ಸಮಾಚಾರ

“ಮಹಿಳೆಯರನ್ನು ನೋಡಲು ಇಚ್ಛಿಸದ ಅಯ್ಯಪ್ಪ ದೇವರೇ ಅಲ್ಲ” ಪ್ರಕಾಶ್ ರೈ ವಿವಾದದ ಕಿಡಿ.

ಭಾರತೀಯ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದುಕೊಂಡಿರೋ ಪ್ರಕಾಶ್ ರೈ ಇತ್ತೀಚಿನ ದಿನಗಳಲ್ಲಿ ಒಂದು ಪಂಥದವರನ್ನು ಗುರಿಯಾಗಿಟ್ಟುಕೊಂಡು ನೇರಾನೇರಾ ವಾದ ಮಂಡಿಸುತ್ತಾ ಚರ್ಚೆ ಹುಟ್ಟು ಹಾಕಿ ವಿವಾದಕ್ಕೂ ಕಾರಣವಾಗಿದ್ದರು. ಹಿಂದೆಲ್ಲಾ ಕೇವಲ ತಮ್ಮ ಸಿನಿಮಾ ಮತ್ತು ಅಮೋಘ ಅಭಿನಯದ ಮೂಲಕ ಮಾತ್ರವೇ ಸುದ್ದಿಯಾಗುತ್ತಿದ್ದ ಪ್ರಕಾಶ್ ರೈ ಈಗೆಲ್ಲಾ ಕೇವಲ ಅನಗತ್ಯ ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳೋ ಮೂಲಕವೇ ಸುದ್ದಿಯಾಗುತ್ತಿದ್ದಾರೆ.. ಇಂಥಾ ರೈ ಈಗ ಮತ್ತೊಂದು ವಿವಾದಕ್ಕೀಡಾಗಿದ್ದಾರೆ. ಈಗ ಅವರ ಹೇಳಿಕೆ ಬಂದಿರುವುದು ಶಬರಿಮಲೆ ಅಯ್ಯಪ್ಪನ ಕುರಿತು.

“ಹೆಣ್ಣು ಅಂದ್ರೆ ತಾಯಿ, ಮಮತಾಮಯಿ, ಕ್ಷಮಯಾಧರಿತ್ರಿ ಎನ್ನುತ್ತೇವೆ. ಭೂಮಿಯನ್ನು ಹೆಣ್ಣಿಗೆ ಹೋಲಿಸುತ್ತೇವೆ.ಆದ್ರೆ ಹೆಣ್ಣನ್ನು ಪೂಜೆಯಿಂದ ಹೊರಗಿಡೋದು ಅಂದ್ರೆ ಏನರ್ಥ? ದೇವರ ದರ್ಶನಕ್ಕೆ ಸ್ತ್ರೀಯರನ್ನು ಬಿಡದ ಭಕ್ತರು ಭಕ್ತರೇ ಅಲ್ಲ ಎಂದು ಪ್ರಕಾಶ್ ರೈ ಹೇಳಿದ್ದಾರೆ. ಮಹಿಳೆಯರನ್ನು ನೋಡದ ದೇವರು ದೇವರೇ ಅಲ್ಲ.. ಮಹಿಳೆಯನ್ನು ಪೂಜೆಯಿಂದ ದೂರವಿಟ್ಟರೆ ಅದಕ್ಕೆ ಅರ್ಥವೇನು? ಮಹಿಳೆಯರು ಯುವತಿಯರಿಗೆ ಪೂಜೆಯಿಂದ ನಿರ್ಬಂಧ ವಿಧಿಸುವ ಧರ್ಮ ಧರ್ಮವೇ ಅಲ್ಲ” ಎಂದು ಪ್ರಕಾಶ್ ಹೇಳಿಕೆ ನೀಡಿದ್ದು ಸದ್ಯ ವಿವಾದದ ಕಿಡಿ ಹೊತ್ತಿಕೊಂಡಿದೆ.

ಗಲ್ಫ್ ನ ಅಂತರಾಷ್ಟ್ರೀಯ ಪುಸ್ತಕ ಮೇಳೆದಲ್ಲಿ ಭಾಗಿಯಾಗಿದ್ದ ಪ್ರಕಾಶ್ ರೈ ಅವರು ಶಬರಿಮಲೆ ದೇವಸ್ಥಾನದ ಕುರಿತು ಮಾತನಾಡುತ್ತಾ “ನನಗೆ ಶಬರಿಮಲೆಗೆ ಹೋಗಿ ಪೂಜಿಸಲು ಆಸಕ್ತಿಯೇ ಇಲ್ಲ. ಮಹಿಳೆಯರನ್ನು ಹತ್ತಿರ ಸೇರಿಸದ ದೇವರನ್ನು ನೋಡಲು ನನಗೆ ಇಷ್ಟವಿಲ್ಲ. ಮಹಿಳೆಯರಿಗೆ ದರ್ಶನ ಕೊಡದ ಅಯ್ಯಪ್ಪ ದೇವರೆಂದೇ ಅನಿಸುವುದಿಲ್ಲ. ಮಹಿಳೆಯನ್ನು ಪ್ರಾರ್ಥಿಸಲು ಬಿಡದ ಧರ್ಮ ಧರ್ಮವೇ ಅಲ್ಲ. ಶಬರಿಮಲೆಯಲ್ಲಿ ಮಹಿಳೆಯರನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top