fbpx
ಭವಿಷ್ಯ

ಶನಿವಾರದ ದಿನದಂದು ಅಪ್ಪಿತಪ್ಪಿನ್ನು ಈ ವಸ್ತುಗಳನ್ನು ಮನೆಗೆ ತರಬೇಡಿ,ತಂದ್ರೆ ಮನೆಗೆ ಅಷ್ಟಕಷ್ಟ ದರಿದ್ರ ಬರೋದು ಖಂಡಿತಾ

ಶನಿವಾರದ  ದಿನವನ್ನು ಶನಿಗ್ರಹ ಆಳುತ್ತದೆ ಮತ್ತು ಅಂದು  ಶನಿಯ  ದಿನವೆಂದು  ಸಹ ಹೇಳಲಾಗುತ್ತೆ.ಜ್ಯೋತಿಶ್ಶಾಸ್ತ್ರಾದ ಪ್ರಕಾರ  ಈ ವಸ್ತುಗಳನ್ನು ಶನಿವಾರದಂದು  ಮನೆಗೆ ತರುವುದು ಅಷ್ಟು ಒಳ್ಳೆಯದಲ್ಲ ,ಶುಭವೂ ಅಲ್ಲ.ಆದ್ದರಿಂದ ಈ ವಸ್ತುಗಳನ್ನು ಮನೆಗೆ ತರಲೇಬಾರದು ಅಂತ ಹೇಳತ್ತೆ.ಅವು ಯಾವ ವಸ್ತುಗಳು ಎಂದು ಬನ್ನಿ ನೋಡೋಣ

ಬದನೆಕಾಯಿ:- ಶನಿವಾರದಂದು ಬದನೆಕಾಯಿಯನ್ನು ಕೊಂಡುಕೊಂಡು ಮನೆಗೆ ತರಬಾರದು ಹಾಗೆ ತಿನ್ನಲೂ ಬಾರದು.ಕಾಳುಮೆಣಸು :-ಕಾಳು ಮೆಣಸನ್ನು ಸಹ ಶನಿವಾರದಂದು  ಕೊಂಡುಕೊಳ್ಳಬಾರದು ಹಾಗೆ  ಮನೆಗೆ ತರಬಾರದು , ತಿನ್ನಲುಬಾರದು.ಉಪ್ಪು:-ಉಪ್ಪನ್ನು ಕೂಡ  ಶನಿವಾರದಂದು ಮನೆಗೆ ಕೊಂಡುಕೊಂಡು ತರಬಾರದು. ಅಂದು ಉಪ್ಪು ಇಲ್ಲದ ಆಹಾರ ಸೇವನೆ ಮಾಡಿದರೆ ಒಳ್ಳೆಯದು.  ಉಪ್ಪನ್ನು ಶನಿವಾರದ ದಿನ ಯಾವುದಾದರೂ ದೇವಸ್ಥಾನಕ್ಕೆ ದಾನ ಮಾಡಿದರೆ ಓಳ್ಳೆಯದು.
ಕಬ್ಬಿಣ:- ಕಬ್ಬಿಣ ಹಾಗೂ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಶನಿವಾರದ ದಿನ ಕೊಂಡುಕೊಳ್ಳ ಬಾರದು  ಹಾಗೂ ಮನೆಗೆ  ತರಲೇ ಬಾರದು.ಅದರಲ್ಲೂ ವಾಹನಗಳನ್ನ ಖರೀದಿ ಮಾಡ ಬೇಕೆಂದಿರುವವರು  ಸಹ ಯಾವುದೇ ಕಾರಣಕ್ಕೂ ಶನಿವಾರದಂದು ತಗೊಬೇಡಿ ಅಪಘಾತವಾಗುವ ಸಂಭವ ಹೆಚ್ಚು ಇದೆ  ಎಂದು ಜ್ಯೋತಿಶ್ಶಾಸ್ತ್ರಾದಲ್ಲಿ ಹೇಳಲಾಗಿದೆ.ಬೇಳೆ :- ಬೇಳೆಯೂ ಸಹ ಶನಿದೇವನಿಗೆ ಸಭಂಧಪಟ್ಟದ್ದು ಅದ್ದರಿಂದ ಬೇಳೆಯನ್ನು ಶನಿವಾರ ಕೊಂಡು ಕೊಳ್ಳಬಾರದು ಮತ್ತು ಬೇಳೆ ಬೇಯಿಸಿ ಮಾಡಿದ ಆಹಾರವನ್ನು ತಿನ್ನಬಾರದು ಇದರ ಬದಲು ಬಡವರಿಗೆ ದಾನ ಮಾಡುವುದರಿಂದ ಸಾಕಷ್ಟು ಒಳ್ಳೆಯದಾಗುತ್ತೆ.ಕಾಗೆ,ಇನ್ನೂ ಕಾಗೆ ಇದು ಶನಿದೇವರ ವಾಹನ ವಾಗಿದ್ದು ಇದಕ್ಕೆ ತಿನ್ನಲು  ಆಹಾರ ಮತ್ತು ಧಾನ್ಯಗಳನ್ನು  ಕೊಟ್ಟರೆ ಶನಿದೇವರು ಸಂತೃಪ್ತಗೊಳ್ಳುತ್ತಾನೆ.

