fbpx
ಸಮಾಚಾರ

ಕನ್ನಡಿಗರಿಗೆ ದೀಪಾವಳಿ ಹಬ್ಬದ ಬಂಪರ್ ಉಡುಗೊರೆ ನೀಡಿದ ಸಂಸದ ಜಿಸಿ ಚಂದ್ರಶೇಖರ್.

ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಕ್ಷಣದಿಂದಲೂ ಒಂದರ ಹಿಂದೊಂದು ಕನ್ನಡ ಪರ ಕೆಲಸಗಳನ್ನು ಕೈಗೊಳ್ಳುತ್ತಿರುವ ಸಂಸದ ಜಿಸಿ ಚಂದ್ರಶೇಖರ್ ಅವರು ಮತ್ತೊಮ್ಮೆ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.. ತಾವು ಕೈಗೊಂಡ ಕನ್ನಡಿಗರ ಪರ ಕೆಲಸವೊಂದರ ವಿಚಾರವಾಗಿ ನಾಡಿನ ಜನತೆಗೆ ಚಂದ್ರಶೇಖರ್ ದೀಪಾವಳಿ ಉಡುಗೊರೆಯನ್ನು ನೀಡಿದ್ದಾರೆ.. ಅಷ್ಟಕ್ಕೂ ಏನು ಆ ಉಡುಗೊರೆ ಅಂತೀರಾ? ಮುಂದೆ ಓದಿ,

 

 

ನಮ್ಮ ಮೆಟ್ರೋದಲ್ಲಿ(BMRCL) ಸಮರ್ಪಕವಾಗಿ ಕನ್ನಡದಲ್ಲಿ ಸೇವೆ ಇಲ್ಲದಿರುವ ಬಗ್ಗೆ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ BMRCLನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅಜಯ್ ಸೇಥ್ ಅವ್ರಿಗೆ ಜಿಸಿ ಚಂದ್ರಶೇಖರ್ ಪತ್ರವೊಂದನ್ನು ಬರೆದಿದ್ದರು. ಕಡ್ಡಾಯವಾಗಿ ಕನ್ನಡಕ್ಕೆ ಪ್ರಾತಿನಿಧ್ಯ ಕೊಡುವ ಬಗ್ಗೆ ಆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದರು.. ಇದರ ಜೊತೆಗೆ ಕನ್ನಡದಲ್ಲಿ ವ್ಯವಹರಿಸಲು ಉದ್ದಟತನ ತೋರಿದ ನೌಕರನೊಬ್ಬನ ಉಲ್ಲೇಖ ಮಾಡಿ ಇಂಥಾ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಮನವಿ ಮಾಡಿಕೊಂಡಿದ್ದರು..

“ಬಿಎಂ ಆರ್ ಸಿ ಎಲ್ ಸಂಸ್ಥೆಯಲ್ಲಿ ಸ್ವಚ್ಛತೆ ಭದ್ರತಾ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಹೊರಗುತ್ತಿಗೆ ನೌಕರರು ಕನ್ನಡೇತರರಾಗಿದ್ದಾರೆ. ಅವರವರ ಮಾತೃಭಾಷೆ ಯಾವುದಾದರೂ ಕೂಡ ಇಲ್ಲಿನ ನಾಗರಿಕರ ಜೊತೆ ಕನ್ನಡ ನುಡಿ ಕಲಿತು ನಾಡ ಭಾಷೆಯಲ್ಲಿಯೇ ಸೇವೆಯನ್ನು ಒದಗಿಸಬೇಕಾಗುತ್ತದೆ.. ಬೆಂಗಳೂರು ಮಹಾನಗರ ರೈಲು ನಿಗಮ ನಿಯಮಿತ ಸಂಸ್ಥೆಯು ಕರ್ನಾಟಕ ರಾಜ್ಯದ ಸಂಸ್ಥೆಯಾಗಿರುವ ಹಿನ್ನೆಲೆಯಲ್ಲಿ ಮೆಟ್ರೋದ ಎಲ್ಲ ಸೇವೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಧಾನತೆಯ ಅಳವಡಿಸಿ ಹಾಗೆಯೇ ಇಲ್ಲಿನ ಸಿಬ್ಬಂದಿಗಳು ಸಹ ತಮ್ಮ ಸೇವೆಯನ್ನು ಕನ್ನಡ ಭಾಷೆಯಲ್ಲಿಯೇ ನೀಡುವಂತೆ ನಿಮಗೆ ತಿಳಿಯಬಯುಸುತ್ತೇವೆ” ಎಂದು ಜಿಸಿ ಚಂದ್ರಶೇಖರ್ ತಮ್ಮ ಪಾತ್ರದಲ್ಲಿ ಮನವಿ ಮಾಡಿಕೊಂಡಿದ್ದರು..

