ಮನೋರಂಜನೆ

ಸದ್ದಿಲ್ಲದೆ ಸೆಟ್ಟೇರಿತು ರಾಘಣ್ಣನ ಮತ್ತೊಂದು ಸಿನಿಮಾ- ಅಣ್ಣನ ಚಿತ್ರಕ್ಕೆ ಅಪ್ಪು ಚಾಲನೆ.. ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.

ತೊಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟರ ಸಾಲಿನಲ್ಲಿ ಮಿರ ಮಿರ ಮಿಂಚುತ್ತಿದ್ದ ರಾಘವೇಂದ್ರ ರಾಜಕುಮಾರ್ ಪ್ರತಿಭಾನ್ವಿತ ಕಲಾವಿದ ಎನ್ನುವುದರಲ್ಲಿ ಎರಡು ಮಾತಿಲ್ಲ. ತಮ್ಮ ಮನೋಜ್ಞ ನಟನೆಯ ಮೂಲಕವೇ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಿದ್ದರೂ ಆರೋಗ್ಯ ಕೈಕೊಟ್ಟ ಕಾರಣ ಚಿಕಿತ್ಸೆ ಪಡೆಯುವ ಸಲುವಾಗಿ ನಟನೆಯಿಂದ ಸುಮಾರು ಒಂದೂವರೆ ದಶಕಗಳ ದೂರ ಉಳಿದಿದ್ದರು. ಆದರೆ ಇದೀಗ ಅವರು ತಮ್ಮ ನೆಚ್ಚಿನ ನಟನಾ ಕ್ಷೇತ್ರಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.

ನಿಖಿಲ್ ಮಂಜು ನಿರ್ದೇಶನ ಮಾಡುತ್ತಿರುವ ‘ಅಮ್ಮನ ಮನೆ’ ಚಿತ್ರದಲ್ಲಿ ಸದ್ಯ ಬ್ಯುಸಿ ಇರುವ ರಾಘವೇಂದ್ರ ರಾಜ್ ಕುಮಾರ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಚಿತ್ರದ ಹೆಸರು ‘ತ್ರಯಂಬಕಂ’. ಚಿತ್ರದಲ್ಲಿ ಆರ್​ಜೆ ರೋಹಿತ್ ನಟಿಸುತ್ತಿದ್ದು ಅವರಿಗೆ ಜೋಡಿಯಾಗಿ ಅನುಪಮಾ ಗೌಡ ನಟಿಸಲಿದ್ದಾರೆ. ಇಲ್ಲಿ ಅನುಪಮಾ ಅವರ ತಂದೆಯ ಪಾತ್ರವನ್ನು ರಾಘವೇಂದ್ರ ರಾಜ್​ಕುಮಾರ್ ನಿರ್ವಹಿಸುತ್ತಿರುವುದು ವಿಶೇಷ.

 

 

ತ್ರಯಂಬಕಂ ಚಿತ್ರದ ಮುಹೂರ್ತ ಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಆಗಮಿಸಿ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ತ್ರಯಂಬಕಂ ಚಿತ್ರಕ್ಕೆ ಶುಭಾಶಯ ತಿಳಿಸಿದರು. ಇಂದು ಚಿತ್ರದ ಮುಹೂರ್ತ ಬೆಂಗಳೂರಿನ ದೇವಾಲಯದಲ್ಲಿ ಅದ್ದೂರಿಯಾಗಿ ನಡೆದಿದೆ.

ಆ ಕರಾಳ ರಾತ್ರಿ’ ನಿರ್ದೇಶನ ಮಾಡಿದ್ದಾರಲ್ಲಾ ದಯಾಳ್ ಪದ್ಮನಾಭನ್ ಅವರೇ ಈ ಸಿನಿಮಾವನ್ನು ಕೂಡ ನಿರ್ದೇಶನ ಮಾಡುತ್ತಿದ್ದಾರೆ. ‘ತ್ರಯಂಬಕಂ’ ಎಂದರೆ ಮೂರು ಕಣ್ಣು ಉಳ್ಳವನು, ಶಿವ ಎಂದರ್ಥ. ಇಡೀ ಚಿತ್ರ ಒಂದು ಶಿವಲಿಂಗ ಮತ್ತು ಕೊಲೆಯ ಸುತ್ತ ನಡೆಯಲಿದ್ದು, ಕಥೆಗೆ ಸೂಕ್ತ ಎಂಬ ಕಾರಣಕ್ಕೆ ಆ ಶೀರ್ಷಿಕೆಯನ್ನು ಅಂತಿಮ ಮಾಡಿದ್ದಾರಂತೆ ನಿರ್ದೇಶಕ ದಯಾಳ್.. ಈಗಾಗಲೇ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿರುವ ನಿರ್ದೇಶಕರು, ಚಿತ್ರೀಕರಣಕ್ಕೂ ಪ್ಲ್ಯಾನ್ ರೂಪಿಸಿದ್ದಾರೆ. ಐವರು ಟೆಕ್ಕಿಗಳು ಚಿತ್ರಕ್ಕೆ ಬಂಡವಾಳ ಹೂಡಲು ಮುಂದಾಗಿದ್ದಾರೆ. ನವೀನ್ ಕೃಷ್ಣ ಸಂಭಾಷಣೆ ಬರೆಯಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top