ಮನೋರಂಜನೆ

ಬಿಗ್‍ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆಡಂ ಪಾಷಾ- ಅಂತದೇನಾಯ್ತು?

ಹಿಂದಿನ ಸೀಸನ್ನುಗಳಿಗೆ ಹೋಲಿಸಿದರೆ 6ನೇ ಸೀಸನ್ನಿನ ಬಿಗ್ ಬಾಸ್ ಷೋ ಅದ್ಯಾಕೋ ಮಂಕಾದಂತೆ ಕಾಣುತ್ತಿದೆ. ಅತೀ ಹೆಚ್ಚು ಕಾಮನ್ ಮ್ಯಾನ್ ಸ್ಪರ್ಧಿಗಳು ಎಂಟ್ರಿ ಕೊಟ್ಟಿರುವುದರಿಂದಲೋ ಏನೋ ಮುಖ ಪರಿಚಯವಿಲ್ಲದ ಕಾರಣ ಪ್ರೇಕ್ಷಕರು ಕಾರ್ಯಕ್ರಮದ ಮೇಲೆ ಟೂ ಬಿಟ್ಟಿದ್ದಾರೆ.. ಈ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಜನರಿಗೆ ತಕರಾರಿದೆ, ಇದು ನಮ್ಮ ಕನ್ನಡ ನೆಲಕ್ಕೆ ಒಗ್ಗದ ಕಾನ್ಸೆಪ್ಟ್ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿರುತ್ತದೆ. ಇಂಥ ನೂರೆಂಟು ತಾತ್ಸಾರದ ಮಾತುಗಳ ನಡುವೆಯೂ ಬರೋಬ್ಬರಿ ಐದು ಸೀಸನ್ನುಗಳನ್ನು ಮುಗಿಸಿರುವ ಬಿಗ್ ಬಾಸ್ ಈ ಭಾರಿಯೂ ಪ್ರೇಕ್ಷಕರನ್ನ ರಂಜಿಸೋ ಕಾಯಕದಲ್ಲಿ ಮಗ್ನನಾಗಿದ್ದಾನೆ.

ಸಲಿಂಗಿ ಆಡಂ ಪಾಶಾ ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡುವ ಅವಕಾಶವನ್ನು ಪಡೆದು ಉತ್ತಮವಾಗಿ ಮನರಂಜನೆ ನೀಡುತ್ತಿದ್ದಾರೆ.. ಕಳೆದು ಮೂರು ವಾರಗಳಿಂದಲೂ ಒಮ್ಮೆಯೂ ಭಾವುಕರಾಗದ ಆಡಂ ಪಾಶಾ ಶುಕ್ರವಾರ ಪ್ರಸಾರವಾದ ಸಂಚಿಕೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಈ ವಾರ ಬಿಗ್‍ಬಾಸ್ ಮನೆಯಲ್ಲಿ ದೀಪಾವಳಿ ವಿಶೇಷ ಟಾಸ್ಕ್ ನೀಡಲಾಗಿತ್ತು… ಟಾಸ್ಕ್ ಮಾಡಿಯೇ ಹೊಸ ಬಟ್ಟೆ, ಪಟಾಕಿ, ಹಬ್ಬದೂಟವನ್ನು ಪಡೆದುಕೊಂಡ ಕೊನೆಯಲ್ಲಿ ಸ್ಪರ್ಧಿಗಳಿಗೆ ವಿಶೇಷ ಸಂದೇಶಗಳು ಬಂದಿದ್ದವು. ಈ ಸಂದೇಶ ನನಗೆ ಬಂದಿದೆ ಅಂತ ಊಹಿಸಿ ಸರಿಯಾಗಿದ್ದವರಿಗೆ ಅವರ ಪ್ರೀತಿ ಪಾತ್ರರಿಂದ ಬಂದಿರುವ ಉಡೂಗೊರೆಯನ್ನ ಸಹ ಪಡೆದುಕೊಂಡರು.

ಆಡಂ ಕಣ್ಣೀರಿಗೆ ಕಾರಣವೇನು?
ಎಲ್ಲ ಅಭ್ಯರ್ಥಿಗಳಿಗೆ ಸಂದೇಶ ಕಳುಹಿಸಲಾಗಿತ್ತು. ಅದ್ರೆ ಆಡಂ ಪಾಶಾರಿಗೆ ಯಾರು ಕೂಡ ಉಡುಗೊರೆಯನ್ನಾಗಲಿ ಅಥವಾ ಸಂದೇಶವನ್ನಾಗಲೀ ಕಳುಹಿಸಿರಲಿಲ್ಲ. ಹೀಗಾಗಿ ಎಲ್ಲ ಸ್ಪರ್ಧಿಗಳು ತಮ್ಮ ಕುಟುಂಬಸ್ಥರು ನೀಡಿದ ಗಿಫ್ಟ್ ನಿಂದ ಸಂತೋಷದಲ್ಲಿದ್ದ ಕ್ಷಣದಲ್ಲಿ ಆಡಂ ಒಂದು ಕ್ಷಣ ಭಾವುಕರಾದರು.. ಲಿವಿಂಗ್ ಏರಿಯಾದಿಂದ ಎದ್ದು ಮೇಕಪ್ ರೂಮ್ ನಲ್ಲಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು..

“ಬಿಗ್‍ಬಾಸ್ ಮನೆಗೆ ಬರುವಾಗ ಎಮೆರ್ಜೆನ್ಸಿ ನಂಬರ್ ಕೊಡಿ ಅಂದಾಗ ನಾನು ನನ್ನ ಅಕ್ಕನ ನಂಬರ್ ಕೊಟ್ಟು ಬಂದಿದ್ದೆ. ಆದರೆ ಈವರೆಗೂ ನನ್ನನ್ನು ಕುಟುಂಬಸ್ಥರು ನನ್ನನ್ನು ಒಪ್ಪಿಕೊಂಡಿಲ್ಲ. ಎಲ್ಲರಿಗೂ ಗಿಫ್ಟ್ ಸಿಗುತ್ತಿರುವಾಗ ನನಗೆ ಸಣ್ಣ ಸಂಕಟ ಆಗ್ತಿತ್ತು. ನಾನು ಎಂದೂ ಕೂಡ ಹೊರಗಡೆ ಇರುವ ನನ್ನ ಕುಟುಂಬದ ಬಗ್ಗೆ ಮಾತಾಡಿಲ್ಲ” ಎಂದು ಆಡಮ್ ಎಲ್ಲರ ಮುಂದೆ ಕಣ್ಣೀರಿಟ್ಟು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top