fbpx
ಭವಿಷ್ಯ

ನೀವು ಹುಟ್ಟಿರೋ ತಿಂಗಳು ನಿಮ್ ಭವಿಷ್ಯ ಸೂಪರ್ ಆಗಿ ಹೇಳುತ್ತೆ,ತಿಳ್ಕೊಳ್ಳಿ

ನೀವು ಹುಟ್ಟಿರೋ ರಾಶಿ ನಕ್ಷತ್ರ ತರಾನೇ ನಿಮ್ಮ ಹುಟ್ಟಿದ ತಿಂಗಳು ಸಹ ನಿಮ್ಮ ಗುಣಗಳನ್ನ ಸಕ್ಕತ್ತಾಗಿ ಹೇಳುತ್ತಂತೆ .ಅದು ಹೇಗೆ ಅಂತೀರಾ ಮುಂದೆ ಓದಿ ನಿಮ್ಮ ಗುಣಕ್ಕೆ 85 ಪರ್ಸೆಂಟ್ ಹೊಂದೆ ಹೊಂದುತ್ತೆ .ಹುಟ್ಟಿರೋ ತಿಂಗ್ಳು ಮತ್ತೆ ನಿಮ್ಮ ಗುಣಗಳು ಹೀಗಿದೆ ನೋಡ್ಕೊಳ್ಳಿ

ಜನವರಿ :ನೀವು ಜನವರಿಲಿ ಹುಟ್ಟಿದ್ರೆ ಸಂಖ್ಯೆ ಒಂದು ನಿಮ್ಮನ್ನ ಆಳುತ್ತೇ , ಯಾರ ಮಾತು ಕೇಳಲ್ಲ ನಿಂದೆ ನಿರ್ಧಾರ , ಒಳ್ಳೆ ಲೀಡರ್ ಗುಣ ನಿಮಗೆ ಇರುತ್ತೆ ,ಬೇರೆ ಯವರಿಗೆ ಹೋಲಿಸಿಕೊಂಡರೆ ನೀವು ತುಂಬ ಮೇಲ್ಮಟ್ಟಕ್ಕೆ ಯೋಚ್ನೆ ಮಾಡ್ತೀರಾ , ಮಕ್ಕದ್ ಮೇಲೆ ಹೊಡ್ದನ್ಗೆ ಮಾತಾಡ್ತೀರಾ , ನಿಮ್ಮ ಸ್ಟ್ರೇಟ್ ಫಾರ್ವರ್ಡ್ ಗುಣ ನ ನಿಮ್ಮ ಪ್ಲಸ್ ಮತ್ತೆ ಅದೇ ನಿಮ್ಮ ಮೈನಸ್ .ನಿಮ್ಮನ್ನ ಯಾರು ಪ್ರಶ್ನೆ ಮಾಡಾಕೆ ಹೋಗಲ್ಲ ಯಾಕಂದ್ರೆ ನಿಮ್ಮ ನಿರ್ಧಾರ ಪರ್ಫೆಕ್ಟ್ ಆಗಿರುತ್ತೆ , ಆದರೆ ಅದ್ಯಾಕೋ ಹೆಣ್ಣುಮಕ್ಕ್ಳು ನಿಮಗೆ ಸಹಾಯ ಮಾಡಲ್ಲ ನಿಮ್ಮ ಸಹಾಯಕ್ಕೆ ಬರೋರೆ ಗಂಡು ಮಕ್ಳು ಅಂತೇ . ನೀವು ಇತರರಿಗಿಂತ ಹೆಚ್ಚು ಭಿನ್ನವಾಗಿ ಬದುಕ್ತಿರಾ ಅಂತೇ ,ಹಠಮಾರಿ , ಹಿಡಿದ ಕೆಲಸ ಸಾಧಿಸೋವರ್ಗು ಬಿಡಲ್ಲ , ದುಡ್ಡು ಕಾಸಿನ ವಿಷ್ಯದಲ್ಲಿ ಬಹಳ ಹುಷಾರು ನೀವು ,ಕಷ್ಟ ಪಡೋ ಜೀವ ನೀವು ,ಯಾವಾಗ್ಲೂ ಏನಾದ್ರು ಕಲಿಬೇಕು ಅನ್ನೋ ಆಸಕ್ತಿ ಇರುತ್ತೆ .

