fbpx
ಅರೋಗ್ಯ

ದೇಹದಲ್ಲಿ ಉಷ್ಣ ಹೆಚ್ಚಾಗಿ ಉಷ್ಣ ಗುಳ್ಳೆ , ಕಡು ಹಳದಿ ಮೂತ್ರ ಮತ್ತು ಮೂತ್ರ ಕಟ್ಟೋ ಸಮಸ್ಯೆಯಿಂದ ಬಳಲುತ್ತಿದ್ರೆ ಕಸ್ತೂರಿ ಅರಿಶಿನ ಬಳಸಿ ಈ ಪರಿಹಾರ ಮಾಡ್ಕೊಂಡ್ರೆ ಥಟ್ ಅಂತ ಸರಿ ಹೋಗುತ್ತೆ .

ನಮ್ಮ ಬದುಕಿಗೆ ಉಷ್ಣ ಎಷ್ಟು ಮುಖ್ಯ ಎಂಬುದು ಇದರಿಂದ ಅರಿವಾಗುತ್ತವೆ . ಅಡುಗೆ ಮಾಡಲೂಶಾಖ ಬೇಕು . ಬೆಚ್ಚಗಿದ್ದಾಗ ಬಹಳ ಹಿತ ಹಾಗೂ ನೆಮ್ಮದಿಯಾಗಿರುತ್ತದೆ. ಚಳಿಗಾಲದಲ್ಲಿ ಒಲೆಯ ಮುಂದೆ ಕುಳಿತು ಅಥವಾ ದಪ್ಪ ಕಂಬಳಿ ಹೊದ್ದು ಬೆಚ್ಚಗಿರುವುದು ಅತ್ಯಂತ ಮುದ ನೀಡುತ್ತದಲ್ಲವೆ? ಬೆಂಕಿ ಸುಡಬಲ್ಲದು ಹಾಗೂ ಕೊಲ್ಲಬಲ್ಲದು . ಅದೇ ಬೆಂಕಿ ಅನ್ನವನ್ನೂ ಬೇಯಿಸುತ್ತದೆ . ಶೀತದಿಂದ ಮೈ ಬಿರಿಯುತ್ತದೆ . ಶವದ ಮೈ ಶೀತ . ಆದರೆ ,ಆದೇ ಐಸ್-ಕ್ರಿಮ್ ತಂಪು ಪಾನೀಯ ಮುಂತಾದ ರೂಪಗಳಲ್ಲಿ ಶೀತ ಹಿತಕರವಾಗಿರಬಹುದು . ಹವಾನಿಯಂತ್ರಣ ಕೊಠಡಿಯಲ್ಲಿನ ತಂಪು ಆಹ್ಲಾದಕರ . ಮನುಷ್ಯನ ದೇಹದ ಸಾಮಾನ್ಯ ಚಟುವಟಿಕೆಗಳಿಗೆ ಉಷ್ಣ ಅವಶ್ಯಕ ಉಷ್ಣವೇ ಜೀವನದ ಮೂಲ .ಈ ಸತ್ಯದ ಅರಿವು ಬಹಳ ಹಿಂದೆಯೇ ಉಂಟಾಗಿತ್ತು . ಊಟ ,ಊಸಿರಟ , ಅಷ್ಟೇ ಏಕೆ ಸಂತಾನೋತ್ಪತ್ತಿಯಲ್ಲಿಯೂ ಉಷ್ಣದ ಪಾತ್ರ ತೋರಿಬರುತ್ತದೆ .

 

 

 

ಒಂದು ವೇಳೆ ಈ ಉಷ್ಣ ಜಾಸ್ತಿ ಆದ್ರೆ ?

