ಮನೋರಂಜನೆ

ಕನ್ನಡಕ್ಕೆ ಕಾಲಿಟ್ಟ ಹಾಲಿವುಡ್ ಸ್ಟಂಟ್​ ಮಾಸ್ಟರ್​: ಜೋರಾಗಿದೆ ಪೈಲ್ವಾನ್ ತಯಾರಿ.

ನಿರ್ಮಾಣ ಹಂತದಲ್ಲಿರುವಾಗಲೇ ಸಿನಿಮಾ ಮೇಲೆ ಬೆಟ್ಟದಂತ ನಿರೀಕ್ಷೆ ಹುಟ್ಟುಹಾಕಿಸುವುದು ಸುದೀಪ್ ಸಿನಿಮಾಗಳ ಅಸಲಿ ಸ್ಪೆಷಾಲಿಟಿ. ಅದು ಪೈಲ್ವಾನ್ ಚಿತ್ರದಲ್ಲೂ ಮುಂದುವರೆಯುತ್ತಿದೆ.. ಪ್ರೇಕ್ಷಕರಲ್ಲೇ ವಿಭಿನ್ನ ರೀತಿಯ ಕುತೂಹಲ ಕೆರಳಿಸಿರುವ ಪೈಲ್ವಾನ್ ಚಿತ್ರ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ.. ಈ ಚಿತ್ರಕ್ಕೆ ಇತ್ತೀಚಿಗಷ್ಟೇ ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ ಸೇರ್ಪಡೆಗೊಂಡಿದ್ದರು ಇದೀಗ ಚಿತ್ರಕ್ಕಾಗಿ ಬಾಲಿವುಡ್ ಸ್ಟಂಟ್ ಮಾಸ್ಟರ್ ಅನ್ನು ಚಿತ್ರತಂಡ ಕರೆತಂದಿದೆ.

 

 

ಹಾಲಿವುಡ್ ಫೈಟರ್ ಲರ್ನೆಲ್ ಸ್ಟೊವೆಲ್ ಅವರು ಈಗ ಪೈಲ್ವಾನ್ ಸಿನಿಮಾಗೆ ಸ್ಟಂಟ್ ಮಾಸ್ಟರ್ ಆಗಿ ಬರುವ ಮೂಲಕ ಮೊದಲ ಬಾರಿಗೆ ಸ್ಯಾಂಡಲ್​ವುಡ್​​ಗೆ ಬಂದ ಮೊದಲ ಅಂತಾರಾಷ್ಟ್ರೀಯ ಫೈಟ್ ಮಾಸ್ಟರ್ ಎನಿಸಿಕೊಂಡಿದ್ದಾರೆ.. ಲರ್ನೆಲ್​ ಸ್ಟೋವೆಲ್​, ಅಮೇರಿಕಾದ ಜನಪ್ರಿಯ ಕ್ರೀಡಾಪಟು. ಫೈಟಿಂಗ್​, ಮಾರ್ಷೆಲ್​ ಆರ್ಟ್ಸ್​ನಲ್ಲಿ ವಿಶ್ವ ವಿಖ್ಯಾತ ಕ್ರೀಡಾಪಟು. ಭಾರತೀಯ ಸಿನಿಮಾಗಳಲ್ಲೂ ಲರ್ನೆಲ್​ ಸ್ಟೋವೆಲ್​ ತಮ್ಮ ಕರಾಮತ್ತು ತೋರಿದ್ದು ಸುಲ್ತಾನ್​, ಬಾಹುಬಲಿ- 2 ನಲ್ಲೂ ಫೈಟ್ ಮಾಸ್ಟರ್ ಆಗಿ ಕೆಲಸ ಮಾಡಿದ್ದರು. ಇದೀಗ ಕನ್ನಡ ಚಿತ್ರಕ್ಕೂ ಕಾಲಿಡುತ್ತಿದ್ದಾರೆ..

ಹೆಬ್ಬುಲಿಯಂಥಾ ಹಿಟ್ ಚಿತ್ರದ ಬಳಿಕ ಕಿಚ್ಚಾ ಸುದೀಪ್ ಮತ್ತು ನಿರ್ದೇಶಕ ಕೃಷ್ಣ ಪೈಲ್ವಾನ್ ಚಿತ್ರದ ಮೂಲಕ ಮತ್ತೆ ಒಂದಾಗಿದ್ದು ಕೃಷ್ಣ ನಿರ್ದೇಶನ ಮಾಡುತ್ತಿರೋ ಮೂರನೇ ಚಿತ್ರ ಇದಾಗಿದೆ. ಇನ್ನು ಪೈಲ್ವಾನ್ ಚಿತ್ರದ ಬಗ್ಗೆ ಹೇಳಬೇಕೆಂದರೆ ಮುಂಬೈ ಬೆಡಗಿ ಆಕಾಂಕ್ಷ ಸಿಂಗ್ ಸುದೀಪ್’ಗೆ ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಬಾಲಿವುಡ್ ನಟ ಸುನಿಲ್ ಶೆಟ್ಟಿ, ಕರುಣ್ ದುಹಾನ್ ಸಿಂಗ್, ಚಿಕ್ಕಣ್ಣ ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ.

ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅದಕ್ಕಾಗಿ ದೇಹವನ್ನು ದಂಡಿಸಿ ಗಾತ್ರವನ್ನು ಹೆಚ್ಚಿಸಿಕೊಂಡಿದ್ದಾರೆ. ಅದಕ್ಕಾಗಿ ಮೊದಲ ಬಾರಿ ಸೀರಿಯಸ್ಸಾಗಿಯೇ ಜಿಮ್‌ನತ್ತ ಮುಖ ಮಾಡಿದ್ದಾರೆ! RRR ಮೋಶನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಪೈಲ್ವಾನ್ ಚಿತ್ರವನ್ನು ನಿರ್ದೇಶಕ ಕೃಷ್ಣಾ ಅವರ ಪತ್ನಿ ಸ್ವಪ್ನ ಕೃಷ್ಣಾ ನಿರ್ಮಾಣ ಮಾಡುತ್ತಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಕರುಣಾಕರ್ ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿರಲಿದೆ.ಎಲ್ಲವೂ ಅಂದುಕೊಂಡಂತೆ ನಡೆದರೆ ಯುಗಾದಿ ಹಬ್ಬಕ್ಕೆ ಬೇಸಿಗೆ ರಜೆಯ ದಿನಗಳಲ್ಲಿ ‘ಪೈಲ್ವಾನ್’ ಚಿತ್ರಮಂದಿರದಲ್ಲಿ ಕಣಕ್ಕಿಳಿಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top