ತಿಂಡಿ ತೀರ್ಥ

ಮಲೆನಾಡು ಮೂಲದ ಸಾಂಪ್ರದಾಯಿಕ ಸಿಹಿತಿಂಡಿ ತೊಡದೇವು ಮಾಡುವ ವಿಧಾನ

ಮಲೆನಾಡು ಮೂಲದ ಸಾಂಪ್ರದಾಯಿಕ ಸಿಹಿತಿಂಡಿ ತೊಡದೇವು ಮಾಡುವ ವಿಧಾನ

ಬೇಕಾಗುವ ಸಾಮಗ್ರಿ:ಅಕ್ಕಿ,ಅರಿಶಿನ,ಬೆಲ್ಲ,ಶೇಂಗಾ ಎಣ್ಣೆ,ತೊಡದೇವು ಎರೆಯುವ ಮಡಿಕೆ,ಅಡಿಕೆ ಹಾಳೆಯ ತುಂಡು.

 

Image result for todadevu

 

 

ತೊಡದೇವು  ಮಾಡುವ ವಿಧಾನ:ಮೊದಲಿನ ದಿನ ರಾತ್ರಿಯೇ ಅಕ್ಕಿಯನ್ನು ನೆನೆಸಿಟ್ಟುಕೊಳ್ಳಿ. ಬೆಳಗ್ಗೆ ಅದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಮುಕ್ಕಾಲು ಭಾಗದಷ್ಟು ಅಕ್ಕಿ ಹಿಟ್ಟು , ಸ್ವಲ್ಪ ಅರಿಶಿನ ಹಾಕಿ ದೋಸೆ ಹಿಟ್ಟಿನಂತೆ ಕದಡಿಕೊಳ್ಳಿ.ಸೌದೆ ಬೆಂಕಿಯ ಮೇಲೆ ಮಗಚಿ ಇಟ್ಟ ಮಡಿಕೆಯ ಮೇಲೆ ಶೇಂಗಾ ಎಣ್ಣೆಯಿಂದ ಸವರಬೇಕು. ಮಡಿಕೆ ಕಾದ ನಂತರ ತೆಳ್ಳನೆಯ ಹಿಟ್ಟನ್ನು ಒಂದು ಬಟ್ಟಲಿಗೆ ಹಾಕಿಕೊಂಡು ಸಪೂರಾದ ಪಂಚೆಯನ್ನು ಒಂದು ಕೋಲಿಗೆ ಕಟ್ಟಿ ಅದರಲ್ಲಿ ಹಿಟ್ಟನ್ನು ಅದ್ದಿ ಮಡಿಕೆಯ ಮೇಲೆ ಎರೆಯಬೇಕು.

 

Image result for todedevu sweet

 

 

ಅನಂತರ ಗರಿಗರಿಯಾದ ತೊಡೆದೇವನ್ನು ನಿಧಾನವಾಗಿ ದೋಸೆಯಂತೆ ಒಣಗಿದ ಅಡಿಕೆ ಹಾಳೆಯನ್ನು ಪುಟ್ಟದ್ದಾಗಿ ಕತ್ತರಿಸಿಕೊಂಡು ಅದರಲ್ಲಿ ತೆಗೆಯಬೇಕು. ಅನಂತರ ತ್ರಿಕೋನಾಕಾರದಲ್ಲಿ ಮಡಿಚಿಟ್ಟು, ತುಪ್ಪ ಹಾಕಿ ಸವಿಯಬಹುದು.ಗರಿಗರಿ ತೊಡೆದೇವಿಗೆ ತುಪ್ಪ ಅಥವಾ ಹಾಲನ್ನು ಹಾಕಿಕೊಂಡು ತಿನ್ನುವುದರ ಮಜಾವೇ ಬೇರೆ.ಮಲೆನಾಡು ಮೂಲದ ಸಾಂಪ್ರದಾಯಿಕ ಸಿಹಿತಿಂಡಿ ಇದು. ಅದರಲ್ಲೂ ಹವ್ಯಕ ಸಮುದಾಯದಲ್ಲೇ ಹೆಚ್ಚಾಗಿ ತಯಾರಾಗುವ ತಿಂಡಿ ಇದು. ಮಲೆನಾಡಿಗರ ಮನೆಮನೆಗಳಲ್ಲಿ ಈ ಸಾಂಪ್ರದಾಯಿಕ ತಿಂಡಿಗೆ ಪ್ರಮುಖ ಸ್ಥಾನವಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top