ಭವಿಷ್ಯ

ಈ 4 ರಾಶಿಯವರು ಜೀವನದಲ್ಲಿ ಯಾವುದೇ ಕಷ್ಟವನ್ನು ಪಡದೆ ಸುಖಕರ ಬದುಕನ್ನು ಬದುಕುತ್ತಾರಂತೆ

ಈ ನಾಲ್ಕು ರಾಶಿಯವರು ಜೀವನದಲ್ಲಿ ಯಾವುದೇ ಕಷ್ಟವನ್ನು ಪಡದೆ, ಜೀವನದಲ್ಲಿ ಐಷಾರಾಮಿ ಸುಖವನ್ನು ಪಡೆಯುತ್ತಾರೆ. ಅವು ಯಾವುವು ? ಎಂಬುದನ್ನು ಈಗ ತಿಳಿದುಕೊಳ್ಳೋಣ ಬನ್ನಿ.

ಕನ್ಯಾ ರಾಶಿ:ಈ ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹ ಆದ್ದರಿಂದ ಇವರಿಗೆ ಬುದ್ದಿ ಜಾಸ್ತಿ. ಇವರ ಬಗ್ಗೆ ಯಾವುದೇ ಅನುಮಾನವಿಲ್ಲ, ಈ ರಾಶಿಯವರು ಕಷ್ಟಪಡುವುದನ್ನು ಎಂದಿಗೂ ಇಷ್ಟಪಡುವುದಿಲ್ಲ .ಅಂತಹ ಪರಿಸ್ಥಿತಿ ಬಂದರೆ ಆ ಸ್ಥಳದಿಂದ ಬೇಗನೆ ಹಿಂದೆ ಸರಿಯುತ್ತಾರೆ. ಆದ್ದರಿಂದ ಇವರು ಯಾವುದಾದರೂ ಕಠಿಣ ಪರಿಸ್ಥಿತಿಯ ಕೆಲಸವನ್ನು ಮಾಡಬೇಕೆಂದರೆ, ಆ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಬಂದು ಬಿಡುತ್ತಾರೆ. ಯಾವುದೇ ರೀತಿಯಲ್ಲಾದರೂ ಕಾರಣ ಹೇಳಿ ಹಿಂದೆ ಸರಿಯುತ್ತಾರೆ.

ತುಲಾ ರಾಶಿ:ತುಲಾ ರಾಶಿ ಶುಕ್ರ ಗ್ರಹಕ್ಕೆ ಸಂಬಂಧಪಟ್ಟ ಗ್ರಹವಾಗಿದ್ದು, ಈ ರಾಶಿಯ ವ್ಯಕ್ತಿಗಳು ಆರಾಮದಾಯಕ ಜೀವನವನ್ನು ಇಷ್ಟಪಡುತ್ತಾರೆ. ಆದರೆ ಇವರಿಗೆ ಐಶಾರಾಮೀ ಜೀವನ ವೆಂದರೆ ಬಹಳ ಇಷ್ಟ. ಆದ್ದರಿಂದ ಕೆಲಸಗಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಆದರೆ ಕೆಲಸವನ್ನು ಬೇಗ ಬೇಗನೆ ಮಾಡಿ ಮುಗಿಸುವ ಸ್ವಭಾವ ಇವರದ್ದು. ಆದರೆ ಕೆಲಸವನ್ನು ಅರ್ಧಕ್ಕೆ ಬಿಟ್ಟು ಹೋಗುವುದಿಲ್ಲ. ಸಂಪೂರ್ಣವಾಗಿ ಕೆಲಸವನ್ನು ಮಾಡಿ ಮುಗಿಸುತ್ತಾರೆ.

 

 

 

ವೃಶ್ಚಿಕ ರಾಶಿ:ಕಷ್ಟಪಟ್ಟು ಕೆಲಸ ಮಾಡುವ ಇನ್ನುಳಿದ ಜಲತತ್ವ ರಾಶಿಗಳಾದ ಕಟಕ ಮತ್ತು ಮೀನ ರಾಶಿ ಗಳಿಗಿಂತ, ಈ ರಾಶಿಯವರು ತುಂಬ ವಿಭಿನ್ನವಾಗಿ ಇರುತ್ತಾರೆ. ಇವರು ಅಧಿಕ ಸಮಯವನ್ನು ಶತ್ರುಗಳಿಂದ ಹೇಗೆ ಸೇಡು ತೀರಿಸಿಕೊಳ್ಳುವುದು ಎಂದು ಯೋಚಿಸುತ್ತಾರೆ. ಆದರೆ ಮಾಡುವ ಕೆಲಸದಲ್ಲಿ ಮನಸ್ಸಿಟ್ಟು ಶ್ರದ್ಧೆಯಿಂದ ಕೆಲಸ ಮಾಡುವುದಿಲ್ಲ. ಕೆಲಸದಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ಯೋಚಿಸುತ್ತಾರೆ.
ಧನಸ್ಸು ರಾಶಿ: ಇರುವ 12 ರಾಶಿಗಳಲ್ಲಿಯೂ ಕೂಡ ಎಲ್ಲರಿಗಿಂತ ಕೆಳಗಿನ ಸ್ಥಾನವನ್ನು ಪಡೆದಿರುವುದು ಈ ಧನಸ್ಸು ರಾಶಿ. ಅಂದರೆ ಇವರು ಅತಿ ಕಡಿಮೆ ಕಷ್ಟಪಡುವವರು, ಇವರಿಗೆ ಕಷ್ಟಪಟ್ಟು ದುಡಿಯುವುದು ಇಷ್ಟ, ಆದರೆ ಕೆಲಸ ಮಾಡಲು ಇವರ ಕೈಯಲ್ಲಿ ಆಗುವುದಿಲ್ಲ. ಇವರು ತಿರುಗಾಡಿಕೊಂಡು, ಓಡಾಡಿಕೊಂಡು ಇರುವ ಆರಾಮದಾಯಕ ಜೀವನವನ್ನು ಇಷ್ಟಪಡುತ್ತಾರೆ. ಸದಾಕಾಲ ಅವರ ಬಗ್ಗೆ ಮಾತ್ರವೇ ಆವರು ಯೋಚನೆ ಮಾಡುತ್ತಾರೆ. ಆದ್ದರಿಂದ ಯಾವುದೇ ಕೆಲಸ ಕೊಟ್ಟರೂ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಆಚೆ ಬಂದು ಬಿಡುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top