ಮನೋರಂಜನೆ

ಪುನೀತ್ ಚಿತ್ರಕ್ಕೆ ನಾಯಕಿಯಾದಳು ಮಿಲ್ಕಿ ಬ್ಯೂಟಿ ತಮನ್ನಾ.

ರಾಜಕುಮಾರದಂತಹ ಪರಿಪೂರ್ಣ ಹಿಟ್ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಪುನೀತ್ ರಾಜಕುಮಾರ್ ಮತ್ತು ಸಂತೋಷ್ ಆನಂದರಾಮ್ ಅವರ ಕಾಂಬಿನೇಷನ್ ನಲ್ಲಿ ಮತ್ತೊಂದು ಕನ್ನಡ ಚಿತ್ರ ಮೂಡಿಬರುತ್ತಿದ್ದು ಚಿತ್ರಕ್ಕೆ ‘ಯುವರತ್ನ’ಎಂಬ ಟೈಟಲ್ ಫಿಕ್ಸ್ ಮಾಡಲಾಗಿದೆ,. ಪವರ್ ಆಫ್ ಯೂತ್ ಎಂಬ ಟ್ಯಾಗ್ ಲೈನ್ ಹೊಂದಿರುವ ಯುವರತ್ನ ಟೈಟಲ್ ಅನ್ನು ಕನ್ನಡ ರಾಜ್ಯೋತ್ಸವದಂದು ಲಾಂಚ್ ಮಾಡಲಾಗಿತ್ತು.. ಇದೀಗ ಈ ಸಿನಿಮಾಗೆ ನಾಯಕಿ ಯಾರಾಗಬಹುದು ಎಂಬ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ.

ಅಪ್ಪುಗೆ ತಮನ್ನಾ ನಾಯಕಿ?
ಪುನೀತ್ ಅವರ ‘ಯುವರತ್ನ’ ಚಿತ್ರಕ್ಕೆ ನಾಯಕಿ ಯಾರಾಗ್ತಾರೆ ಎಂಬ ಕುತೂಹಲ ಕಾಡುತ್ತಿದೆ. ಈ ಬಗ್ಗೆ ನಿರ್ದೇಶಕರನ್ನ ಕೇಳಿದಾಗ, ಸದ್ಯಕ್ಕೆ ನಾಯಕಿ ಫೈನಲ್ ಆಗಿಲ್ಲ. ಆದ್ರೆ, ದೊಡ್ಡ ನಟಿಯೊಬ್ಬರನ್ನ ಆಯ್ಕೆ ಮಾಡುವ ಯೋಚನೆ ಇದೆ ಎಂದಿದ್ದರು. ಅಂತೆಯೇ ಈಗ ತಮನ್ನಾ ಚಿತ್ರದ ಹೀರೋಯಿನ್ ಎಂಬ ಸುದ್ದಿ ಕೇಳಿಬಂದಿದೆ.. ಹೊಂಬಾಳೆ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾದ ‘ಕೆ ಜಿ ಎಫ್’ ಚಿತ್ರದ ಒಂದು ಹಾಡಿನಲ್ಲಿ ಯಶ್ ಜೊತೆಗೆ ತಮನ್ನಾ ಹೆಜ್ಜೆ ಹಾಕಿದ್ದರು. ಈಗ ಅದೇ ನಿರ್ಮಾಣ ಸಂಸ್ಥೆಯ ‘ಯುವರತ್ನ’ ಚಿತ್ರಕ್ಕೆ ಇದೀಗ ತಮನ್ನಾರನ್ನೇ ಆಯ್ಕೆಮಾಡಿದ್ದಾರೆ ಎನ್ನಲಾಗಿದೆ… ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ.

16ವರ್ಷಗಳ ನಂತರ ಕಾಲೇಜು ಹುಡುಗನ ಪಾತ್ರದಲ್ಲಿ ಅಪ್ಪು:
‘ಯುವರತ್ನ’ ಸಿನಿಮಾದಲ್ಲಿ ಕಾಲೇಜು ವಿದ್ಯಾರ್ಥಿಯಾಗಿ ನಟಿಸ್ತಿದ್ದಾರೆ. ವಿಶೇಷವೆಂದರೆ 16 ವರ್ಷದ ಬಳಿಕ ಪವರ್ ಸ್ಟಾರ್​ ಕಾಲೇಜು ಮೆಟ್ಟಿಲು ಹತ್ತುತ್ತಿದ್ದಾರೆ. ತಮ್ಮ ಆರಂಭದ ಚಿತ್ರಗಳಾದ ಅಪ್ಪು, ಅಭಿ ಸಿನಿಮಾಗಳಲ್ಲಿ ಪುನೀತ್ ಕಾಲೇಜು ಹುಡುಗನಾಗಿ ಮಿಂಚಿದ್ದರು.

ಅಂದಹಾಗೆ ರಾಜಕುಮಾರ ಚಿತ್ರವನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಪ್ರೊಡಕ್ಷನ್ ಅವರ ವಿಜಯ್ ಕಿರಂಗದೂರು ಅವರೇ ಮತ್ತೆ ಪುನೀತ್ ಮತ್ತು ಸಂತೋಷ್ ಜೋಡಿಯ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ದೊಡ್ಡ ಬಜೆಟ್’ನಲ್ಲಿ ಚಿತ್ರ ನಿರ್ಮಾಣವಾಗಲಿದ್ದು ಚಿತ್ರಕ್ಕೆ ನಾಯಕಿ, ತಾರಾಗಣ ಮತ್ತು ತಾಂತ್ರಿಕ ವರ್ಗವನ್ನು ಇನ್ನಷ್ಟೇ ಫೈನಲ್ ಮಾಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top