 

 

 

ಫೆಬ್ರವರಿ :ಬಹಳ ಸೆಂಟಿಮೆಂಟಲ್ , ಎಮೋಷನಲ್ , ಭಾವಜೀವಿಗಳು ಯಾರ್ನಾದ್ರು ಹಚ್ಚ್ಕೊಂಡ್ಬಿಟ್ರೆ ಸಾಕು ಜೀವನ ಪರ್ಯಂತ ಇಷ್ಟಪಡ್ತಿರಾ , ಜೀವನ ಪರ್ಯಂತ ಪ್ರೀತಿಗಾಗಿ ಹುಡುಕುತ್ತಾ ಇರ್ತೀರಾ ,ವಿಶೇಷವಾದ ಪ್ರೀತಿಸುವ ವ್ಯಕ್ತಿ ಸಿಗದೇ ಹೋದ್ರೆ ಮಾನಸಿಕವಾಗಿ ಬಹಳ ಕುಗ್ಗಿ ಹೋಗ್ತೀರಾ ,ಬಹಳ ಬೇಗ ಡೆಪ್ರೆಸ್ಸ್ ಆಗೋ ಚಾನ್ಸ್ ಜಾಸ್ತಿ , ಒಳ್ಳೆ ತಂದೆ ಅಥವಾ ತಾಯಿ ಆಗೋಕೆ ಹೇಳಿ ಮಾಡಿಸ್ದನ್ಗೆ ನಿಮ್ಮ ಗುಣ ಆದಷ್ಟು ಎಮೋಷನ್ಸ್ ಕಡಿಮೆ ಮಾಡ್ಕೊಳ್ಲಿಲ್ಲ ಅಂದ್ರೆ ಕಣ್ಣೀರಲ್ಲೇ ಕೈ ತೊಳಿಬೇಕಾಗುತ್ತೆ .
ಬೇಡವಾಗಿರೋದರ ಬಗ್ಗೆ ಚಿಂತೆ ಜಾಸ್ತಿ , ಅತಿ ಬುದ್ಧಿವಂತರು , ಇಮ್ಯಾಜಿನೇಶನ್ ನಲ್ಲೆ ಕಾಲ ಕಳಿತ ಇರ್ತಾರೆ , ಉದ್ವಿಗ್ನತೆ. ಶಾಂತಿಯುತ, ನಾಚಿಕೆ ಮತ್ತು ವಿನಮ್ರ. ಪ್ರಾಮಾಣಿಕ ಮತ್ತು ನಿಷ್ಠಾವಂತ , ಸ್ವಾತಂತ್ರ್ಯವನ್ನು ಪ್ರೀತಿಸುವ ,ಬಹಳ ಬೇಗ ಕೋಪ ಮಾಡ್ಕೊಳ್ಳೋ , ಧೈರ್ಯಶಾಲಿ , ಹಠಮಾರಿ. ಮಹತ್ವಾಕಾಂಕ್ಷೆಯ. ಕನಸುಗಳು ಹೊತ್ತಿರೋರು , ರೋಮ್ಯಾಂಟಿಕ್. ಮತ್ತೆ ಬಹಳ ಹಣ ಖರ್ಚು ಮಾಡೋ ವ್ಯಕ್ತಿ
ಎಲ್ಲರನ್ನು ಬೇಗ ನಂಬಿಡೊ ಸ್ವಭಾವ.

