fbpx
ದೇವರು

ಪುರಾಣಗಳ ಪ್ರಕಾರ ದೇವರ ಪೂಜೆಗೆ ಕನಕಾಂಬರ ಹೂಗಳನ್ನು ಬಳಸಬಾರದು ಯಾಕೆ ? ಮತ್ತು ಶಾಸ್ತ್ರದ ಪ್ರಕಾರ ಯಾವ ಹೂವುಗಳನ್ನು ಅರ್ಪಿಸಿದರೆ ಏನು ಫಲ ಎಂದು ತಿಳಿದುಕೊಳ್ಳಿ.

ದೇವರಿಗೆ ಭಕ್ತಿ, ಶ್ರದ್ಧೆಯಿಂದ ಒಂದು ಹೂವನ್ನು ಅರ್ಪಿಸಿದರೆ ಸಾಕು, ಭಕ್ತರು ಬೇಡಿದ್ದನ್ನು ಆ ದೇವರು ಕರುಣಿಸುತ್ತಾನೆ. ಶಾಸ್ತ್ರದ ಪ್ರಕಾರ ಕೆಲವು ಹೂವುಗಳಿಂದ ಇಷ್ಟ ದೇವರನ್ನು ಪೂಜಿಸಿದರೆ ಜೀವನದಲ್ಲಿ ಎದುರಾಗುವ ಅಡ್ಡಿಆತಂಕಗಳು ಮತ್ತು ಸಮಸ್ಯೆಗಳು ನಿವಾರಣೆಯಾಗಿ ಅವರು ಸಂತೋಷ ಮತ್ತು ನೆಮ್ಮದಿಯ ಜೀವನ ಸಾಗಿಸುತ್ತಾರೆ.ಅಷ್ಟೇ ಅಲ್ಲದೆ ಅಷ್ಟ ಐಶ್ವರ್ಯಗಳೊಂದಿಗೆ ಅವರ ಮನೆಯೂ ಸಹ ತುಂಬಿ ತುಳುಕುತ್ತಿರುತ್ತದೆ.
ಯಾವ ರೀತಿಯ ಹೂವುಗಳಿಂದ ಪೂಜಿಸಿದರೆ ಯಾವ ರೀತಿಯ ಫಲವು ಸಿಗುವುದು ಎಂದು ತಿಳಿದುಕೊಳ್ಳೋಣ ಬನ್ನಿ .

 

 

 

ಜಾಜಿ ಹೂವು :ಜಾಜಿ ಹೂವುಗಳನ್ನು ದೇವರಿಗೆ ಸಮರ್ಪಿಸಿದ ನಂತರ ಪ್ರಸಾದದ ರೂಪದಲ್ಲಿ ಸ್ವೀಕರಿಸಿದರೆ. ನಮ್ಮ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳು ದೂರವಾಗಿ ಒಳ್ಳೆಯ ಗುಣಗಳು ಮೂಡುತ್ತವೆ. ನಾವು ಮಾಡುವ ಕೆಲಸ ಕಾರ್ಯಗಳಲ್ಲಿ ಎದುರಾಗುವ ಸಮಸ್ಯೆಗಳು ಸಹ ಬಗೆಹರಿಯುತ್ತವೆ.ಸಂಪಿಗೆ ಹೂವು:ಸಂಪಿಗೆ ಹೂವನ್ನು ಸಮರ್ಪಿಸಿ ನಂತರ ಪ್ರಸಾದದ ರೂಪದಲ್ಲಿ ಸ್ವೀಕರಿಸಿದರೆ ಮಾಟ, ಮಂತ್ರ, ಕ್ಷುದ್ರ ವಿದ್ಯೆಗಳು ನಮ್ಮ ಮೇಲೆ ಪ್ರಭಾವ ಬೀರುವುದಿಲ್ಲ. ಶತ್ರುಗಳನ್ನು ಕೂಡ ನಾಶ ಮಾಡಲು ಸಂಪಿಗೆ ಹೂವು ನೆರವಾಗುತ್ತದೆ.ಪಾರಿಜಾತ ಹೂವು:ಪಾರಿಜಾತ ಹೂವುಗಳಿಂದ ದೇವರಿಗೆ ಅರ್ಚನೆ ಮಾಡಿ ಪೂಜಿಸಿದರೆ ಕಾಳಸರ್ಪ ದೋಷಗಳು ನಿವಾರಣೆಯಾಗುವುದಷ್ಟೇ ಅಲ್ಲದೆ ಮನಸ್ಸಿಗೆ ಶಾಂತಿಯೂ ಸಹ ದೊರೆಯುವುದು.ರುದ್ರಾಕ್ಷಿ ಹೂವು:ರುದ್ರಾಕ್ಷಿ ಹೂವುಗಳಿಂದ ದೇವರನ್ನು ಪೂಜಿಸಿದರೆ ಕಷ್ಟಗಳು ಎದುರಾದರೂ ಕೊನೆಯದಾಗಿ ಗೆಲುವು ನಮ್ಮದೇ ಆಗುವುದು.ಮಲ್ಲಿಗೆ ಹೂ:ಮಲ್ಲಿಗೆ ಹೂವುಗಳಿಂದ ಪೂಜಿಸಿದರೆ ಅಧಿಕಾರದಲ್ಲಿರುವವರ ಮನಸ್ತಾಪ ಕಡಿಮೆಯಾಗುತ್ತದೆ .

