ಸಮಾಚಾರ

135 ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿ ದಾಖಲೆ ಬರೆದ ಭೂಪ.

ಟ್ರಾಫಿಕ್ ನಿಯಮ ಉಲ್ಲಂಘನೆಯಲ್ಲಿ ದಾಖಲೆಯೊಂದು ನಿರ್ಮಾಣವಾಗಿದೆ. ಒಂದಲ್ಲ, ಎರಡಲ್ಲ, ಬರೋಬ್ಬರಿ 135 ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಲಾಗಿದ್ದು ಈ ಮೂಲಕ ಗರಿಷ್ಠ ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ದಾಖಲೆ ಬರೆಯಲಾಗಿದೆ. ಅಷ್ಟೇ ಅಲ್ಲದೇ 31,556 ರೂಪಾಯಿ ದಂಡ ಹಾಕಲಾಗಿದೆ.

ಹೀಗೆ ಅತಿ ಹೆಚ್ಚು ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಮಹಾನುಭಾವ ಹೈದರಾಬಾದ್‌ನ ಕೃಷ್ಣ ಪ್ರಕಾಶ್ ಎಂಬಾತ.. ಸಿಗ್ನಲ್ ಜಂಪ್, ಒನ್ ವೇ ರೈಡಿಂಗ್, ಹೆಲ್ಮೆಟ್ ಇಲ್ಲದೆ ರೈಡಿಂಗ್ ಸೇರಿದಂತೆ ಬಹುತೇಕ ಎಲ್ಲಾ ಟ್ರಾಫಿಕ್‌‌ ನಿಯಮಗಳನ್ನ ಉಲ್ಲಂಘಿಸಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಈತ ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸುತ್ತಿದ್ದ. ತಕ್ಷಣವೇ ಅಡ್ಡಗಟ್ಟಿದ ಪೊಲೀಸರು ಬೈಕ್ ನಿಲ್ಲಿಸಿ ಬೈಕ್ ನಂಬರ್ ತಮ್ಮ ನಿಯಮ ಉಲ್ಲಂಘನೆ ಪರೀಕ್ಷಿಸೋ ಎಲೆಕ್ಟ್ರಿಕಲ್ ಮಶಿನ್‌ನಲ್ಲಿ ಪರೀಕ್ಷಿಸಿದ್ದಾರೆ. ಆತನ ಬೈಕ್ ನೋಂದಣಿ ಸಂಖ್ಯೆಯನ್ನು ಎಲೆಕ್ಟ್ರಿಕಲ್ ಮಶಿನ್‌ನಲ್ಲ ಅಪ್‌ಡೇಟ್ ಮಾಡುತ್ತಿದ್ದಂತೆ ಬರೋಬ್ಬರಿ 135 ಪ್ರಕರಣಗಳು ದಾಖಲಾಗಿರೋದು ಬೆಳಕಿಗೆ ಬಂದಿದೆ.

135 ಕೇಸ್ ದಾಖಲಾಗಿತ್ತು. ಇದರ ಒಟ್ಟು ಮೊತ್ತ 31,556 ರೂಪಾಯಿ. ..135 ಕೇಸ್‍‍ಗಳಿರುವ ಕೃಷ್ಣ ಪ್ರಕಾಶ್ ಅವರ ಹೀರೋ ಬೈಕ್ ಅನ್ನು ಅಲ್ಲಿನ ಪೊಲೀಸರು ಸೀಜ್ ಮಾಡಲಾಗಿದ್ದು, ಅವರು ಬೈಕ್ ಅನ್ನು ಹಿಂಪಡೆಯಬೇಕಿದ್ದರೆ ಮೊದಲಿಗೆ ನ್ಯಾಯಾಲಯದ ವಿಚಾರಣೆಗೆ ಹೋಗಬೇಕಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top