fbpx
ಸಮಾಚಾರ

24ರಂದು ಲೋಕಾರ್ಪಣೆಗೊಳ್ಳಲಿದೆ ದೇವೇಗೌಡರ ಕಂಚಿನ ಪ್ರತಿಮೆ- ಏಕೆ ಪ್ರತಿಮೆ?

ಇಗ್ಗಲೂರು ಜಲಾಶಯ (ಎಚ್‌.ಡಿ.ದೇವೇಗೌಡ ಬ್ಯಾರೇಜ್‌) ಸ್ಥಾಪನೆಗೆ ಕಾರಣಕರ್ತರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕಂಚಿನ ಪ್ರತಿಮೆ ಸ್ಥಾಪಿಸಲು ಚನ್ನಪಟ್ಟಣದ ತಾಲೂಕಿನ ಗೌಡರ ಅಭಿಮಾನಿ ಬಳಗ ತೀರ್ಮಾನಿಸಿದ್ದು, ಇದಕ್ಕಾಗಿ ದೇವೇಗೌಡರ 6.9 ಅಡಿ ಎತ್ತರದ ಕಂಚಿನ ಪ್ರತಿಮೆ ಸಿದ್ಧಗೊಳಿಸಿದೆ. ಇದೆ ನವೆಂಬರ್ 24ರಂದು ಪ್ರತಿಮೆ ಅನಾವರಣಗೊಳ್ಳಲಿದೆ.

ಚನ್ನಪಟ್ಟಣ ತಾಲೂಕಿನ ಸಾಮಂದಿಪುರದ ಬಳಿ ಪ್ರತಿಷ್ಠಾಪನೆಯಾಗಲಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕಂಚಿನ ಪ್ರತಿಮೆಯನ್ನು ಬಿಡದಿ ಜೆಡಿಎಸ್ ಮುಖಂಡರು ಶುಕ್ರವಾರ ಆತ್ಮೀಯವಾಗಿ ಬೀಳ್ಕೊಟ್ಟರು.ಬಿಡದಿ ಕೇತುಗಾನಹಳ್ಳಿ ರಸ್ತೆಯಲ್ಲಿರುವ ಚಂದ್ರಿಕಾ ಲೋಹ ಶಿಲ್ಪಕಲಾ ಕೇಂದ್ರ ಹಾಗೂ ಜಿ.ಎಸ್.ಕ್ರಿಯೇಶನ್ಸ್​ನ ಲೋಹಶಿಲ್ಪಿ ಸುನೀಲ್ ಕುಮಾರ್ ಮತ್ತು ಅನಿಲ್ ತಂಡ ನಿರ್ವಿುಸಿರುವ 6.9 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ತೆರೆದ ವಾಹನದ ಮೂಲಕ ಚನ್ನಪಟ್ಟಣಕ್ಕೆ ರವಾನಿಸಲಾಯಿತು.

ಏಕೆ ಪ್ರತಿಮೆ?:
ಇಗ್ಗಲೂರು ಅಣೆಕಟ್ಟೆ ಯೋಜನೆಯು ಆರಂಭದಲ್ಲಿಯೇ ನೆನೆಗುದ್ದಿಗೆ ಬಿದ್ದಿತ್ತು. 1979 ರಲ್ಲಿ ವಿರೇಂದ್ರ ಪಾಟೀಲರ ಅವಧಿಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಎಂ.ವಿ ರಾಜಶೇಖರನ್ ಅವರ ಒತ್ತಡದಿಂದ ಈ ಯೋಜನೆ ಮರುಜೀವ ಪಡೆಯಿತು. ಆದರೂ ಸಹ ಕಾರ್ಯಗತವಾಗಲಿಲ್ಲ.

1983 ರಲ್ಲಿ ರಾಜ್ಯದ ನೀರಾವರಿ ಮತ್ತು ಲೋಕೋಪಯೋಗಿ ಸಚಿವರಾಗಿದ್ದ ದೇವೇಗೌಡರು ಹಾಗೂ ಸ್ಥಳೀಯ ಶಾಸಕರಾಗಿದ್ದ ಎಂ.ವರದೇಗೌಡರು ಈ ನೀರಾವರಿ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. 1985ರಲ್ಲಿ ರಾಮಕಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ, ನೀರಾವರಿ ಮತ್ತು ಲೋಕೋಪಯೋಗಿ ಸಚಿವರಾಗಿದ್ದ ಎಚ್‌.ಡಿ.ದೇವೇಗೌಡರು ಇಗ್ಗಲೂರಿನ ಬಳಿ ಬ್ರಿಡ್ಜ್‌ ಕಂ ಬ್ಯಾರೆ​ಜ್‌ ಯೋಜನೆ ರೂಪಿಸಿ 1986ರ ಡಿ.23ರಂದು 10.75 ಕೋಟಿ ರು. ಅನುದಾನ ನೀಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top