 

 

 

ಕಮಲದ ಹೂ:ಕಮಲದ ಹೂಗಳಿಂದ ಪೂಜೆ ಮಾಡಿದರೆ ದಾರಿದ್ರ್ಯ, ಬಡತನ ದೂರವಾಗಿ ಶ್ರೀಮಂತರಾಗುತ್ತಾರೆ.ತುಂಬೆ ಹೂವು:ತುಂಬೆ ಹೂವಿನಿಂದ ಭಗವಂತನಾದ ಶಿವನನ್ನು ಪೂಜಿಸಿದರೆ ಭಕ್ತಿ ಹೆಚ್ಚಾಗುವುದು.ಸೂರ್ಯಕಾಂತಿ ಹೂವು:ಸೂರ್ಯಕಾಂತಿ ಹೂವನ್ನು ದೇವರಿಗೆ ಪುನರಾಹುತಿಯಾಗಿ ಕೊಟ್ಟರೆ ಅಷ್ಟ ಐಶ್ವರ್ಯಗಳು ಸಿದ್ಧಿಸುತ್ತವೆ ಎನ್ನುತ್ತವೆ ಪುರಾಣಗಳು.ನಂದಿ ಬಟ್ಟಲು ಹೂವು:ನಂದಿಬಟ್ಟಲು ಹೂವಿಂದ ಶಿವನ ಪೂಜೆ ಮಾಡಿದರೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುವುದು.ಮಾಧವಿ ಪುಷ್ಪ:ಮಾದವಿ ಪುಷ್ಪಗಳಿಂದ ಪೂಜಿಸಿದರೆ ಜ್ಯೋತಿಷಿಯ ಹೇಳಿದ ಮಾತುಗಳು ಅಕ್ಷರಶಃ ಸತ್ಯವಾಗುತ್ತದೆ.ಕುಂಧ ಪುಷ್ಪ:ಕುಂಧ ಪುಷ್ಪದಿಂದ ಪೂಜಿಸಿ ಪ್ರಸಾದ ಸ್ವೀಕರಿಸಿದರೆ ಮುಖದಲ್ಲಿ ತೇಜಸ್ಸು ಮತ್ತು ಕಾಂತಿ ಹೆಚ್ಚಾಗುವುದು.ಕಣಗಿಲೆ ಹೂವು:ಕಣಗಿಲೆ ಹೂವಿನಿಂದ ದೇವರನ್ನು ಪೂಜಿಸಿದರೆ ಕವಿಗಳಿಗೆ ಕಾಲ್ಪನಿಕ ಸಾಹಿತ್ಯ ವೃದ್ಧಿಸುತ್ತದೆ.

ಕನಕಾಂಬರ ಹೂವಿನಿಂದ ಪೂಜೆ ಮಾಡಬಾರದು ಎಂದು ಹೇಳುತ್ತಾರೆ. ಯಾಕೆ ? ಕನಕಾಂಬರದ ಹೂವಿನಿಂದ ಪೂಜೆ ಮಾಡಬಾರದು ಯಾಕೆಂದರೆ ಈ ಹೂವುಗಳಿಂದ ಪೂಜೆ ಮಾಡಿದರೆ ಜೀವನದಲ್ಲಿ ವೈರಾಗ್ಯ ಉಂಟಾಗುವುದು. ಆದ್ದರಿಂದ ಪೂಜೆಗೆ ಕನಕಾಂಬರ ಹೂವನ್ನು ಬಳಸಬಾರದು ಎಂದು ಹೇಳುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top