ಮನೋರಂಜನೆ

ಪಕ್ಕಾ ಆಯ್ತು ಚಾಲೆಂಜಿಂಗ್ ಸ್ಟಾರ್ ಮತ್ತೊಂದು ಸಿನಿಮಾ- ಸಾಧುಕೋಕಿಲ ನಿರ್ದೇಶನದಲ್ಲಿ ದರ್ಶನ್ ಆಕ್ಟಿಂಗ್.

ಒಂದು ಸಿನಿಮಾವಿನ್ನೂ ಶೂಟಿಂಗ್ ಹಂತದಲ್ಲಿರುವಾಗಲೇ ಮುಂದಿನ ಚಿತ್ರಗಳ ಬಗ್ಗೆ ಕುತೂಹಲ ಸೃಷ್ಟಿಸೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಶೇಷತೆ. ಸದ್ಯ ಅವರ 50ನೇ ಚಿತ್ರವಾದ ಕುರುಕ್ಷೇತ್ರ ಇನ್ನೂ ತೆರೆಕಂಡಿಲ್ಲ, 51ನೇ ಸಿನಿಮಾವಾದ ಯಜಮಾನ ಚಿತ್ರ ಶೂಟಿಂಗ್ ಹಂತದಲ್ಲಿದೆ ಉಳಿದಂತೆ 52ನೇ ಚಿತ್ರವಾಗಿರುವ ‘ಒಡೆಯರ್’ ಚಿತ್ರ ಮೊನ್ನೆ ತಾನೇ ಶುರುವಾಗಿದೆ. ಅವರ 53ನೇ ಚಿತ್ರ ‘ತರುಣ್ ನಿರ್ದೇಶನ ಚಿತ್ರದ ಶೂಟಿಂಗ್ ಇನ್ನೇನು ಆರಂಭವಾಗಬೇಕಿದೆ. ಜೊತೆಗೆ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಮದಕರಿ ನಾಯಕ ಸಿನಿಮಾ ಜನವರಿಯಲ್ಲಿ ಶುರುವಾಗಲಿದೆ ಹೀಗಿರುವಾಗ ದರ್ಶನ್ ವಲಯದಿಂದ ಮತ್ತೊಂದು ಸುದ್ದಿ ಕೇಳಿಬಂದಿದೆ.

 

 

ದರ್ಶನ್ ಅವರ ಮುಂದಿನ ಚಿತ್ರಕ್ಕೆ ಸಂಗೀತ ನಿರ್ದೇಶಕ, ಹಾಸ್ಯ ಕಲಾವಿದ ಸಾಧು ಕೋಕಿಲಾ ಅವರು ನಿರ್ದೇಶನ ಮಾಡಲಿದ್ದಾರೆ.. ಹಾಗಂತ ಸ್ವತಃ ಸಾಧು ಕೋಕಿಲಾ ಅವರೇ ಹೇಳಿಕೊಂಡಿದ್ದಾರೆ.. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಗಿಲೆ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಹೊರಹಾಕಿರುವ ಸಾಧು ಕೋಕಿಲ ಸದರಿ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಕೂಡ ತಾವೇ ಮಾಡುವುದಾಗಿ ಹೇಳಿಕೊಂಡಿದ್ದಾರೆ.,

ಕೇವಲ ನಿರ್ದೇಶನ ಅಷ್ಟೇ ಅಲ್ಲದೆ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಕೂಡ ಸಾಧುನೇ ಮಾಡಲಿದ್ದಾರಂತೆ. ಈ ಚಿತ್ರದ ಟೈಟಲ್​ ಏನು? ಯಾವಾಗ ಸೆಟ್ ಏರುತ್ತೆ ಎಂಬಿತ್ಯಾದಿ ವಿಚಾರಗಳು ಇನ್ನಷ್ಟೆ ರಿವೀಲ್ ಆಗಬೇಕಿದೆ.. ಅಂದಹಾಗೆ ಈ ಹಿಂದೆ ಅನಾಥರು, ಸುಂಟರಗಾಳಿ, ಮತ್ತು ಶೌರ್ಯ ಸಿನಿಮಾಗಳಲ್ಲಿ ಸಾಧುಕೋಕಿಲ ದರ್ಶನ್ ಅವರಿಗೆ ಆಕ್ಷನ್ ಕಟ್ ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top