ಸಮಾಚಾರ

ರೆಡ್ಡಿ ನಂತರ ಸಿಸಿಬಿ ಬಲೆಗೆ ಬಿದ್ದ ಮಾಜಿ ಸಿಎಂ ಸಿದ್ದು ಸೊಸೆ- ಸ್ಮಿತಾ ರಾಕೇಶ್ ಪಬ್ ಮೇಲೆ ಸಿಸಿಬಿ ದಾಳಿ.

ಉಪಚುನಾವಣೆ ನಂತರ ಮಾಜಿ ಸಚಿವ ಜನಾರ್ದನ ರೆಡ್ಡಿ ಅಕ್ರಮ ಹಣ ವರ್ಗಾವಣೆ ಮತ್ತು ಡೀಲ್ ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸಿಸಿಬಿ ರಾಜ್ಯದ ಪ್ರಭಾವಿ ಮುಖಂಡ, ಮಾಜಿ ಸಿಎಂ ಸಿದ್ದರಾಮಯ್ಯ ಕುಟುಂಬದ ಮೇಲೆ ಕಣ್ಣಿಟ್ಟಿದ್ದು ಈಗಾಗಲೇ ನೋಟಿಸ್ ಕೂಡ ಜಾರಿ ಮಾಡಿದೆ.

ಮಾಜಿ ಸಿಎಂ ಸಿದ್ದರಾಮಯ್ಯರ ಮಗ ದಿವಂಗತ ರಾಕೇಶ್ ಪತ್ನಿ ಸ್ಮಿತಾ ರಾಕೇಶ್ ಒಡೆತನದ ಪಬ್ ಮೇಲೆ ಸಿಸಿಬಿ ಪೊಲೀಸರು ರೇಡ್ ಮಾಡಿದ್ದಾರೆ. ಅವಧಿ ಮೀರಿ ಪಬ್ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಪಬ್ ಬಂದ್ ಮಾಡಿಸಿದ್ದಾರೆ. ದಿವಂಗತ ರಾಕೇಶ್​ ಸ್ನೇಹಿತ ರೋಹನ್​​​ ಗೌಡ ಮತ್ತು ಸ್ಮಿತಾ ಒಡೆತನದ, ಲೀ ಮೆರಿಡಿಯನ್​​​ ಹೋಟೆಲ್​​ನಲ್ಲಿರುವ ಶುಗರ್ ಫ್ಯಾಕ್ಟರಿ ಪಬ್ ಇದಾಗಿದೆ.

ನಿಯಮದ ಪ್ರಕಾರ ರಾತ್ರಿ 1 ಗಂಟೆಗೆ ಪಬ್​​ ಬಂದ್​ ಮಾಡಬೇಕು. ಆದ್ರೆ ರಾತ್ರಿ 3 ಗಂಟೆವರೆಗೂ ಪಬ್​ ತೆರೆದಿರುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಪಬ್​ ಬಂದ್​ ಮಾಡಿಸಿದ್ದಾರೆ. ಅಲ್ಲದೆ ಸ್ಮಿತಾ ಅವ್ರಿಗೆ ನೋಟಿಸ್ ನೀಡಲಾಗಿದ್ದು 10 ದಿನದೊಳಗೆ ಉತ್ತರ ನೀಡಬೇಕು ಇಲ್ಲದಿದ್ದರೆ ಶಾಶ್ವತವಾಗಿ ಬೀಗ ಜಡಿಯಲಾಗುವುದು ಎಂದು ಸಿಸಿಬಿ ಎಚ್ಚರಿಸಿದ್ದಾರೆ.

ಈ ಹಿಂದೆ ಈ ಪಬ್ಅನ್ನು ರಾಕೇಶ್ ಸಿದ್ದರಾಮಯ್ಯ ನೋಡಿಕೊಳ್ಳುತ್ತಿದ್ದರು. ಅವರ ನಿಧನದ ನಂತರ ಕಿರುತೆರೆ ನಟ ರೋಹನ್ ಗೌಡ ಹಾಗೂ ಸ್ಮಿತ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ರಾಕೇಶ್ ಹಠಾತ್ತನೆ ನಿಧನರಾದ ನಂತರ ಇದರ ಹೊಣೆಗಾರಿಕೆಯನ್ನು ಸ್ಮಿತಾ ನೋಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಸಿದ್ದರಾಮಯ್ಯನವರ ಸೊಸೆ ಪಾಲುದಾರಿಕೆಯ ಪಬ್ ಮೇಲೆ ಸಿಸಿಬಿ ಮತ್ತು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಈ ವಿಚಾರ ರಾಜಕೀಯ ಪಡಸಾಲೆಯಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top