fbpx
ದೇವರು

ಕಾರ್ತಿಕ ಮಾಸದಲ್ಲಿ ಶಿವನನ್ನು ಈ 4 ಪವಿತ್ರ ವಸ್ತುಗಳಿಂದ ಪೂಜಿಸಿದರೆ ನೀವು ನಿಮ್ಮ ಎಲ್ಲಾ ಕಷ್ಟಗಳಿಂದ ಮುಕ್ತಿ ಪಡೆದು ಸುಖಕರ ಜೀವನ ನಿಮ್ಮದಾಗುತ್ತೆ

ಶಿವನನ್ನು ಕಾರ್ತಿಕ ಮಾಸದಲ್ಲಿ ಈ ನಾಲ್ಕು ಪವಿತ್ರ ವಸ್ತುಗಳಿಂದ ಪೂಜಿಸಿದರೆ ಎಲ್ಲಾ ಕಷ್ಟಗಳಿಂದ ಮುಕ್ತಿ ಪಡೆದು ಸುಖ ಜೀವನ ಪ್ರಾಪ್ತಿಯಾಗುತ್ತದೆ.
ತ್ರಿಮೂರ್ತಿ ದೇವತೆಗಳಲ್ಲಿ ಶಿವನು ಮುಖ್ಯವಾದ ದೇವರು. ಶಿವನನ್ನು ಈ ನಾಲ್ಕು ಪವಿತ್ರ ವಸ್ತುಗಳಿಂದ ಪೂಜಿಸುವುದರಿಂದ ಶಿವನ ಅನುಗ್ರಹವನ್ನು ಸುಲಭವಾಗಿ ಪಡೆಯಬಹುದು.ಆದ್ದರಿಂದ ಶಿವನಿಗೆ ಪೂಜಿಸುವಾಗ ಈ ಕೆಲಸಗಳನ್ನು ಮಾಡಿದರೆ ಸಾಕು ಶಿವನ ಅನುಗ್ರಹ ತಪ್ಪದೇ ದೊರೆಯುತ್ತದೆ. ಶಿವನನ್ನು ಪೂಜಿಸುವ ಮೊದಲು ತಪ್ಪದೇ ನೀವು ಹಣೆಗೆ ವಿಭೂತಿಯನ್ನು ಖಚಿತವಾಗಿ ಧರಿಸಲೇಬೇಕು.ನಾವು ಮಾಡಿದ ಪಾಪಗಳು ಭಸ್ಮ ಆಗಬೇಕೆಂದು ಶಿವನನ್ನು ಕೋರಿ ಕೊಳ್ಳಲು ನಾವು ವಿಭೂತಿಯನ್ನು ಧರಿಸಬೇಕು. ವಿಭೂತಿಯನ್ನು ಹಣೆಗೆ ಧರಿಸಿಕೊಂಡು ಶಿವನ ಪೂಜೆ ಮಾಡಿದರೆ ಪಾಪಗಳೆಲ್ಲಾ ತೊಲಗಿ ಹೋಗಿ ಮೋಕ್ಷವನ್ನು ಪಡೆಯುವ ಅವಕಾಶಗಳು ಹೆಚ್ಚಾಗಿ ಲಭಿಸುತ್ತವೆ.

 

 

 

ಶಿವನನ್ನು ಪೂಜಿಸುವಾಗ ಕುತ್ತಿಗೆಯಲ್ಲಿ ರುದ್ರಾಕ್ಷಿ ಮಾಲೆಯನ್ನು ಧರಿಸಿಕೊಂಡು ಪೂಜೆ ಮಾಡಿದರೆ ಒಳ್ಳೆಯದು. ರುದ್ರಾಕ್ಷಿ ಮಾಲೆಯು ಸ್ವಯಂ ಶಿವನ ಸ್ವರೂಪ ಎಂದು ಭಾವಿಸಲಾಗಿದೆ.ನಾವು ಶಿವನ ಪೂಜೆ ಮಾಡುವಾಗ ತಪ್ಪದೆ ರುದ್ರಾಕ್ಷಿ ಮಾಲೆಯನ್ನು ಧರಿಸಿಕೊಂಡು ಪೂಜೆ ಮಾಡುವುದರಿಂದ ನಾವು ಯಾವ ಕೆಲಸ ಮಾಡಿದರೂ ಅದು ಸ್ವಯಂ ಶಿವನಿಗೆ ಸೇವೆ ಮಾಡಿದ ಹಾಗೆ ಪರಿಗಣನೆಗೆ ಬರುತ್ತದೆ.ಇದರಿಂದ ನಾವು ಸುಲಭವಾಗಿ ಶಿವನನ್ನು ಪ್ರಸನ್ನ ಮಾಡಿಕೊಳ್ಳಬಹುದು. ಶಿವನಿಗೆ ಪೂಜೆ ಮಾಡುವಾಗ ತಪ್ಪದೆ ಬಿಲ್ವ ಪತ್ರೆ ಇರಲೇಬೇಕು.ಶಿವನಿಗೆ ಪೂಜೆ ಮಾಡುವಾಗ ಕೈಯಲ್ಲಿ ಬಿಲ್ವ ಪತ್ರೆಯನ್ನು ಹಿಡಿದುಕೊಂಡರೆ ಪಾಪ ಕ್ಷಮಾಪಣೆಯ ಆಗುತ್ತದೆ ಎನ್ನುವುದು ಶಿವನಿಗೆ ತುಂಬಾ ಇಷ್ಟವಾದ ವಸ್ತುಗಳಲ್ಲಿ ಒಂದು.ಶಿವನ ಜಪ ಮಾಡುವುದು, ಶಿವನ ಪೂಜೆ ಮಾಡುವಾಗ ಶಿವನ ಪಂಚಾಕ್ಷರಿ ಮಂತ್ರವಾದ “ ಓಂ ನಮಃ ಶಿವಾಯ” ಈ ಮಂತ್ರವನ್ನು ಜಪಿಸಬೇಕು ಶಿವನಿಗೆ ಅಭಿಷೇಕ ಮಾಡುವಾಗಲೂ ಸಹ ಶಿವ ಪಂಚಾಕ್ಷರಿ ಮಂತ್ರವನ್ನು ಹೇಳಬೇಕು.

ಅಭಿಷೇಕ ಮಾಡುತ್ತಾ ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸುತ್ತಾ ಇದ್ದರೆ, ಶಬ್ದ ಕಂಪನದಿಂದ ನಾವು ಮಾಡುವ ಪೂಜೆಗೆ ಶಕ್ತಿ ಹೆಚ್ಚಾಗಿ ಬರುತ್ತದೆ.ಆದ್ದರಿಂದ ಅಭಿಷೇಕದ ಸಮಯದಲ್ಲಿ ಶಿವನ ಜಪ ಮಾಡಿದರೆ ಶಿವನು ಪ್ರಸನ್ನನಾಗುತ್ತಾನೆ. ಹಾಗೆಯೇ ದೋಷಗಳು ಸಹ ದೂರವಾಗುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top