ದೇವರು

ಇಲ್ಲಿದೆ ದೈವೀ ಶಕ್ತಿ ಇರುವ ಕಲ್ಲು,ಈ ಕಲ್ಲಿನ ಮೇಲೆ ಕುಳಿತು ಕೊಂಡರೆ ಕಲ್ಲು ತನ್ನಷ್ಟಕ್ಕೆ ತಾನೇ ತಿರುಗಿ ನಿಮ್ಮಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತಂತೆ

ಈ ಒಂದು ಕಲ್ಲಿಗೆ ಇದೆ ದೈವೀ ಶಕ್ತಿ,ಭಕ್ತಿಯಿಂದ ಆ ಕಲ್ಲಿನ ಮೇಲೆ ಕುಳಿತು ಕೊಂಡರೆ ಸಾಕು ಆ ಕಲ್ಲು ತನ್ನಷ್ಟಕ್ಕೆ ತಾನೇ ತಿರುಗುತ್ತದೆಯಂತೆ.
ಈ ಊರಿನಿಂದ ಹೊರಗಿರುವ ಕಾಡಿನಲ್ಲಿದೆ ಒಂದು ಪುಟ್ಟ ಗುಡಿ. ಆ ಗುಡಿಯ ಮುಂದಿರುವ ಪುಟ್ಟ ಕಲ್ಲು ಭಕ್ತರ ಪಾಲಿನ ಆರಾಧ್ಯ ದೈವವಾಗಿದೆ. ಈ ಸ್ಥಳಕ್ಕೆ ಬಂದು ಹರಕೆ ಮಾಡಿಕೊಂಡರೆ ಕಲ್ಲಿನ ಮೇಲೆ ಕೂತರೆ ಆ ಕಲ್ಲು ಗಿರ ಗಿರ ತಿರುಗುತ್ತದೆ. ಆಗ ಅವರ ಮನಸ್ಸಿನ ಆಸೆಗಳು ಮತ್ತು ಕೋರಿಕೆಗಳು ಈಡೇರುತ್ತವೆಯೋ ಅಥವಾ ಇಲ್ಲವೋ ? ಎನ್ನುವುದು ಈ ಕಲ್ಲು ಯಾವ ಕಡೆಗೆ ತಿರುಗುತ್ತದೆ ಎನ್ನುವ ಮೂಲಕ ತೀರ್ಮಾನವಾಗುತ್ತದೆ.

 

 

 

ಇದು ಮಂಡ್ಯ ಜಿಲ್ಲೆಯ, ಮೇಲುಕೋಟೆ ಸಮೀಪದ ನಾರಾಯಣಪುರ ಗ್ರಾಮ. ಈ ಗ್ರಾಮದ ಕಾಡಿನಲ್ಲಿ ಮುತ್ತುರಾಯಸ್ವಾಮಿ ದೇವಾಲಯ ಎದುರಿಗೆ ಇರುವ ಚಿಕ್ಕ ಕಲ್ಲಿನ ಮೇಲೆ ತಮ್ಮ ಆಸೆ-ಆಕಾಂಕ್ಷೆಗಳನ್ನು ಮನಸ್ಸಿನಲ್ಲಿ ನೆನೆದು ಭಕ್ತಿಯಿಂದ ಕುಳಿತುಕೊಂಡರೆ ಸಾಕು, ಆ ಕಲ್ಲು ತನ್ನಷ್ಟಕ್ಕೆ ತಾನೇ ಸುತ್ತಲೂ ಆರಂಭಿಸುತ್ತದೆ. ಇದನ್ನು ಜನ ದೈವಶಕ್ತಿ ಎಂದು ಭಾವಿಸುತ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ನೂರಾರು ಜನರು ಇಲ್ಲಿಗೆ ಬರುತ್ತಿದ್ದಾರೆ. ನೀವು ಹರಕೆಯನ್ನು ಹೊತ್ತಿಕೊಂಡಿದ್ದರೆ ಅವುಗಳು ಈಡೇರುವುದಾದರೆ ಆ ಪುಟ್ಟ ಕಲ್ಲು ಬಲಕ್ಕೆ ತಿರುಗುತ್ತದೆ, ನಿಮ್ಮ ಆಸೆ ಈಡೇರುವುದಿಲ್ಲ ಎಂದಾದರೆ ಆ ಕಲ್ಲು ಎಡಕ್ಕೆ ತಿರುಗುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಇನ್ನು ನಿಮ್ಮ ಕೆಲಸ ಅಥವಾ ಆಸೆ ಈಡೇರುವುದೇ ಇಲ್ಲ ಎಂದಾದರೆ ಕಲ್ಲು ತಿರುಗುವುದೇ ಇಲ್ಲ. ಇಲ್ಲಿಗೆ ಬರುವ ಭಕ್ತರಿಗೆ ಕೆಲವರಿಗೆ ಒಳ್ಳೆಯದಾಗಿದೆ. ಹೀಗಾಗಿ ಹರಕೆ ತೀರಿಸಲು ಭಕ್ತರು ಬರುತ್ತಾರೆ.

ಜನಮರುಳೋ, ಜಾತ್ರೆ ಮರುಳೋ ಎನ್ನುವ ರೀತಿ ಕಲ್ಲಿನ ಮಹಿಮೆಯನ್ನು ಜನ ಒಪ್ಪಿಕೊಂಡಿದ್ದಾರೆ. ಜನರ ಭಾವನೆಗಳನ್ನು ನಾವು ಪ್ರಶ್ನೆ ಮಾಡುವುದಕ್ಕೆ ಆಗುವುದಿಲ್ಲ. ಅವರವರ ನಂಬಿಕೆಗೆ ಬಿಟ್ಟಿದ್ದು.ನೀವು ಒಂದು ಬಾರಿ ಮೇಲುಕೋಟೆಗೆ ಭೇಟಿ ನೀಡಿದಾಗ ಇಲ್ಲಿರುವ ಮುತ್ತುರಾಯ ಸ್ವಾಮಿಯ ದೇವಾಲಯಕ್ಕೆ ಭೇಟಿ ಆ ಕಲ್ಲಿನ ಮೇಲೆ ನೀವು ಕುಳಿತುಕೊಂಡು ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಗಳನ್ನು ಈಡೇರಿಸಿ ಕೊಳ್ಳಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top