ಮಾರ್ಚ್ :ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ನಿಮಗೆ ಯಶಸ್ಸು ಸಿಗುತ್ತೆ , ನಿಮ್ಮದು ಬಹಳ ಚಂಚಲ ಮನಸ್ಸು ಬಹಳ ಜನಕ್ಕೆ ಅವರ ಪ್ರೀತಿ ಪ್ರೇಮ ಹೆಚ್ಚು ದಿನ ನಿಲ್ಲೋಲ್ಲ , ನೀವು ಬಹಳಷ್ಟು ಹಣವನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದ್ದೀರಿ, ಆದರೆ ಅದನ್ನು ತ್ವರಿತವಾಗಿ ಕಳೆದುಕೊಳ್ಳುತ್ತೀರಿ ,ನಂಬಿದೋರೆ ಮೋಸ ಮಾಡೋದು ಜಾಸ್ತಿ ನಿಮಗೆ ಆದರೆ ನಿಮ್ಮನ್ನ ನೀವು ಬಹಳ ಪ್ರೀತಿ ಮಾಡ್ತೀರಾ,ಆಕರ್ಷಕ ವ್ಯಕ್ತಿತ್ವ , ನಾಚಿಕೆ ಸ್ವಭಾವ , ರಹಸ್ಯ ಮಾಡೋ ,ಪ್ರಾಮಾಣಿಕ, ಉದಾರ , ಸಹಾನುಭೂತಿ. ಶಾಂತಿ ಮತ್ತು ಪ್ರಶಾಂತತೆಯನ್ನು ಪ್ರೀತಿಸುತ್ತಾರೇಬಹಳ ಸೂಕ್ಷ್ಮ ಸ್ವಭಾವದ ಇವರು ಬೇಗ ಕೋಪ ಮಾಡ್ಕೋತಾರೆ , ಅಲಂಕಾರಿಕ ವಸ್ತುಗಳನ್ನ ಜಾಸ್ತಿ ಪ್ರೀತಿ ಮಾಡ್ತಾರೆ , ನಂಬಿಕಸ್ತರು , ಬೇರೆಯವರನ್ನ ಹಂಗೆ ಅಳೆದು ತೂಗಿ ಬಿಡ್ತಾರೆ ಇವರಿಗೆ ಮೋಸ ಮಾಡೋದು ಬಹಳ ಕಷ್ಟ , ಕನಸು ಕಾಣೋದು , ಟ್ರಿಪ್ ಮಾಡೋದು ಬಹಳ ಇಷ್ಟ , ಕೆಟ್ಟ ಸಹವಾಸಗಳು ಹಂಗೆ ಆಗೋಯ್ತವೆ .,ಬಹಳ ಮೂಡಿ ಇವ್ರು .

 

ಏಪ್ರಿಲ್ :ಮೊಂಡುತನ, ಹಠಮಾರಿ ಗುಣ ಜಾಸ್ತಿ  , ನೀವು ಹೇಳಿದಂಗೆ ಜನ ಕೇಳ್ಬೇಕು ಅನ್ಕೊಂಡಿರ್ತೀರಾ , ಸೃಜನಾತ್ಮಕ, ಮಾದಕ ಮತ್ತು ಬುದ್ಧಿವಂತ ಗುಣಗಳು ನಿಮ್ಮನ್ನ ಎಲ್ಲರಿಗು ಇಷ್ಟ ಆಗೋ ತರ ಮಾಡುತ್ತೆ .ಬಹಳ ಮಹತ್ವಾಕಾಂಕ್ಷಿ ಅನ್ಕೊಂಡಿದ್ದು ಮಾಡ್ಲೆ ಬೇಕು ಅನ್ನೋ ಗುಣ , ನೀವು ಜನರನ್ನು ದೂರವಿಡುವುದಿಲ್ಲ ಅನೇಕ ಸ್ನೇಹಿತರನ್ನ ಆಕರ್ಷಣೆ ಮಾಡ್ತೀರಾ .
ನಿಮ್ಮ ನಾನ್ ಹೇಳಿದಂಗೆ ಜನ ಕೇಳ್ಬೇಕು ಅನ್ನೋ ದನ್ನು ಬಿಟ್ರೆ ಒಳ್ಳೆದಾಗುತ್ತೆ.ಸಕ್ರಿಯ, ಸೌಹಾರ್ದ ,ಉದಾರ. ಭಾವನಾತ್ಮಕ, ಆಕ್ರಮಣಕಾರಿ. ಮತ್ತು ಕ್ರಿಯಾತ್ಮಕ. ನಿರ್ಣಾಯಕ ಗುಣಗಳನ್ನು ಹೊಂದಿದ್ದು ಕೆಲವು ಸಾರಿ ಮಾಡೋ ನಿರ್ಧಾರಗಳಿಗೆ ಬಹಳ ಪಶ್ಚಾತಾಪ ಪಟ್ಕೋತೀರಾ . ಬಹಳ ಆಕರ್ಷಕವಾಗಿರೋ ನಿಮಗೆ ಪ್ರೀತಿ ಜಾಸ್ತಿ , ನೀವು ತುಂಬ ಸ್ಟ್ರಾಂಗು .
ಜನಗಳ ಕಷ್ಟಗಳಿಗೆ ಆಗ್ತೀರಾ ಒಳ್ಳೆ ಒಳ್ಳೆ ಸಲಹೆಗಳು ಕೊಡ್ತೀರಾ .

