fbpx
ಮನೋರಂಜನೆ

ನೋಟ್‌ಬ್ಯಾನ್‌ಗೆ 2ನೇ ಪುಣ್ಯತಿಥಿ- ಸೌಂಡ್ ಮಾಡ್ತಿದೆ ಮಟಾಷ್ ಚಿತ್ರದ ‘NAMOvenkateSHA’ ಸಾಂಗ್.

500, 1000 ರೂಪಾಯಿ ನೋಟುಗಳ ಅಮಾನ್ಯೀಕರಣಗೊಂಡು ಇಂದಿಗೆ 2 ವರ್ಷ ಕಳೆದಿದೆ. ಈ ದಿನವನ್ನ ಮಟಾಶ್‌ ಟೀಮ್‌, ನೋಟ್‌ಬ್ಯಾನ್‌ಗೆ ಎರಡನೇ ಪುಣ್ಯತಿಥಿ ಅಂತ ಹೇಳೋ ಪೋಸ್ಟರ್‌ನ ರಿಲೀಸ್‌ ಮಾಡಿದೆ. ನೋಟು ಅಮಾನ್ಯೀಕರಣದ ನಂತರದ ಘಟನಾವಳಿಗಳೆಲ್ಲವೂ ನಮ್ಮೆಲ್ಲರ ಕಣ್ಣ ಮುಂದೆಯೇ ನಡೆದಿವೆ. ಪರ ವಿರೋಧ, ಆ ನಂತರದ ವಿದ್ಯಮಾನಗಳೆಲ್ಲವೂ ಭಾರತೀಯರಿಗೆ ಸ್ಪಷ್ಟವಾಗಿಯೇ ಗೊತ್ತಿದೆ. ಮಟಾಶ್‌ ಸಿನಿಮಾ ನೋಟ್‌ಬ್ಯಾನ್‌ ಆದ್ಮೇಲೆ ಏನೆಲ್ಲಾ ಎಫೆಕ್ಟ್‌ ಆಯ್ತು ಎನ್ನುವ ವಿಚಾರಗಳನ್ನಿಟ್ಟುಕೊಂಡು ಮಾಡಿರೋ ಸಿನಿಮಾ ಇದಾಗಿದೆ.

 

 

ಇದೇ ಮಟಾಷ್ ಚಿತ್ರದ ಹಾಡೊಂದು ಸಕತ್ ಸದ್ದು ಮಾಡುತ್ತಿದೆ. ‘ನಮೋ ವೆಂಕಟೇಶಾ’ ಎನ್ನುವ ಸಾಲುಗಳ ಈ ಸಾಂಗ್ ಹಲವು ವಿಚಾರಗಳಿಗಾಗಿ ಸದ್ದು ಮಾಡುತ್ತಿದೆ. ಈ ಹಾಡಿನಲ್ಲಿ ಬಳಸಲಾಗಿರುವ ‘ನಮೋ’ ಅಂದ್ರೆ ನರೇಂದ್ರ ಮೋದಿ, ‘ವೆಂಕಟೇಶಾ’ ಅನ್ನೋ ಕೊನೆಯ ಅಕ್ಷರ ‘ಶಾ’ ಅಂದ್ರೆ ಅಮಿತ್ ಶಾ ಎನ್ನುವ ಅರ್ಥ ಕಲ್ಪಿಸುತ್ತಿದೆ ಎಂದು ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.. ಖ್ಯಾತ ಚಿತ್ರಸಾಹಿತಿ ಕವಿರಾಜ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು ಎಲ್.ಆರ್. ರಾಮಾನುಜಂ ಧ್ವನಿಯಾಗಿದ್ದಾರೆ. ಉಳಿದಂತೆ ಎಸ್.ಡಿ. ಅರವಿಂದ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

೨೦೧೬ರಲ್ಲಿ ನಡೆದ ನೋಟು ಅಮಾನ್ಯೀಕರಣದ ನಿರ್ಧಾರದಿಂದ ಸರಿರಾತ್ರಿಯಲ್ಲಿ ಇಡೀ ಭಾರತದ ಅರ್ಥ ವ್ಯವಸ್ಥೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿತ್ತಲ್ಲಾ? ಅದರ ಸುತ್ತಲಿನ ನೈಜ ಘಟನೆಗಳನ್ನಾಧರಿಸಿ ಕಾಲ್ಪನಿಕ ಕಥೆಯೊಂದನ್ನು ಈ ಚಿತ್ರದ ಮೂಲಕ ಚಿತ್ರತಂಡ ಹೇಳ ಹೊರಟಿದೆ. ಜುಗಾರಿ, ಲಾಸ್ಟ್ ಬಸ್ ನಂತಹ ಚಿತ್ರಗಳನ್ನ ನಿರ್ದೇಶಿಸಿದ್ದ ಅರವಿಂದ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top