ಉಷ್ಣ ಹೆಚ್ಚಾದರೆ ಉಷ್ಣ ಗುಳ್ಳೆ ಎಂದರೆ ಚರ್ಮದ ಮೇಲೆ ದೊಡ್ಡದಾಗಿ ಹರುಡುವಂತಹ ಕೀವು ತುಂಬಿರುವ ಗುಳ್ಳೆಯಾಗಿದೆ. ಮೊದಲು ಸಣ್ಣ ಗುಳ್ಳೆಯಂತೆ ಬಂದು ದಿನ ದಿನಾ ಹೋದಂತೆ ಕೀವು ತುಂಬಿ ದೊಡ್ಡದಾಗುತ್ತದೆ. ಇದು ಸೋಂಕಿನಿಂದ ಹರಡುವಂತಹ ರೋಗವಾಗಿದೆ.ಅಷ್ಟೇ ಅಲ್ಲದೆ ಮೂತ್ರ ಹೋಗಲು ಕಷ್ಟವಾಗಿ ಹೋಗುತ್ತದೆ , ಒಮ್ಮೆಮ್ಮೆ ಹೊಟ್ಟೆ ನೋವು ಕಾಣಿಸಿಕೊಂಡರೆ ನರಕ ಯಾತನೆಯನ್ನೇ ಅನುಭವಿಸಬೇಕಾಗುತ್ತದೆ .ಮುಖದ ಮೇಲೆ ಅನವಶ್ಯಕ ಗುಳ್ಳೆಗಳು ಕಾಣ ತೊಡಗುತ್ತದೆ .ಮೂತ್ರ ಕಡು ಹಳದಿ ಬಣ್ಣಕ್ಕೆ ತಿರುಗಿ , ಹೆಚ್ಚಾಗಿ ಮೂತ್ರ ಹೊರಗಡೆ ಬಾರದೆ ಒದ್ದಾಡಬೇಕಾಗುತ್ತದೆ .

ಈ ಸಮಸ್ಯೆಗೆ ಆಯುರ್ವೇದದ ಪರಿಹಾರಗಳು ಹೀಗಿವೆ:ಕಸ್ತೂರಿ ಅರಿಶಿನದ ಕೊಂಬನ್ನು ಸ್ವಲ್ಪ ನೀರನ್ನು ಹಾಕಿ ಕಲ್ಲಿನ ಮೇಲೆ ತೇಯಬೇಕು .

 

 

 

ಹೀಗೆ ತೇಯ್ದು ಅರ್ಧ ಚಮಚ ಅರಿಶಿನ ದೊರೆತ ಮೇಲೆ ಒಂದು ಲೋಟಕ್ಕೆ ಈ ಅರಿಶಿನವನ್ನು ಹಾಕಿಕೊಂಡು ಅರ್ಧ ಭಾಗ ನೀರು ತುಂಬಿಸಿನಂತರ ಈ ಮಿಶ್ರಣಕ್ಕೆ ಒಂದು ಚಮಚ ಪುಡಿ ಬೆಲ್ಲವನ್ನು ಬೆರೆಸಿ ಚೆನ್ನಾಗಿ ಕಲಸಿ .ಹತ್ತು ನಿಮಿಷ ಈ ಮಿಶ್ರಣವನ್ನು ತಟ್ಟೆಯ ಸಹಾಯದಿಂದ ಮುಚ್ಚಿಟ್ಟು ಹಾಗೆಯೇ ಬಿಡಬೇಕು .ಇದಾದ ನಂತರ ಎರಡು ಹನಿ ಜೇನು ತುಪ್ಪ ಬೆರೆಸಿ ಚೆನ್ನಾಗಿ ಕಲಸಿ ಕುಡಿಯಿರಿ ಹೀಗೆ ದಿನಕ್ಕೆ ಬೆಳಗ್ಗೆ ಹಾಗು ಸಂಜೆ ಈ ಮಿಶ್ರಣ ಸೇವಿಸುತ್ತಾ ಬಂದರೆ ಉಷ್ಣ ಸಮಸ್ಯೆ ದೂರವಾಗುತ್ತದೆ .ಅಷ್ಟೇ ಅಲ್ಲದೆ ನರಗಳ ಊತ , ಮೂಗಿನಲ್ಲಿ ರಕ್ತ ಸೋರುವ ಸಮಸ್ಯೆಗೂ ಇದು ಪರಿಣಾಮಕಾರಿ ಮನೆ ಮದ್ದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top