ಮೇ:ನಿಮ್ಮ ಅಭಿಪ್ರಾಯ ತಿಳ್ಸೋದು ನಿಮಗೆ ಬಹಳ ಮುಖ್ಯ ಆಗಿರುತ್ತೆ , ಕಲೆಗಳಲ್ಲಿ ಆಸಕ್ತಿ ಹೊಂದಿರ್ತೀರಾ , ಒಳ್ಳೆಯ ಪ್ರತಿಭಾನ್ವಿತ ಸಂಗೀತಗಾರ, ನಟ, ಅಥವಾ ಬರಹಗಾರರಾಗಿರಬಹುದು.
ಹೆಚ್ಚಿನ ಗೌರವ ಬೇಕು ಅನ್ಕೋತೀರಾ , ಮದುವೆಯ ಪವಿತ್ರತೆಯ ಬಗ್ಗೆ ಬಹಳ ನಂಬಿಕೆ ಇಟ್ಕೊಂಡಿರ್ತಿರಾ .ಕಷ್ಟ ಪಡೋ ಜೀವಿ ನೀವು.ಸ್ನೇಹಿತರೆಂದರೆ ಪ್ರಾಣ ಬಹಳಷ್ಟು ಸಮಯ ಅವರ ಜೊತೇನೆ ಕಳೆಯೋಕೆ ಇಷ್ಟ ಪಡ್ತಿರಾ , ಪ್ರಕೃತಿ ಮಧ್ಯೆ ಕಾಲ ಕಳೆಯೋಕೆ ಇಷ್ಟ ಪಡ್ತಿರಾ , ಒಂದೊಂದ್ಸಾರಿ ಒಬ್ಬರೇ ಇರೋಕೆ ಇಷ್ಟ ಪಡ್ತಿರಾ .ಮೊಂಡುತನದ , ಕಠೋರ ಹೃದಯ ಬೇಗ ಕೋಪ ಮಾಡ್ಕೊಳ್ಳೋ ಬುದ್ದಿ ದೇವ್ರು ನಿಮಗೆ ಕೊಟ್ರನು ಬೇಗ ಸಮಾಧಾನ ಮಾಡಬಹುದು .ಕನಸುಗಳು ಬಹಳ ಇಷ್ಟ , ಕಿವಿ ಮತ್ತೆ ಕುತ್ತಿಗೆ ಸಮಸ್ಯೆ ಬರೋ ಸಾಧ್ಯತೆ ಇದೆ .

 

ಜೂನ್:ಬಹಳ ರೋಮ್ಯಾಂಟಿಕ್ ವ್ಯಕ್ತಿ, ಆದರೆ ಬೇರೆಯವರನ್ನ ಕಂಡ್ರೆ ಹೊಟ್ಟೆ ಕಿಚ್ಚು ಪಡ್ತಿರಾ ,ಪ್ರೀತಿ ಜೀವನ ಅಷ್ಟು ಚೆನ್ನಾಗಿ ಇರಲ್ವೇನೋ ಆದರೆ ನೀವೊಬ್ಬರು ಅದ್ಬುತ ಪ್ರೇಮಿ ಅನ್ನೋದ್ರಲ್ಲಿ ಡೌಟ್ ಇಲ್ಲ, ಹಳೆ ವಿಷಯಗಳನ್ನ ನೆನಪಿಸಿಕೊಂಡು ಕೊರಗುತ್ತಾಇರ್ತೀರಾ .ಗಾಳಿ ಸುದ್ದಿಗಳು ಕೇಳೋದು ಮತ್ತೆ ಹೇಳೋದು ಜಾಸ್ತಿ ಅದೇ ನಿಮಗೆ ಮೈನಸ್ , ಜನರನ್ನ ಪ್ರೀತಿಸೋ ವ್ಯಕ್ತಿ , ಮಕ್ಕಳು ಅಷ್ಟೊಂದು ಇಷ್ಟ ಆಗೋಲ್ಲ ಆದರೆ ನಿಮ್ಮ ಕುಟುಂಬ ಅಂದ್ರೆ ನಿಮಗೆ ಪ್ರಾಣ .ಸಂಕೋಚದ ಸ್ವಭಾವ , ಆದಷ್ಟು ಬೇಗ ಯಾರ್ನಾದ್ರು ಹಚ್ಕೊಂಡ್ಬಿಡೋ ಬುದ್ದಿ , ಮುಂದೆ ಬರೋದನ್ನ ಮೊದಲೇ ಹೇಳೋ ಬುದ್ದಿ , ಬಹಳ ಸೂಕ್ಷ್ಮ , ಯಾವಾಗೂ ಬೆಸ್ಟ್ ಇರ್ಬೇಕು ಅಂತ ಅನ್ಕೋತೀರಾ ,ಖುಷಿ ಖುಷಿಯಾಗಿ ಓಡಾಡ್ಕೊಂಡು ಇರ್ತೀರಾ , ಜಾಸ್ತಿ ಮಾತು ,ಹಗಲು ಕನಸು ಕಾಣೋದು , ಬೇಗ ಸ್ನೇಹಿತರನ್ನ ಮಾಡಿಕೊಳ್ಳೋ ಗುಣ , ಬಹಳ ಬೇಗ ಬೇಜಾರು ಮಾಡ್ಕೊಳ್ಳೋ ಗುಣ , ನಿಮಗೆ ಬೇಗ ಬೋರ್ ಆಗುತ್ತೆ , ನೆಗಡಿ ಹೆಚ್ಚಿಗೆ ಬರೋ ಚಾನ್ಸಸ್ ಇದೆ .

