ಮನೋರಂಜನೆ

ದರ್ಶನ್ ಜೊತೆಗೆ ಮಿಲನ ಪ್ರಕಾಶ್ ಮತ್ತೊಂದು ಸಿನಿಮಾ- ಇಲ್ಲಿದೆ ಫುಲ್ ಡೀಟೈಲ್ಸ್.

ಒಂದು ಸಿನಿಮಾವಿನ್ನೂ ಶೂಟಿಂಗ್ ಹಂತದಲ್ಲಿರುವಾಗಲೇ ಮುಂದಿನ ಚಿತ್ರಗಳ ಬಗ್ಗೆ ಕುತೂಹಲ ಸೃಷ್ಟಿಸೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಶೇಷತೆ. ಸದ್ಯ ಅವರ 50ನೇ ಚಿತ್ರವಾದ ಕುರುಕ್ಷೇತ್ರ ಇನ್ನೂ ತೆರೆಕಂಡಿಲ್ಲ, 51ನೇ ಸಿನಿಮಾವಾದ ಯಜಮಾನ ಚಿತ್ರ ಶೂಟಿಂಗ್ ಹಂತದಲ್ಲಿದೆ ಉಳಿದಂತೆ 52ನೇ ಚಿತ್ರವಾಗಿರುವ ‘ಒಡೆಯರ್’ ಚಿತ್ರ ಮೊನ್ನೆ ತಾನೇ ಶುರುವಾಗಿದೆ. ಅವರ 53ನೇ ಚಿತ್ರ ‘ತರುಣ್ ನಿರ್ದೇಶನ ಚಿತ್ರದ ಶೂಟಿಂಗ್ ಇನ್ನೇನು ಆರಂಭವಾಗಬೇಕಿದೆ. ಜೊತೆಗೆ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಮದಕರಿ ನಾಯಕ ಸಿನಿಮಾ ಜನವರಿಯಲ್ಲಿ ಶುರುವಾಗಲಿದೆ ಹೀಗಿರುವಾಗ ದರ್ಶನ್ ವಲಯದಿಂದ ಮತ್ತೊಂದು ಸುದ್ದಿ ಕೇಳಿಬಂದಿದೆ.

ಈ ಹಿಂದೆ ತಾರಕ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ಪ್ರಕಾಶ್ ಅವರು ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡಬೇಕೆಂಬ ಯೋಜನೆಯಲ್ಲಿದ್ದಾರೆ. ಇಬ್ಬರು ಜೊತೆಯಲ್ಲಿ ಮಾಡುತ್ತಿರುವುದು 2 ನೇ ಸಿನಿಮಾವಾಗಿದ್ದು, ನಿದೇರ್ಶಕರಾದ ಪ್ರಕಾಶ್ ಅವರ ಸಮ್ಮುಖದಲ್ಲಿ ಚಿತ್ರದ ಕಥೆಯ ಕೆಲಸಗಳು ನಡೆಯುತ್ತಿವೆ.

ಈ ಚಿತ್ರದ ಕಥೆ ವಿಭಿನ್ನ ರೀತಿಯಲ್ಲಿದ್ದು, ಬೇಗನೆ ಚಿತ್ರದ ಟೈಟಲ್ ಹಾಗೂ ಸಿನಿಮಾವನ್ನು ತಿಳಿಸುವುದಾಗಿ ಹೇಳಿದ್ದಾರೆ. ಸರಿಯಾದ ಸಮಯ ನೋಡಿ ಸಿನಿಮಾದವನ್ನು ಅನೌನ್ಸ್ ಮಾಡಲಿದ್ದಾರಂತೆ. ಹೀಗೆ ಕೈತುಂಬಾ ಮಣಗಟ್ಟಲೆ ಚಿತ್ರಗಳನ್ನು ಇಟ್ಟುಕೊಂಡಿರುವ ದರ್ಶನ್ ಮುಂದಿನ ದಿನಗಳಲ್ಲಿ ಯಾವೆಲ್ಲಾ ಸಿನಿಮಾಗಳನ್ನು ಒಪ್ಪಿಕ್ಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top