ಮನೋರಂಜನೆ

33 ವರ್ಷದ ಹಳೆಯ ನೆನಪಿಗೆ ಜಾರಿದ ಪವರ್ ಸ್ಟಾರ್,ವಿಡಿಯೋ ಒಳಗಿದೆ

ಸಾಮಾನ್ಯವಾಗಿ ಸ್ಟಾರ್ ನಟರೊಂದಿಗೆ ಸ್ವಲ್ಪ ಅಹಂ ಇರುವುದು ಸಹಜ ಆದ್ರೆ ದೊಡ್ಡ ಮನೆಯ ಕುಡಿ ರಾಜ್ ಕುಮಾರ್ ಹಾಗೂ ಪಾರ್ವತಮ್ಮರವರ ಕಿರಿಯ ಪುತ್ರ ,ಎಲ್ಲರ ಮೆಚ್ಚಿನ ಅಪ್ಪು ಗೆ ಆ ಅಹಂ ಸ್ವಲ್ಪವೂ ಇಲ್ಲ ,ಸರಳತೆಗೆ ಇನ್ನೊಂದು ಹೆಸರು ಪುನೀತ್ ರಾಜ್ ಕುಮಾರ್ ,ಜನ ಪುನೀತ್ ರನ್ನು ಚಿಕ್ಕ ವಯಸ್ಸಿನಿಂದ ನೋಡುತ್ತಾ ಬಂದಿದ್ದಾರೆ ,ಯಾಕೆ ಅಂದ್ರೆ ಅಪ್ಪು ಚಿಕ್ಕ ವಯಸ್ಸಿಗೆ ಅಭಿನಯ ಶುರು ಮಾಡಿದವರು ,ಚಿಕ್ಕ ವಯಸ್ಸಿನ
‘ಬೆಟ್ಟದ ಹೂವು’ ಚಿತ್ರದಲ್ಲಿನ ಪಾತ್ರಕ್ಕೆ ಇಡೀ ಚಿತ್ರರಂಗವೇ ಆಶ್ಚರ್ಯ ಪಟ್ಟಿತ್ತು ,ಆ ಚಿತ್ರದಲ್ಲಿನ ಇವರ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತ್ತು.

ಈಗ ಪುನೀತ್ 33 ವರ್ಷದ ಹಿಂದಿನ ನೆನಪನ್ನು ಮೆಲಕು ಹಾಕಿ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿ ಸಂತಸಪಟ್ಟಿದ್ದಾರೆ.ಹೌದು ಬೆಟ್ಟದ ಹೂವು ಚಿತ್ರ 1985ರಲ್ಲಿ ಬಿಡುಗಡೆಯಾಗಿ ಇಂದಿಗೆ 33 ವರ್ಷಗಳು ಆಗಿದೆ. ಪುನೀತ್ ರಾಜ್‍ಕುಮಾರ್ ಅವರು ಬೆಟ್ಟದ ಹೂವು ಚಿತ್ರೀಕರಣ ಜಾಗಕ್ಕೆ ಭೇಟಿ ಮಾಡಿ ತಮ್ಮ ಬಾಲ್ಯದ ನೆನಪುಗಳನ್ನು ವಿಡಿಯೋ ಮೂಲಕ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.ಪುನೀತ್ ‘ನಟಸಾರ್ವಭೌಮ’ ಚಿತ್ರದ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಬೆಟ್ಟದ ಹೂವು ಚಿತ್ರದ ಚಿತ್ರೀಕರಣ ಸ್ಥಳದ ನೆನಪಾಗಿ ಕೂಡಲೇ ಕಾರನ್ನು ಅತ್ತಿಗುಂಡಿ ಕಡೆಗೆ ತಿರುಗಿಸಿದ್ದಾರೆ.

 

 

 

ಪುನೀತ್ ಆ ಸ್ಥಳಕ್ಕೆ ಹೋದ ನಂತರ ಶೂಟಿಂಗ್ ಸ್ಥಳ, ಶೂಟಿಂಗ್ ಸೆಟ್ ಎಲ್ಲಿ ಹಾಕಿದ್ದು ಹಾಗೂ ಚಿತ್ರದಲ್ಲಿ ಯಾರ್ಯಾರು ಯಾವ ಪಾತ್ರ ಮಾಡಿದ್ದರು ಎಂಬುದನ್ನು ವಿವರಿಸಿದ್ದಾರೆ. 33 ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಬೆಟ್ಟದ ಹೂವು ಚಿತ್ರೀಕರಣ ನೆನಪನ್ನು ಮೆಲುಕು ಹಾಕಿದ್ದಾರೆ.ಪುನೀತ್ ಚಿತ್ರೀಕರಣ ಜಾಗಕ್ಕೆ ಭೇಟಿ ನೀಡಿದ್ದಲ್ಲದೇ ಅತ್ತಿಗುಂಡಿಯ ಗ್ರಾಮಸ್ಥರನ್ನು ಮಾತನಾಡಿಸಿ ಚಿತ್ರೀಕರಣದ ಸ್ಥಳ ಹಾಗೂ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ.ಅವರ ಈ ಖುಷಿ ಕ್ಷಣವನ್ನು ನೆನೆದು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top