ಮನೋರಂಜನೆ

ಮುದ್ದು ಮಗಳ ಫೋಟೋವನ್ನು ಮೊದಲ ಬಾರಿಗೆ ರಿವೀಲ್ ಮಾಡಿದ ಅನು ಪ್ರಭಾಕರ್.. ಫೋಟೋ ಒಳಗಿದೆ.

ಇತ್ತೀಚಿಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಸ್ಯಾಂಡಲ್‍ವುಡ್ ನಟಿ ಅನು ಪ್ರಭಾಕರ್ ತಮ್ಮ ಮುದ್ದು ಮಗಳ ಫೋಟೋವನ್ನು ಇದೇ ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ. ದೀಪಾವಳಿ ಹಬ್ಬದಂದು ಎಲ್ಲರಿಗೂ ಶುಭಾಶಯ ತಿಳಿಸಿ ತಮ್ಮ ಪತಿ ರಘು ಮುಖರ್ಜಿ ಮತ್ತು ಮುದ್ದು ಮಗಳ ಜೊತೆಗಿನ ಫೋಟೋವನ್ನು ಅನು ಪ್ರಭಾಕರ್ ಹಂಚಿಕೊಳ್ಳುವ ಮೂಲಕ ಮಗಳನ್ನು ತಮ್ಮ ಅಭಿಮಾನಿಗಳಿಗೆ ತೋರಿಸಿದ್ದಾರೆ.

 

 

ಅನು ಪ್ರಭಾಕರ್ ಅವರು ಅಗಸ್ಟ್ 15 ಅಂದರೆ ಸ್ವಾತಂತ್ರ್ಯ ದಿನಾಚರಣೆಯಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅನು ಹಾಗೂ ರಘು ಮುಖರ್ಜಿ ಅವರ ಮಗುವಿಗೆ ಮೂರು ತಿಂಗಳಾಗಿದ್ದು ಮಗಳ ಜೊತೆ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ.. “ಈ ವರ್ಷ ನಮ್ಮ ದೀಪಾವಳಿ ಬಹಳ ವಿಶೇಷ… ನಮ್ಮ ಮಗಳು ಹಾಗು ನಮಿಂದ ನಿಮ್ಮೆಲ್ಲರಿಗು ಹಬ್ಬದ ಹಾರ್ದಿಕ ಶುಭಾಶಯಗಳು✨🎉🎊✨!!!” ಎಂದು ಅನು ಟ್ವೀಟ್ ಮಾಡಿದ್ದಾರೆ.

 

 

2016 ಏಪ್ರಿಲ್ 25 ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರದ್ದು ಎರಡನೇ ಮದುವೆಯಾಗಿದ್ದು, ಇದೀಗ ಈ ತಾರಾ ಜೋಡಿ ಮೊದಲ ಮಗುವನ್ನು ಪಡೆದ ಖುಷಿಯಲ್ಲಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top