 

 

ಜಿಸಿ ಚಂದ್ರಶೇಖರ್ ಅವರ ಪತ್ರಕ್ಕೆ ಇದೀಗ BMRCLನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅಜಯ್ ಸೇಥ್ ಅವರಿಂದ ಪ್ರತಿಕ್ರಿಯೆ ಬಂದಿದ್ದು ಕನ್ನಡ ಮತ್ತು ಕನ್ನಡಿಗರಿಗೆ ಆದ್ಯತೆ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.. “ಕರ್ನಾಟಕ ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿತ್ತು ಸಂಸ್ಥೆಯ ಎಲ್ಲ ವ್ಯವಹಾರಗಳು ಕನ್ನಡ ಭಾಷೆಯಲ್ಲೇ ನಡೆಯಬೇಕೆಂಬುದು ಸಂಸ್ಥೆಯ ಧೋರಣೆ ಮತ್ತು ಜವಾಬ್ದಾರಿಯಾಗಿದ್ದು ಸರ್ಕಾರದ ನೀತಿ ನಿಯಮಗಳನ್ನು ಸಂಪೂರ್ಣ ಪ್ರಮಾಣದಲ್ಲಿ ಪಾಲಿಸಲಾಗುತ್ತಿದೆ..

ಸಂಸ್ಥೆಯ ಭದ್ರತಾ ಸೇವೆ ಸ್ವಚ್ಛತಾ ಸೇವೆ ಟಿಕೆಟ್ ನೀಡುವುದು ಡಾಟಾ ಎಂಟ್ರಿ ಮುಂತಾದ ಸೇವೆಗಳನ್ನು ಕರ್ನಾಟಕ ಪಾರದರ್ಶಕ ನಿಯಮಗಳನ್ವಯ ನಿಗದಿತ ಅವಧಿಗೆ ಟೆಂಡರ್ ಪ್ರಕ್ರಿಯೆ ಮೂಲಕ ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ಪಡೆದುಕೊಳ್ಳಲಾಗುತ್ತಿದೆ. ಕನ್ನಡ ಓದಲು ಬರೆಯಲು ಮತ್ತು ಮಾತನಾಡಲು ಬಲ್ಲ ನೌಕರರನ್ನೇ ಸಂಸ್ಥೆಯ ಸೇವೆಗಳಿಗೆ ನಿಯೋಜಿಸ ಬೇಕೆಂಬ ನಿಬಂಧನೆಯನ್ನು ಸಂಸ್ಥೆಯು ಟೆಂಡರ್ ನಿಯಮಗಳು ಮತ್ತು ಹೊರಗುತ್ತಿಗೆ ಏಜೆನ್ಸಿಗಳೊಂದಿಗೆ ಮಾಡಿಕೊಳ್ಳಲಾದ ಕರಾರಿನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ .

ಈ ಹಿನ್ನೆಲೆಯಲ್ಲಿ ಭದ್ರತಾ ಸೇವೆ ಸ್ವಚ್ಛತಾ ಕಾರ್ಯ ಮತ್ತು ಇನ್ನಿತರ ಸೇವೆಗಳನ್ನು ಒದಗಿಸಲು ಹೊರಗುತ್ತಿಗೆ ಏಜೆನ್ಸಿಗಳು ಕನ್ನಡ ಓದಲು ಬರೆಯಲು ಮತ್ತು ಮಾತನಾಡಲು ಬಲ್ಲ ನೌಕರರನ್ನು ಮಾತ್ರ ಸಂಸ್ಥೆಗೆ ನಿಯೋಜಿಸಬೇಕೆಂದು ಸಹ ಸೂಚಿಸಿ ಎಲ್ಲ ಏಜೆನ್ಸಿಗಳಿಗೆ ಪತ್ರ ಬರೆಯಲಾಗಿರುತ್ತದೆ .” ಎಂದು BMRCLನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅಜಯ್ ಸೇಥ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ,.

ಮೆಟ್ರೋದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬರಬೇಕು ಎಂದು ಸ್ವತಃ BMRCLನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅಜಯ್ ಸೇಥ್ ಅವರೇ ಹೇಳಿಕೊಂಡಿರುವುದರಿಂದ ಮೆಟ್ರೋದ ಯಾವುದೇ ಸಿಬ್ಬಂದಿ ಕನ್ನಡದಲ್ಲಿ ವ್ಯವಹರಿಸಲು ಉದ್ದಟತನ ತೋರಿದರೆ ಅದನ್ನು ವಿಡಿಯೋ ಮಾಡಿಕೊಂಡು ಮೆಟ್ರೋದ ಅಜಯ್ ಸೇಠ್ ಅವರಿಗೋ ಅಥವಾ ಸಂಸದ ಜಿಸಿ ಚಂದ್ರಶೇಖರ್ ಅವರಿಗೋ ಕಳುಹಿಸಿಕೊಟ್ಟರೆ ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಕನ್ನಡೇತರ ಸಿಬ್ಬಂದಿಗಳಿಗೆ ಪಾಠ ಕಲಿಸಲು ಅನುಕೂಲವಾಗುತ್ತದೆ ಎಂದು ಕೋರಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top