 

 

 

ಬಣ್ಣ :- ಕಪ್ಪು ಮತ್ತು ನೀಲಿ  ಬಣ್ಣ ಶನಿಗೆ ಇಷ್ಟವಾದ ಬಣ್ಣ. ನಿಮಗೂ ಕೂಡ  ಕಪ್ಪು ಬಣ್ಣ ಇಷ್ಟ ವಾಗಿದ್ದರೆ ಹಾಗಂತ ಹೋಗಿ ಶನಿವಾರದ ದಿನ ಕಪ್ಪು ಬಣ್ಣದ ಬಟ್ಟೆಯನ್ನು ಕೊಂಡುಕೊಳ್ಳಬೇಡಿ  ಮತ್ತು ಧರಿಸಲು ಬೇಡಿ.ಯಾಕೆಂದರೆ ಒಂದು ವೇಳೆ ನಿಮ್ಮ ಜಾತಕದಲ್ಲಿ ಶನಿಯು ಬಲಹೀನ ನಾಗಿದ್ದರೆ ಸಾಡೇಸಾತಿ, ಅಷ್ಟಮ ಶನಿ, ಪಂಚಮ ಶನಿ ನೆಡೆಯುತ್ತಿದ್ದರೆ  ಶನಿಯ ಪ್ರಭಾವದಿಂದ ತುಂಬಾ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ದುರಾದೃಷ್ಟಕ್ಕೆ ನೀವೇ  ಆಹ್ವಾನ ನೀಡಿದಂತಾಗುತ್ತದೆ.ಶನಿವಾರ ಸಾಸಿವೆ ಮತ್ತು ಸಾಸಿವೆ ಎಣ್ಣೆಯನ್ನು ಕೊಂಡುಕೊಳ್ಳಬಾರದು. ಇದರ ಬದಲು ಬಡವರಿಗೆ ದಾನ ಮಾಡಬೇಕು. ಶನಿಯ ವಿಗ್ರಹದ ಮೇಲೆ ಸ್ವಲ್ಪ ಸಾಸಿವೆಯನ್ನು ಚಿಮುಕಿಸಬೇಕು.ಇದರಿಂದ ಶುಭ ಸಮಾಚಾರ ಕೇಳಿ ಬರುತ್ತದೆ.

ಒಂದು ವೇಳೆ ಮರದಿಂದ ಮಾಡುವ ಪೀಠೋಪಕರಣಗಳನ್ನು ಮನೆಗೆ ತರಬೇಕು ಅಂತ ಇದ್ದರೆ ಶನಿವಾರಾದ ದಿನ ತರಬೇಡಿ ಹಾಗೆ ವಿತರಣೆಯನ್ನು ಕೂಡ ಪಡೆಯಬೇಡಿ. ಹೀಗೆ ನಮ್ಮ ಹಿರಿಯರು ನಮಗೆ ಉಪಯೋಗ ಆಗುವಂತಹ ಅನೇಕ ವಿಷಯಗಳನ್ನು  ತಿಳಿಸಿಕೊಟ್ಟಿದ್ದಾರೆ. ನಾವು ಅವುಗಳನ್ನು ಅರಿತು ನಮ್ಮ ಜೀವನದಲ್ಲಿ ಪಾಲಿಸಬೇಕು ಅಷ್ಟೇ ಎಲ್ಲವೂ ಒಳ್ಳೆಯದೇ ಆಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top