fbpx
ಧರ್ಮ

ಕಾರ್ತಿಕ ಮಾಸದಲ್ಲಿ ಈ ನಿಯಮಗಳನ್ನು ಪಾಲನೆ ಮಾಡಿದ್ರೆ ಶಿವ ಹಾಗೂ ಶ್ರೀ ಹರಿಯ ಕೃಪೆಗೆ ಪಾತ್ರರಾಗಿ ಸಕಲ ಕಷ್ಟಗಳಿಂದ ಮುಕ್ತಿ ಪಡೆಯಬಹುದಂತೆ

ಕಾರ್ತಿಕ ಮಾಸ ಪ್ರಾರಂಭವಾಗಿದೆ.ಕಾರ್ತಿಕ ಮಾಸದಂತಹ ಉತ್ತಮವಾದ ಮಾಸ ಬೇರೊಂದು ಮಾಸ ಇಲ್ಲ ಎನ್ನುವುದು ಹಿರಿಯರ ಮಾತಾಗಿದೆ. ದೀಪಾವಳಿ ಆದ ಮರುದಿನದಿಂದ ಕಾರ್ತಿಕ ಸ್ನಾನವನ್ನು ಆಚರಿಸಬೇಕು. ಪ್ರತಿದಿನ ಮಾಡುವ ಈ ಸ್ನಾನಕ್ಕೂ ಹಾಗೂ ಈ ಮಾಸದಲ್ಲಿ ಮಾಡುವ ಸ್ನಾನಕ್ಕೂ ತುಂಬಾ ವ್ಯತ್ಯಾಸವಿದೆ.ಈ ಮಾಸ ಪೂರ್ತಿಯಾಗಿ ಯಾರು ಪುಣ್ಯ ನದಿಯ ಸ್ನಾನವನ್ನು ಭಕ್ತಿ ಶ್ರದ್ಧೆಯಿಂದ ನಿಯಮ ನಿಷ್ಠೆಯಿಂದ ಮಾಡುತ್ತಾರೋ ಅಂಥವರಿಗೆ ನಾರಾಯಣ ಕೃಪೆ ಸಂಪೂರ್ಣವಾಗಿ ಲಭಿಸುತ್ತದೆ.ಬೆಳಗಿನ ಜಾವ ಪುಣ್ಯ ನದಿಯ ಸ್ನಾನ ಮಾಡುವುದು ತುಂಬಾ ಮುಖ್ಯ. ಸೂರ್ಯನು ತುಲಾ ರಾಶಿಯಲ್ಲಿ ಇರುವಾಗಲೇ ಸ್ನಾನ ಪೂರ್ತಿಯಾಗಬೇಕು. ಅಂದರೆ ಬೆಳಗಿನ ಜಾವ ಐದು ಗಂಟೆಯೊಳಗೆ ಸ್ನಾನ ಪೂರ್ತಿ ಯಾಗಿರಬೇಕು.

 

 

ಮುಖ್ಯವಾಗಿ ಈ ಮಾಸದಲ್ಲಿ ದಿಗಂಬರ ಸ್ನಾನವನ್ನು ಮಾಡಬಾರದು. ಮೊದಲಿಗೆ ಗಂಗಾ ದೇವಿಯನ್ನು ಸ್ಮರಿಸಿ ಭಕ್ತಿಯಿಂದ ಶಿವನನ್ನು ಪ್ರಾರ್ಥಿಸಿ, ಶಿವ ಶಿವ ಎಂದು ಸ್ಮರಣೆ ಮಾಡುತ್ತಾ ನದಿಯ ಸ್ನಾನವನ್ನು ಮಾಡಬೇಕು. ಸಮುದ್ರದ ನೀರಿನಲ್ಲಿ ಅಥವಾ ನದಿಯಲ್ಲಿ ಕೆರೆಯಲ್ಲಿ ಸ್ನಾನವನ್ನು ಮಾಡಿದರೆ ಒಳ್ಳೆಯದು. ಕಾರ್ತಿಕ ಮಾಸದಲ್ಲಿ ಚಂದ್ರನಿಂದ ಬರುವ ಬೆಳಕು ನೀರಿನಲ್ಲಿ ಔಷಧೀಯ ಗುಣಗಳನ್ನು ಹೆಚ್ಚಿಸುತ್ತದೆ.ಸಮುದ್ರಗಳಲ್ಲಿ ಹೆಚ್ಚಿನ ಬೆಳಕು ಬೀಳುವುದರಿಂದ ಈ ನೀರಿನಿಂದ ನಾವು ಸ್ನಾನ ಮಾಡಿದರೆ ನಮ್ಮ ಆರೋಗ್ಯ ಸಹ ವೃದ್ಧಿಯಾಗುತ್ತದೆ. ಹೀಗೆ ಸ್ನಾನ ಪೂರ್ತಿಯಾದ ನಂತರ ಮಡಿ ವಸ್ತ್ರವನ್ನು ಧರಿಸಿ ಶಿವನನ್ನು ಭಕ್ತಿ ಶ್ರದ್ಧೆಯಿಂದ ಪ್ರಾರ್ಥಿಸಬೇಕು.ಹೀಗೆ ಕಾರ್ತಿಕ ಮಾಸ ಪೂರ್ತಿಯಾಗಿ ಪುಣ್ಯ ನದಿಯ ಸ್ನಾನ ಮಾಡಲು ಸಮಯ ಇಲ್ಲದವರು, ಕಾರ್ತಿಕ ಮಾಸದಲ್ಲಿ ಬರುವ ಶುಕ್ಲ ಪಾಡ್ಯ ಹುಣ್ಣಿಮೆ ಮತ್ತು ಕಾರ್ತಿಕ ಮಾಸದ ಅಮಾವಾಸ್ಯೆಯ ವಿಶೇಷ ದಿನಗಳಲ್ಲಿ ಪುಣ್ಯ ಸ್ನಾನವನ್ನು ಮಾಡುವುದರಿಂದ ವಿಶೇಷ ಫಲಗಳನ್ನು ಪಡೆಯಬಹುದು.ಈ ಮಾಸದಲ್ಲಿ ಶಿವನ ಆರಾಧನೆ ಮಾಡಿ ನಾರಾಯಣ ಕೃಪೆಗೂ ಸಹ ಪಾತ್ರರಾಗಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top