ಜುಲೈ:ಪ್ರಾಮಾಣಿಕ , ಸಹಾನುಭೂತಿಯ ವ್ಯಕ್ತಿ. ನಿಮ್ಮ ಕುಟುಂಬಕ್ಕೆ ನೀವು ಆಳವಾಗಿ ಕಾಳಜಿಯನ್ನು ಹೊಂದಿದ್ದೀರಿ ಮತ್ತು ನಿಮ್ಮ ಸಂಬಂಧಗಳನ್ನು ಕಾಪಾಡಿಕೊಳ್ಳಲು ಮತ್ತು ರಕ್ಷಿಸಲು ಸಾಹಸ ಮಾಡ್ತೀರಾ. ಬಹಳ ಕೊಂಕು ಮಾತಾಡೋ ಗುಣ ಹೊಂದಿರ್ತೀರಾ ,ನೀವು ಬಳಸೋ ಬಟ್ಟೆ , ಮೇಕ್ ಅಪ್ ,ಕಾರು ,ಜೀವ ಶೈಲಿ ಎಲ್ಲ ಸಕತ್ ಅಚ್ಚುಕಟ್ಟಾಗಿ ಇರುತ್ತೆ ,ಬಹಳ ಬುದ್ದಿವಂತ್ರು ,ಮೃದು ಸ್ವಭಾವ , ಎಲ್ಲರಿಗು ಇಷ್ಟ ಆಗ್ತೀರಾ ಆದ್ರೆ ಶತ್ರುಗಳು ಜಾಸ್ತಿ . ಸೂಕ್ಷ್ಮ ಮತ್ತು ಖಿನ್ನತೆಗೆ ಒಳಗಾಗುವ ಚಾನ್ಸಸ್ ಜಾಸ್ತಿ .
ಜೊತೆ ಇರಲು ಜನ ಬಹಳ ಇಷ್ಟ ಪಡ್ತಾರೆ , ಅರ್ಥ ಮಾಡ್ಕೊಳ್ಳೋಕೆ ತುಂಬ ಕಷ್ಟ , ಪ್ರಾಮಾಣಿಕ , ಜಾಣ್ಮೆಯ. ಸೌಹಾರ್ದ ,ಭಾವನೆಗಳಿಗೆ ಹೆಚ್ಚು ಬೆಲೆ ಕೊಡ್ತಾರೆ .ಬೇಗ ಮನಸಿಗೆ ನೋವಾಗುತ್ತೆ , ಪ್ರತಿಕಾರ ತಿರಿಸ್ಕೊಬೇಕು ಅಂತ ಕಾಯುತ್ತ ಇರ್ತೀರಾ ,ಮೂಡಿ , ಬೇರೆ ಯವರು ಏನೇ ತೊಂದ್ರೆ ಕೊಟ್ರು ಕ್ಷಮೆ ಕೊಡ್ತೀರಾ ಆದ್ರೆ ಮರೆಯೋಲ್ಲ . ಹೆಚ್ಚಿಗೆ ಜನರನ್ನ ನಂಬೋಲ್ಲ , ಜನರ ಬಗ್ಗೆ ಒಂದು ಅಭಿಪ್ರಾಯ ಇಟ್ಕೊಂಡೇ ಇರ್ತಾರೆ , ಹಳೇದನ್ನು ಯೋಚ್ನೆ ಮಾಡೋದು ಬಿಡೋಲ್ಲ , ಒಂಟಿ ಯಾಗಿ ಹೆಚ್ಚಿಗೆ ಇರೋಕೆ ಇಷ್ಟ ಪಡ್ತಾರೆ .

