ಸಮಾಚಾರ

ಪ್ರಧಾನಿ ಮೇಲೆ ಅಭಿಮಾನ- ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೋದಿಗೆ ಮತ ನೀಡುವಂತೆ ಮನವಿ.

2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಮತ ನೀಡುವಂತೆ ಆಹ್ವಾನ ಪತ್ರಿಕೆಯೊಂದು ಮುದ್ರಣಗೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಪ್ರಧಾನಿ ಮೋದಿಗೆ ಮತ ಹಾಕುವುದೇ ಉಡುಗೊರೆ” ಎಂದು ನರೇಂದ್ರ ಮೋದಿ ಅವರ ಫೋಟೋ ಸಮೇತ ಮದುವೆ ಆಮಂತ್ರಣದಲ್ಲಿ ಮುದ್ರಿಸಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಮಂಗಳೂರು ಮೂಲದ ಪ್ರವೀಣ್ ಹಾಗೂ ಹೇಮಲತಾ ಎಂಬವರು ತಮ್ಮ ಮದುವೆ ಆಮಂತ್ರಣದಲ್ಲಿ ಮೋದಿ ಫೋಟೋ ಹಾಕಿದ್ದು, ಈ ಮೂಲಕ ಮದುವೆಗೆ ಆಗಮಿಸುವವರಿಗೆ ವಿಶೇಷ ಮನವಿ ಮಾಡಿದ್ದಾರೆ. ಆಮಂತ್ರಣದ ಕೆಳಗಡೆ “ನಿಮ್ಮ ಸಂತಸದ ನಗುಮುಖವೇ ಆಶೀರ್ವಾದ, 2019ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಬೆಂಬಲಿಸಿ, ಹಾಕುವ ಮತವೇ ಉಡುಗೊರೆ” ಎಂದು ಮುದ್ರಿಸಲಾಗಿದೆ!

ಪ್ರಧಾನಿ ಮೋದಿ ಅವರ ಸಾಧನೆಯ ಬಗ್ಗೆಯೂ ವಿವರಣೆ ನೀಡುರುವ ಅವರು ಆಮಂತ್ರಣ ಪತ್ರಿಕೆಯ ಹಿಂಭಾಗದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮೋದಿ ಸರ್ಕಾರದ ಪ್ರಮುಖ 29 ಸಾಧನೆಗಳನ್ನು ಪ್ರಸ್ತಾಪ ಮಾಡಿರುವ ಅವರು ಇನ್ನೂ ಹಲವು ಜನೋಪಯೋಗಿ ಯೋಜನೆಗಳಿಂದ ಭಾರತವನ್ನು ವಿಶ್ವಗುರು ಸ್ಥಾನಕ್ಕೇರಿಸಲು ಪ್ರಯತ್ನಿಸುತ್ತಿರುವ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top