fbpx
ಸಮಾಚಾರ

ಅಂತರಿಕ್ಷದಿಂದಲೂ ಸ್ಪಷ್ಟವಾಗಿ ಕಾಣುತ್ತಿದೆ ಉಕ್ಕಿನ ಮನುಷ್ಯನ ಗಗನಚುಂಬಿ ಪ್ರತಿಮೆ !

ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆ ಎಂದು ಖ್ಯಾತಿ ಪಡೆದ 182 ಮೀಟರ್ ಎತ್ತರದ ಸರ್ದಾರ್‌ ವಲ್ಲಭಭಾಯ್ ಪಟೇಲ್ ರವರ ಪ್ರತಿಮೆ ಗುಜರಾತ್‌ನ ನರ್ಮದಾ ಜಿಲ್ಲೆಯ ಕೆವಾಡಿಯ ಬಳಿ ನಿರ್ಮಿಸಲಾಗಿದ್ದು ಕೆಳೆದ ಅಕ್ಟೋಬರ್ ತಿಂಗಳಿನಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿಗಳ ಅಧ್ಯಕ್ಶತೆಯಲ್ಲಿ ಉದ್ಘಾಟನೆ ಗೊಂಡಿತ್ತು ಎಂಬ ವಿಚಾರ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಇದೀಗ ಈ ಗಗನಚುಂಬಿ ಏಕತಾ ಪ್ರತಿಮೆಯನ್ನು ಅಂತರಿಕ್ಷದಿಂದ ಸಹ ನೋಡಬಹುದು ಎಂಬ ವಿಚಾರ ಪ್ರಪಂಚಾದ್ಯಂತ ಸಂಚಲನವನ್ನು ಸೃಷ್ಟಿ ಮಾಡಿದೆ.

ಸರ್ದಾರ್ ಪಟೇಲ್ ರವರ ಈ ಪ್ರತಿಮೆಯ ಚಿತ್ರವನ್ನು, ಬಾನಂಗಳದಿಂದ ಸ್ಕೈ‌ಸ್ಯಾಟ್ (ನವೆಂಬರ್ 15ರಂದು ) ಸೆರೆ ಹಿಡಿದಿದ್ದು . ಬರೋಬ್ಬರಿ 597 ಅಡಿ ಎತ್ತರದಿಂದ ಕ್ಲಿಕ್ಕಿಸಲಾಗಿರುವ ಉಕ್ಕಿನ ಮನುಷ್ಯನ ಪ್ರತಿಮೆಯ ಚಿತ್ರಪಟವನ್ನು ‘ಪ್ಲಾನೆಟ್’ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

At 597 feet, India’s Statue of Unity is now the tallest statue in the world and clearly seen from space! Oblique SkySat image captured today, November 15, 2018. pic.twitter.com/FkpVoHJKjw

— Planet (@planetlabs) November 15, 2018

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top