 

ಆಗಸ್ಟ್:ಸಮಾಜಕ್ಕೋಸ್ಕರ ದುಡಿಯೋ ವ್ಯಕ್ತಿ ನೀವು , ಎಲ್ಲರಲ್ಲೂ ಒಳ್ಳೇದನ್ನೇ ನೋಡೋ ವ್ಯಕ್ತಿ , ಹೆಚ್ಚಿಗೆ ಕೆಲಸ ಮಾಡಿ ಮಾಡಿ ಇಲ್ಲದೆ ಇರೋ ಖಾಯಿಲೆ ಎಲ್ಲ ಮೈ ಮೇಲೆ ಎಳ್ಕೊತೀರಾ , ಬೇರೆಯವರಿಗೆ ಸ್ಪೂರ್ತಿ ತುಂಬೋ ಕೆಲಸ ಮಾಡ್ತೀರಾ , ಹಣವು ನಿಮಗೆ ಸುಲಭವಾಗಿ ಬರುತ್ತದೆ.ಜೋಕ್ ಮಾಡಲು ಇಷ್ಟಪಡುತ್ತಾರೆ. ಆಕರ್ಷಕವಾಗಿ ಇರ್ತಾರೆ , ದೃಢತೆ ಮತ್ತು ನಾಯಕತ್ವ ಗುಣ ಇರುತ್ತೆ , ಯಾರಿಗೂ ಹೆದ್ರೋಲ್ಲ ,ಉದಾರ ಮತ್ತು ಅಹಂಕಾರ,ಸುಲಭವಾಗಿ ಕೋಪ ಮಾಡ್ಕೊಳ್ಳೋ ವ್ಯಕ್ತಿ , ಬಹಳ ಹೊಟ್ಟೆ ಉರಿ ಇರೋ ವ್ಯಕ್ತಿ . ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿ, ಶೀಘ್ರವಾಗಿ ಯೋಚಿಸುತ್ತಾರೇ . ಸ್ವತಂತ್ರ ಆಲೋಚನೆಗಳು. ಮುನ್ನಡೆಸುವ ಗುಣ ಇವರದ್ದು .ಆಶಾದಾಯಕ ಮತ್ತು ವಿಶ್ವಾಸಾರ್ಹ. ರೋಮ್ಯಾಂಟಿಕ್, ಸ್ನೇಹಿತರನ್ನು ಇಷ್ಟಪಡುತ್ತಾರೆ.

ಸೆಪ್ಟೆಂಬರ್:ಜೀವಿತಾವಧಿಯಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸಲು ನೀವು ಉದ್ದೇಶಿಸಲಾಗಿದ್ದೀರಿ ಏಕೆಂದರೆ ನೀವು ಬುದ್ಧಿವಂತ ಮತ್ತು ಹೊಂದಿಕೊಳ್ಳುವಿರಿ.ಬಹಳ ಅಚ್ಚುಕಟ್ಟಾದ ಮನುಷ್ಯರು ನೀವು , ನೀವು ಹೆಚ್ಚು ಬುದ್ಧಿವಂತ ಮತ್ತು ಆಧ್ಯಾತ್ಮಿಕ ಚಿಂತನೆ ಇರುವ ವ್ಯಕ್ತಿ , ನಿಮ್ಮ ದೊಡ್ಡ ದೌರ್ಬಲ್ಯ ಖಿನ್ನತೆಗೆ ಒಳಗಾಗುವುದು ,ನೀವು ಜೀವನದಲ್ಲಿ ಉದ್ದಾರ ಆಗ್ಬೇಕು ಅಂತಿದ್ರೆ ಮೊದಲು ಆಡೋರ ಮಾತಿಗೆ ಬೆಲೆ ಕೊಡೋದು ನಿಲ್ಲಿಸಿ ,ಅಗತ್ಯಕ್ಕಿಂತ ಜಾಸ್ತಿ ಯೋಚ್ನೆ ಮಾಡ್ಬೇಡಿ .ಸೌಹಾರ್ದ , ಎಚ್ಚರಿಕೆಯಿಂದ ಹೆಜ್ಜೆ ಇಡೋ ವ್ಯಕ್ತಿ , ಸಹಾನುಭೂತಿ ಉಳ್ಳವರು , ನಿಷ್ಠಾವಂತ , ಸೂಕ್ಷ್ಮ. ಉದಾರ , ಸ್ವತಃ ಪ್ರೇರೇಪಿಸುವ ಸಾಮರ್ಥ್ಯ ,ಒಳ್ಳೆಯ ನೆನಪು. ಬುದ್ಧಿವಂತ ಮತ್ತು ಜ್ಞಾನ ಹೊಂದಿರೋ ವ್ಯಕ್ತಿ ,ಕ್ರೀಡೆಯಲ್ಲಿ ಆಸಕ್ತಿ ಜಾಸ್ತಿ ಮತ್ತೆ ಭಾವಾನಾತ್ಮಕ ಗುಣಗಳು ಕಡಿಮೆ ಇರುತ್ತೆ .

