ದೇವರು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಕೆಲವು ಸಂಕೇತಗಳು ನೀವು ಬೇಗನೆ ಶ್ರೀಮಂತರಾಗಿ ಯಶಸ್ವಿ ವ್ಯಕ್ತಿ ಆಗ್ತೀರಾ ಅಂತ ಸೂಚಿಸುತ್ತಂತೆ

ಜ್ಯೋತಿಷ್ಯಾಸ್ತ್ರದ ಪ್ರಕಾರ ಕೆಲವು ಸಂಕೇತಗಳು ನೀವು ಬೇಗನೆ ಶ್ರೀಮಂತರಾಗಿ ಯಶಸ್ವಿ ವ್ಯಕ್ತಿ ಆಗುತ್ತೀರಿ ಎಂದು ಹೇಳುತ್ತವೆ .

ಸಾಮಾನ್ಯವಾಗಿ ಸಿರಿವಂತರಾಗಬೇಕೆಂದರೆ ಅದೃಷ್ಟ ಇರಬೇಕು ಎಂದು ಎಲ್ಲರೂ ಹೇಳುತ್ತಾರೆ. ಇನ್ನು ಕೆಲವು ಜನರು ಹೇಳುವ ಪ್ರಕಾರ ಕಷ್ಟಪಟ್ಟರೆ ಮಾತ್ರ ಸಿರಿವಂತರಾಗಬಹುದು ಎಂದು ಭಾವಿಸಿದ್ದಾರೆ. ಆದರೆ ಇವರ ಅಭಿಪ್ರಾಯಗಳು ಸಹ ಸತ್ಯವೇ ಆಗಿದೆ. ಏನೆಂದರೆ ಈ ಎರಡೂ ಸೇರಿದರೆ ಮಾತ್ರ ಅಂದರೆ ಅದೃಷ್ಟವು ಸಹ ನಮ್ಮ ಜತೆಗಿದ್ದು ನಾವೂ ಸಹ ಕಷ್ಟಪಟ್ಟು ದುಡಿದರೆ ಮಾತ್ರ ಸಿರಿವಂತರಾಗಲು ಸಾಧ್ಯ ಸಿರಿವಂತರು ಯಾರೂ ಆಗುತ್ತಾರೋ ? ಅವರಿಗೆ ಮುಂಚೆಯೇ ಕೆಲವು ಸೂಚನೆಗಳು ಗೊತ್ತಾಗುತ್ತವೆ. ಎಂದು ಶಾಸ್ತ್ರಗಳು ಹೇಳುತ್ತವೆ.ಬೆಳಗಿನ ಜಾವ ಎದ್ದ ತಕ್ಷಣ ನೀರಿನಲ್ಲಿ ಆಟವಾಡುತ್ತಿರುವ ಪಕ್ಷಿಗಳು ಮತ್ತು ತೆಂಗಿನಕಾಯಿ ಕಾಣಿಸಿಕೊಂಡರೆ ಯಾವುದೋ ಒಂದು ರೀತಿಯಲ್ಲಿ ಹಣ ಬರುತ್ತದೆ ಎಂಬ ಸಂಕೇತವನ್ನು ಸೂಚಿಸುತ್ತದೆ.

 

 

 

