ಸಮಾಚಾರ

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ- ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದ RBI

ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರುವ ಪ್ರತಿಭಾನ್ವಿತ ಉದ್ಯೋಗಾಕಾಂಕ್ಷಿಗಳಿಗೊಂದು ಸಿಹಿ ಸುದ್ದಿ. ಭಾರತೀಯ ರಿಸರ್ವ್ ಬ್ಯಾಂಕ್(RBI) ಉದ್ಯೋಗಾವಕಾಶ ನೀಡ್ತಿದೆ. 14 ಹುದ್ದೆಗಳಿಗೆ RBI ಅರ್ಜಿ ಆಹ್ವಾನಿಸಿದೆ. ರಿಸರ್ವ್ ಬ್ಯಾಂಕ್ ನ ಗ್ರೇಡ್ ಬಿ ಹುದ್ದೆಗೆ ಈ ಹದಿನಾಲ್ಕು ನೇಮಕಾತಿ ನಡೆಯಲಿದೆ.

RBIನ ಗ್ರೇಡ್ ಬಿ ಹುದ್ದೆಗೆ ನವೆಂಬರ್ 30 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ ನೀಡಲಾಗಿದೆ. ಒಟ್ಟು 14 ಹುದ್ದೆಗಳಲ್ಲಿ 6 ಸಾಮಾನ್ಯ ಹುದ್ದೆಯಾಗಿದೆ. 3 SC, 4 OBC ಹುದ್ದೆಗೆ ನೇಮಕಾತಿ ನಡೆಯಲಿದೆ.. ಹುದ್ದೆಯ ಮತ್ತು ನೇಮಕಾತಿಯ ಬಗ್ಗೆ RBIನ www.rbi.org.in ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದ್ದು ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಇದೇ ವೆಬ್ ಸೈಟ್ ನಲ್ಲಿ ಭರ್ತಿ ಮಾಡಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 34 ವರ್ಷಕ್ಕಿಂತ ಕೆಳಗಿರಬೇಕು. ಅರ್ಥಶಾಸ್ತ್ರದಲ್ಲಿ PHD ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.. ಇನ್ನು ಹುದ್ದೆಗೆ ನೇಮಕವಾದ ಅಭ್ಯರ್ಥಿಗಳಿಗೆ 42,150 ರೂಪಾಯಿ ಮೂಲ ವೇತನ ಸಿಗಲಿದ್ದು ಭತ್ಯೆಯೆಲ್ಲ ಸೇರಿ ಅಭ್ಯರ್ಥಿ ಸುಮಾರು 86,422 ರೂಪಾಯಿ ಪ್ರತಿ ತಿಂಗಳು ಕೈಸೇರಲಿದೆ. ಎಲ್ಲಾ ಹದಿನಾಲ್ಕು ಹುದ್ದೆಗಳೂ ಕೂಡ ಸಂದರ್ಶನದ ಮೂಲಕ ನೇಮಕವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top