 

ಅಕ್ಟೋಬರ್:ಅಯ್ಯೋ ಏನ್ ಅದೃಷ್ಟ ರೀ ನಿಮ್ದು ಅನ್ಕೊಂಡಿದ್ದನ್ನ ಸಾಧಿಸಿಯೇ ಬಿಡ್ತೀರಾ.ಬಹಳ ವಾದ ಮಾಡಿ ಗೆಲ್ಲಲೇ ಬೇಕು ಅನ್ನೋ ಗುಣ ಹೊಂದಿರ್ತೀರಾ , ಮತ್ತೆ ಸೇಡು ಪ್ರತಿಕಾರ ಅಂದ್ರೆ ಎತ್ತಿದ ಕೈ ,ಒಳ್ಳೆ ಲೀಡರ್ ಗುಣಗಳು ನಿಮಗಿದೆ ಆದರೆ ಅತಿಯಾದ ವಾದ ಮಾಡೋದು ಮತ್ತೆ ಸೇಡಿನ ಗುಣ ಬಿಟ್ರೆ ಜೀವನದಲ್ಲಿ ಬಹಳ ಯಸಹಸ್ಸು ಸಿಗುತ್ತೆ ,ಒಳ್ಳೆ ಮಾತುಗಾರರು , ಪ್ರೀತಿಸೋರನ್ನ ಬಹಳ ಪ್ರೀತಿ ಮಾಡ್ತೀರಾ ದ್ವೇಷ ಮಾಡೋರನ್ನ ಬಹಳ ದ್ವೇಷ ಮಾಡ್ತೀರಾ ,ಒಳ್ಳೆಯ ನಿಯತ್ತಿನ ಮನುಷ್ಯರು ನೀವು , ಸ್ನೇಹಿತರು ಅಂದ್ರೆ ಬಹಳ ಇಷ್ಟ ,ಸ್ನೇಹಿತರನ್ನ ಮಾಡ್ಕೊಳ್ಳೋದು ಅಂದ್ರುನು ತುಂಬ ಇಷ್ಟ ,ತುಂಬ ಎಮೋಷನಲ್ , ಕಲೆ ಗಳಲ್ಲಿ ಆಸ್ಕತಿ ಜಾಸ್ತಿ , ತುಂಬ ಸುತ್ತಾಡೋದು ಇಷ್ಟ , ಮಕ್ಕಳಂದ್ರೆ ಇಷ್ಟ , ಎರಡೆರಡು ಮಾತಾಡೋಕೆ ನಿಮಗೆ ಬರೋಲ್ಲ ,ಬೇಗ ಆತ್ಮ ವಿಶ್ವಾಸ ಕಳೆದುಕೊಂಡುಬಿಡ್ತೀರಾ ಅದೇ ನಿಮ್ಮ ವೀಕ್ ನೆಸ್ .