ನಿಮ್ಮ ಮನೆಯ ಮುಂದೆ ಹಸುವು ಗರಿಕೆ ಹುಲ್ಲನ್ನು ತಿನ್ನುತ್ತ ಇದ್ದದ್ದು ಕಾಣಿಸಿಕೊಂಡರೆ ಅದು ನಿಮಗೆ ಅದೃಷ್ಟ ಒಲಿದು ಬರುವ ಶುಭ ಸಂಕೇತವಾಗಿದೆ .ಬಿಳಿಯ ಬಣ್ಣದ ಅಥವಾ ಬಂಗಾರದ ಬಣ್ಣದ ಹಾವು ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ನೀವು ಬೇಗನೆ ಸಿರಿವಂತರಾಗುತ್ತಾರೆ ಎಂದು ಅದು ಸೂಚಿಸುತ್ತಿದೆ.ನೀವು ಯಾವುದಾದರೂ ಒಂದು ಮುಖ್ಯವಾದ ಕೆಲಸದ ಮೇಲೆ ಮನೆಯಿಂದ ಹೊರಗೆ ಹೋಗುವಾಗ ನಾಯಿ, ಕೋತಿ ಅಥವಾ ಹಾವು ಇಲ್ಲ ಯಾವುದಾದರೂ ಪಕ್ಷಿ ಬಲಗಡೆಯಿಂದ ಬಂದರೆ ನೀವು ಸಹ ತ್ವರಿತವಾಗಿ ಶ್ರೀಮಂತರಾಗುವಿರಿ ಎಂದು ಅದು ಸೂಚಿಸುತ್ತದೆ.ನೀರು ತುಂಬಿದ ಬಿಂದಿಗೆಯ ಮೇಲೆ ಕಾಗೆ ಕುಳಿತಿರುವುದನ್ನು ಕಂಡರೆ ಅವರು ಸಹ ತ್ವರಿತವಾಗಿ ಧನವಂತರಾಗುತ್ತಾರೆ ಎಂದರ್ಥ.

ತುಂಬಾ ಜನರು ಇರುವೆಗೆ ಆಹಾರ ಹಾಕುತ್ತಾರೆ.ಇದರಿಂದ ಒಳ್ಳೆಯದಾಗುವುದಾ ? ಎಂದು ಇಂದು ನಾವು ತಿಳಿಯೋಣ.ಅನ್ನದಾನದ ಮಹತ್ವ ಏನು ? ಮತ್ತು ಅನುಸರಿಸಬೇಕಾದ ನಿಯಮಗಳೇನು ಎಂದು ಸಹ ಇಂದು ನಾವು ತಿಳಿಯೋಣ..

ಪ್ರತಿಯೊಬ್ಬ ವ್ಯಕ್ತಿಯೂ ಸಹ ಅವರಿಗೆ ಸಾಧ್ಯವಾದಷ್ಟು ದಾನ ಧರ್ಮವನ್ನು ಮಾಡಿದರೆ ಪುಣ್ಯ ಲಭಿಸುತ್ತದೆ ಎಂದು ನಮ್ಮ ಹಿಂದೂ ಸಂಪ್ರದಾಯ ಹೇಳುತ್ತದೆ. ತುಂಬಾ ಜನರು ಇರುವೆಗೆ ಆಹಾರ ಹಾಕುತ್ತಾ ಇರುತ್ತಾರೆ.ಇದು ಪುಣ್ಯದ ಕೆಲಸನಾ ? ಅಥವಾ ಪಾಪದ ಕೆಲಸನಾ ? ಎಂದು ಇಂದು ನಾವು ತಿಳಿಯೋಣ ಬನ್ನಿಕಷ್ಟದಿಂದ ಬಳಲುತ್ತಿರುವ ಬಡ ಜನರಿಗೆ ಅಥವಾ ಜೀವ ಜಂತುಗಳಿಗೆ ಅನ್ನದಾನ ಮಾಡಿದರೆ ಸಕಲ ರೀತಿಯ ದೋಷಗಳು ದೂರವಾಗಿ ಪುಣ್ಯ ಲಭಿಸುತ್ತದೆ.ನಾವು ತಿಳಿದೋ ಅಥವಾ ತಿಳಿಯದೆಯೂ ಮಾಡಿರುವ ಎಲ್ಲಾ ಪಾಪಗಳು ತಪ್ಪುಗಳಿoದ ಸಹ ಮುಕ್ತರಾಗುತ್ತೇವೆ. ದಾನದಲ್ಲಿ ಅನ್ನದಾನ ತುಂಬಾ ಶ್ರೇಷ್ಠವಾದದ್ದು ಎಂದು ಹೇಳುತ್ತಾರೆ.

