ಮನೋರಂಜನೆ

ಸಪ್ತಪದಿ ತುಳಿಯಲು ಇಲ್ಲಿಗೆ ಹಾರಿದ ಬಾಲಿವುಡ್ ಲವ್​ ಬರ್ಡ್ಸ್

ಬಾಲಿವುಡ್ ನಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ,ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಬಾಲಿವುಡ್ ಲವ್​ ಬರ್ಡ್ಸ್​ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಂದು ಇಟಲಿಗೆ ಪ್ರಯಾಣ ಬೆಳೆಸಿದರು.ಬಾಲಿವುಡ್ ನ ಅನೇಕ ಪ್ರಸಿದ್ಧ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.ನವೆಂಬರ್ 14-15 ರಂದು ದೀಪಿಕಾ-ರಣವೀರ್ ಮದುವೆ ಕಾರ್ಯಕ್ರಮ ಇಟಲಿಯಲ್ಲಿ ನಡೆಯಲಿದೆ.ಮದುವೆಗೆ ಇನ್ನು ಕೆಲವೇ ದಿನ ಬಾಕಿಯಿದೆ. ಮದುವೆಗೆ ತಯಾರಿ ಮಾಡಿಕೊಳ್ಳಲು ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಟಲಿಗೆ ಪ್ರಯಾಣ ಬೆಳೆಸಿದ್ದಾರೆ,ಈ ಜೋಡಿ ಕುಟುಂಬಗಳ ಸಮೇತ ಇಂದು ಮುಂಜಾನೆ ಮುಂಬೈನ ಏರ್​ಪೋರ್ಟ್​​ ಮೂಲಕ ಇಟಲಿಗೆ ತೆರಳಿತು.

 

 

 

ಅಂದಂಗೆ ದೀಪ್​ವೀರ್​ ಜೋಡಿಯ ಮದುವೆಯು ನವೆಂಬರ್​ 14-15ರಂದು ಇಟಲಿಯ ಲೇಕ್​ ಕೊಮೊದಲ್ಲಿ ನಡೆಯಲಿದೆ.ವಧು ದೀಪಿಕಾ ಹಾಗೂ ವರ ರಣವೀರ್ ಸಿಂಗ್ ಬಿಳಿ ಬಣ್ಣದ ಬಟ್ಟೆ ಧರಿಸಿದ್ದರು. ಇಬ್ಬರು ಮಾತನಾಡಿಕೊಂಡು ಬಟ್ಟೆ ಧರಿಸಿದಂತಿತ್ತು. ಹಾಗೆ ವಿಮಾನ ನಿಲ್ದಾಣಕ್ಕೆ ಬಂದ ಕಾರಿನ ಬಣ್ಣ ಕೂಡ ಬೆಳ್ಳಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ರಣವೀರ್ ಸಿಂಗ್ ತಂದೆ ಕಪ್ಪು ಬ್ಲೇಜರ್ ನಲ್ಲಿ ಮಿಂಚುತ್ತಿದ್ದರು. ರಣವೀರ್ ಹಾಗೂ ದೀಪಿಕಾ ಬೇರೆ ಬೇರೆ ಸಮುದಾಯದವರು. ಹಾಗಾಗಿ ತಮ್ಮ ಶೈಲಿಯಲ್ಲಿ ಎರಡು ಬಾರಿ ಮದುವೆಯಾಗಲಿದ್ದಾರೆ. 14 ರಂದು ದಕ್ಷಿಣ ಭಾರತದ ಶೈಲಿಯಲ್ಲಿ ಮದುವೆ ನಡೆದ್ರೆ 15 ರಂದು ಸಿಂಧಿ ಸಮುದಾಯದಂತೆ ಮದುವೆ ನಡೆಯಲಿದೆ.

ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ದೀಪ್​ವೀರ್ ಇತ್ತೀಚೆಗಷ್ಟೆ ಮದುವೆಯ ವಿಷಯವನ್ನು ಬಹಿರಂಗ ಪಡಿಸಿದ್ದರು. ಈ ಜೋಡಿ ಮದುವೆಗೆ ಇಡೀ ಬಾಲಿವುಡ್​ ಎದುರು ನೋಡುತ್ತಿದೆ.ಮದುವೆ ನಂತ್ರ ನವೆಂಬರ್ 23 ರಂದು ಬೆಂಗಳೂರಿನಲ್ಲಿ ಪಾರ್ಟಿ ನೀಡಲು ದೀಪಿಕಾ-ರಣವೀರ್ ನಿರ್ಧರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್ ದಂಡೇ ಬರುವ ಸಾಧ್ಯತೆಯಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top