ಮನೋರಂಜನೆ

ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು #MeToo ಸ್ಫೋಟ- ತಮಗಾದ ಅನುಭವ ಬಿಚ್ಚಿಟ್ಟ ಹಿರಿಯ ಕಲಾವಿದೆ ಬಿ.ಜಯಶ್ರೀ

ಸಿನಿಮಾ ಹೀರೋಯಿನ್ನುಗಳಿಗೆ ಥರಥರದ ಕಾಟ ಕೊಡುವ ಪ್ರವೃತ್ತಿಯ ಸರಣಿಗಳು ಈಗ ದೇಶದೆಲ್ಲೆಡೆ ಬಿಚ್ಚಿಕೊಳ್ಳುತ್ತಿವೆ, ಇತ್ತೀಚಿಗೆ ಬಾಲಿವುಡ್ ನಟಿ ತನುಶ್ರೀ ದತ್ತ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದೇ ತಡ ಮೀಟೂ ಎಂಬ ಅಭಿಯಾನವೊಂದಕ್ಕೆ ಚಾಲನೆ ನೀಡಿದೆ. ಇದರ ಮೂಲಕ ಚಿತ್ರರಂಗದ ನಟಿಯರು ತಾವೇ ಕಂಡುಂಡ ನೋವುಗಳನ್ನ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಲಾರಂಭಿಸಿದ್ದಾರೆ.

ಬಾಲಿವುಡ್‌ನಲ್ಲಿ ಹುಟ್ಟಿಕೊಂಡ ಈ ಮೀಟೂ ಅಭಿಯಾನ ಸ್ಯಾಂಡಲ್‌ವುಡ್‌ನತ್ತಲೂ ಬಂದಿದ್ದು ಕನ್ನಡದ ನಟಿಯರನೇಕರು ಕೂಡ ತಮಗಾದ ಲೈಂಗಿಕ ಕಿರುಕುಳಗಳ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ನೊಂದವರ ಬೆನ್ನಿಗೆ ನಿಂತಿದ್ದಾರೆ.. ಇತ್ತೀಚಿಗಷ್ಟೇ ನಟಿಯಾರಾದ ಶೃತಿ ಹರಿಹರನ್‌, ಸಂಜನಾ, ಮತ್ತು ಸಂಗೀತ ಭಟ್ ಮೀಟೂ ಆಪಾದನೆ ಮಾಡಿದ್ದರು.. ಕೆಲದಿನಗಳಿಂದ ತಣ್ಣಗಿದ್ದ ಮೀಟೂ ವಿವಾದ ಇದೀಗ ಮತ್ತೆ ಸ್ಫೋಟಗೊಂಡಿದ್ದು ಹಿರಿಯ ಕಲಾವಿದೆ ಬಿ.ಜಯಶ್ರೀ ತಮಗೂ ಈ ಅನುಭವ ಆಗಿದೆ ಎಂದು ಹೇಳಿದ್ದಾರೆ.

ತುಮಕೂರು ನಗರದ ರಾಜರಾಜೇಶ್ವರಿ ನೃತ್ಯ ಕಲಾಮಂದಿರದಲ್ಲಿ ಹಿರಿಯ ರಂಗಕರ್ಮಿ ರಾಮನ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನನಗೂ ಈ ಮೀಟೂ ಅನುಭವವಾಗಿದೆ. ಅದು ನನಗೆ ಮಾತ್ರ ಗೊತ್ತು.. ಈಗ ಈ ಬಗ್ಗೆ ಹೇಳಿಕೊಳ್ಳುತ್ತಿದ್ದೇನೆ. ನನಗೆ ನ್ಯಾಯ ಸಿಗಲಿ ಎನ್ನುವ ಉದ್ದೇಶದಿಂದ ಅಲ್ಲಾ. ನನಗಾದ ಅನ್ಯಾಯ ಇನ್ನೊಬ್ಬರಿಗೆ ಆಗದಿರಲಿ, ನನ್ನಿಂದ ಇನ್ನೊಬ್ಬರು ಎಚ್ಚೆತ್ತುಕೊಳ್ಳಲಿ ಅಂತ ಹೇಳುತ್ತೇನೆ. ಕೆಲವೊಮ್ಮೆ ನನ್ನ ಖಾಸಗಿ‌ ವಿಚಾರ ಯಾಕೆ ಹೇಳಲಿ ಅಂದುಕೊಳ್ಳುತ್ತೇನೆ. ” ಎಂದು ಈ ಮಾತನ್ನು ಹೇಳಿದ್ದಾಗಿ ಹೇಳಿದ್ದಾರೆ.

ನಮಗಾಗಿರುವ ನೋವನ್ನು ಹೇಳಿಕೊಂಡರೆ ಯಾರೂ ನಂಬುವುದಿಲ್ಲ.. ನಮ್ಮ ನೋವಿನ ಬಗ್ಗೆ ನಮಗೆ ಮತ್ತು ಕಿರುಕುಳ ನೀಡಿದವರಿಗೆ ಮಾತ್ರ ಗೊತ್ತಿರುತ್ತದೆ ಹೀಗಿದ್ದರೂ ಜನರೂ ಬೇಕಾದಂತೆ ಟೀಕಿಸುತ್ತಾರೆ. ಜನ್ಮ ಕೊಟ್ಟ ಮಗುವಿನ ತಂದೆ ಯಾರೂ ಅಂತ ತಾಯಿಗೆ ಮಾತ್ರ ಗೊತ್ತಿರುತ್ತದೆ. ತಂದೆಗೆ ಗೊತ್ತಾಗಲ್ಲ. ಹಾಗಾಗಿ ಅವರವರ ನೋವುಗಳು ಅವರವರಿಗೆ ಮಾತ್ರ ಗೊತ್ತಾಗುತ್ತದೆ,. ನಾವು ನೋವು ಹೇಳಿಕೊಂಡರೂ ಜನ ನಮಗೆ ಎಷ್ಟು ಬೆಂಬಲ ನೀಡುತ್ತಾರೆ ಅನ್ನೋದು ಮುಖ್ಯವಾಗತ್ತದೆ.” ಎಂದು ಜಯಶ್ರೀ ಮಾತನಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top