ಆದರೆ ಎಲ್ಲರೂ ಅನ್ನದಾನ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ತುಂಬಾ ಜನರಿಗೆ ಆರ್ಥಿಕ ಸಮಸ್ಯೆಗಳು ಇರುತ್ತವೆ.ಹೀಗೆ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರು ಅನ್ನದಾನ ಮಾಡಿದರೆ ಮಾಡಿದ ಪುಣ್ಯ ಲಭಿಸಬೇಕಾದರೆ ಏನು ಮಾಡಬೇಕು ? ಎಂದು ನಮ್ಮ ಶಾಸ್ತ್ರಗಳು ಕೆಲವು ಸುಲಭವಾದ ಮಾರ್ಗಗಳನ್ನು ತಿಳಿಸಿದೆ.ಸಕ್ಕರೆ ಅಥವಾ ಅಕ್ಕಿ ಹಿಟ್ಟನ್ನು ಮಿಶ್ರಣ ಮಾಡಿದ ಬೆಲ್ಲವನ್ನು ಕಪ್ಪು ಇರುವೆ ಇರುವ ಕಡೆ ಇಟ್ಟರೆ, ಅದು ಹತ್ತು ಸಾವಿರ ಜನರಿಗೆ ಅನ್ನದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇದು ಮನೆಯಲ್ಲಿ ಅಥವಾ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದೆ, ತಿರುಗಾಡದೇ ಇರುವ ಜಾಗದಲ್ಲಿ ಹಾಕಿದರೆ ಒಳ್ಳೆಯದು.

ಜೇನುತುಪ್ಪವನ್ನು ವೀಳ್ಯದೆಲೆಯ ಅಥವಾ ಅರಳಿ ಮರದ ಎಲೆಯಲ್ಲಿ ಇಟ್ಟು ಸೂರ್ಯ ದೇವನಿಗೆ ಮತ್ತು ತುಳಸಿ ದೇವಿಗೆ ನೈವೇದ್ಯವಾಗಿ ಸಮರ್ಪಿಸಿದರೆ ಇದಕ್ಕೆ ವಿಶೇಷವಾದ ಫಲವೂ ದೊರೆಯುತ್ತದೆ. ಹೀಗೆ ಮಾಡುವುದರಿಂದ ತುಂಬಾ ದೋಷಗಳು ಪರಿಹಾರವಾಗುತ್ತವೆ.

 

 

 

ಆರ್ಥಿಕವಾಗಿ ಅನ್ನದಾನ ಮಾಡುವ ಸಾಮರ್ಥ್ಯ ಇರುವವರು ಸಹ ಸರಳವಾಗಿ ಹೀಗೆ ದಾನ ಮಾಡಿ ಪುಣ್ಯವನ್ನು ದಕ್ಕಿಸಿಕೊಳ್ಳಬಹುದು ಎಂದು ಹೇಳಲಾಗಿದೆ.ಇನ್ನು ಕೆಲವರು ಆರ್ಥಿಕವಾಗಿ ಸದೃಢವಾಗಿದ್ದು ಅನ್ನದಾನ ಮಾಡುವ ಸಾಮರ್ಥ್ಯವಿದ್ದರೂ ಸಹ ಸಿರಿವಂತರಾಗಿದ್ದರು ಸಹ ಅತಿಯಾಗಿ ಆಸೆ ಪಡುವವರು ಇದ್ದಾರೆ. ಅಂಥವರಿಗೆ ಪುಣ್ಯ ಸಿಗುವುದಿಲ್ಲ. ಅಷ್ಟೇ ಅಲ್ಲದೆ ಇದರ ಜೊತೆಗೆ ಇನ್ನೂ ದೋಷಗಳು ಸಹ ಹೆಚ್ಚಾಗುತ್ತವೆ.ಆರ್ಥಿಕವಾಗಿ ಶಕ್ತಿ ಇಲ್ಲದವರು ಏನೇ ದಾನ ಮಾಡಿದರೂ ಸಹ ಅದು ಪೂರ್ತಿಯಾಗಿ ಅದರ ಫಲ ದೊರೆಯುತ್ತದೆಆದರೆ ಆರ್ಥಿಕ ಶಕ್ತಿಯೂ ಚೆನ್ನಾಗಿದ್ದು ಅವರ ಶಕ್ತಿಗೆ ಅನುಸಾರವಾಗಿ ದಾನ ಮಾಡಿದರೆ ಒಳ್ಳೆಯದು. ಅಷ್ಟೇ ಅಲ್ಲದೆ ಇರುವೆಗೆ ಆಹಾರ ಹಾಕಿದರೆ ಹತ್ತು ಸಾವಿರ ಜನರಿಗೆ ಅನ್ನದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top