರುಗಳ ಮೊದಲ ಅಕ್ಷರಗಳಾಗಿವೆ. ಚಿತ್ರಕ್ಕೆ ಯಾವ ಶೀರ್ಷಿಕೆ ಇಡಲಾಗಿದೆ ಎಂಬುದನ್ನು ಇನ್ನೂ ಬಹಿರಂಗ ಗೊಳಿಸಿಲ್ಲ.

ಈ ಮಧ್ಯೆ ಚಿತ್ರಕ್ಕೆ ನಾಯಕಿ ಯಾರಾಗುತ್ತಾರೆ ಎನ್ನುವ ಚರ್ಚೆಗಳೂ ಭರ್ಜರಿಯಾಗಿ ಏರ್ಪಟ್ಟಿದ್ದು ಅದಕ್ಕೂ ಈಗಾಗಲೇ ಉತ್ತರ ಸಿಕ್ಕಿದೆ ಎನ್ನುತ್ತಾರೆ ಟಾಲಿವುಡ್ ಮಂದಿ.. ಮೂಲಗಳ ಪ್ರಕಾರ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದು ಎನ್​ಟಿಆರ್​​ಗೆ ಕೀರ್ತಿ ಸುರೇಶ್ ಹಾಗೂ ರಾಮ್​ಚರಣ್ ತೇಜಗೆ ಕನ್ನಡತಿ ಪೂಜಾ ಹೆಗ್ಡೆ ನಾಯಕಿಯಾಗಲಿದ್ದಾರಂತೆ.. ಈ ಮೂಲಕ ರಾಜಮೌಳಿ ಸಿನಿಮಾದಲ್ಲಿ ನಟಿಸುವಂತ ಅವಕಾಶವನ್ನು ಪೂಜಾ ಗಿಟ್ಟಿಸಿಕೊಂಡಿದ್ದಾಳೆ.. ಅಂದಹಾಗೆ ಇದೆ ವರ್ಷ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿದ್ದ ರಾಮ್ ಚರಣ್ ಅವರ ‘ರಂಗಸ್ಥಲಂ’ ಚಿತ್ರದ ಹಾಡೊಂದಲ್ಲಿ ಪೂಜಾ ಸೊಂಟ ಬಳುಕಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top