ನವೆಂಬರ್:ಒಳ್ಳೆ ಪಾಸಿಟಿವ್ ಆಲೋಚನೆಗಳು ಇರ್ತವೆ , ಕರುಣೆ ,ಪ್ರೀತಿ , ಯಾರನ್ನಾದ್ರೂ ಬೇಗ ಹಚ್ಕೊಂಡ್ಬಿಡ್ತೀರಾ ,ಬೇಗ ಎಕ್ಸೈಟ್ ಆಗೋ ಬುದ್ದಿ , ಒತ್ತಡಕ್ಕೆ ಒಳಗಾಗೋ ಗುಣ , ಮಾನಸಿಕ ವೇದನೆ ಬಹಳ ಅನುಭವಿಸುತ್ತೀರಾ ,ಬೇರೆ ಅವ್ರು ನಿಮ್ಮನ್ನ ನೋಡಿ ಕಲಿಬೇಕು ಆತರ ನೀವು ಇರ್ತೀರಾ.ಬಹಳ ಯೋಚನೆ ಮಾಡ್ತೀರಾ , ನೀವು ಒಂತರ ಮಾಸ್ಟರ್ ಪೀಸ್ ಇದ್ದಂಗೆ , ಬುದ್ದಿವಂತರು , ವೇಗ ವಾದ ಯೋಚನೆ , ಮುಂದಿನ ಬಗ್ಗೆ ಬಹಳ ಯೋಚನೆ ಮಾಡೋ ಗುಣ ಇರುತ್ತೆ ,
ಬಹಳ ರಹಸ್ಯಗಳನ್ನ ನಿಮ್ಮಲ್ಲೇ ಇಟ್ಕೊಂಡಿರ್ತಿರಾ , ಹೆಚ್ಚಿಗೆ ಮಾತಾಡೋಕೆ ಇಷ್ಟ ಪಡೋಲ್ಲ ,ಕೋಪ ಕಮ್ಮಿ ಬರುತ್ತೆ , ಅನ್ಕೊಂಡಿದ್ದನ್ನ ಪಟ್ಟು ಹಿಡಿದು ಸಾಧನೆ ಮಾಡ್ತೀರಾ , ಸ್ನೇಹಪರ , ಧೈರ್ಯವಂತರು ,ಉದಾರಿಗಳು ,ಹೆಚ್ಚಿಗೆ ಒಂಟಿಯಾಗಿರೋಕೆ ಇಷ್ಟ ಪಡ್ತಿರಾ ,ಪ್ರೀತಿಸುವ ಭಾವನಾತ್ಮಕ ವ್ಯಕ್ತಿ ,ಕೆಲವು ಕೆಟ್ಟ ಸಂಬಂಧಗಳು ಬಂದು ಹೋಗಬಹುದು , ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲದವರು .

 

ಡಿಸೆಂಬರ್:ಬಹಳ ಪ್ರಾಕ್ಟಿಕಲ್ ಮನುಷ್ಯ , ತತ್ವ ಜ್ಞಾನದಲ್ಲಿ ಆಸಕ್ತಿ ಜಾಸ್ತಿ , ಸ್ಥಿರವಾದ ಜೀವನಶೈಲಿ ನಡೆಸ್ತೀರಾ , ಅದೃಷ್ಟವಂತರು ಪ್ರೀತಿ ನಿಮ್ಮನ್ನ ಹುಡುಕಿಕೊಂಡು ಬರುತ್ತೆ ,ಹಣಕ್ಕೆ ಬಹಳ ಪ್ರಾಮುಖ್ಯತೆ ಕೊಡ್ತೀರಾ , ಸಕ್ರಿಯ ಸಾಮಾಜಿಕ ಜೀವನವನ್ನು ಹೊಂದಿರ್ತಿರಾ , ನಿಮ್ಮ ಜವಾಬ್ದಾರಿಗಳನ್ನು ಕೆಲವೊಮ್ಮೆ ನಿರ್ಲಕ್ಷಿಸಿರಬಹುದು ,ನೀವು ಅಪಾಯಕಾರಿ ನಿರ್ಧಾರಗಳನ್ನ ತೆಗೆದುಕೊಳ್ತೀರಾ ,ನೀವು ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂತಿದ್ರೆ ಮೊದಲು ಯಾವುದು ಶಾಶ್ವತ ಅಲ್ಲ ಅಂತ ಅರ್ಥ ಮಾಡ್ಕೊಳ್ಳಿ .
ನಿಷ್ಠಾವಂತ ಮತ್ತು ಉದಾರ., ದೇಶಭಕ್ತಿ , ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರ್ತೀರಾ , ತಾಳ್ಮೆ , ಅವಸರದ, ಮಹತ್ವಾಕಾಂಕ್ಷೆ ಹೊಂದಿರೋ ಮನುಷ್ಯರು , ಬೇರೆಯವ್ರು ಜೊತೆ ಇರಲು ಬೆರೆಯಲು  ಇಷ್ಟಪಡುತ್ತಾರೆ , ಪ್ರಾಮಾಣಿಕ ಮತ್ತು ವಿಶ್ವಾಸಾರ್ಹತೆ , ಕೆಲವೊಮ್ಮೆ ಅಹಂಕಾರಿ , ನಾನೊಬ್ಬನೇ ಸರಿ ಅನ್ನೋ ಹೆಮ್ಮೆ , ನಿರ್ಬಂಧಗಳನ್ನು ಸಹಿಸೋಲ್ಲ .ಸ್ವಲ್ಪ ನಾನೇ ಸರಿ ಅನ್ನೋ ಗುಣ ಬದಲಾಯಿಸಿಕೊಂಡರೆ ಒಳ್ಳೇದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top