ಮನೋರಂಜನೆ

ವಿದೇಶದಲ್ಲಿ ಗೌರವ ಸಮರ್ಪಣೆಗೆ ಪಾತ್ರರಾದ ನಟ ದರ್ಶನ್ ಮತ್ತು ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್

ನಟ ದರ್ಶನ್ ಕಳೆದ ವರ್ಷ ಲಂಡನ್ ಪಾರ್ಲಿಮೆಂಟ್ ನಿಂದ ಗ್ಲೋಬಲ್ ಪ್ರಶಸ್ತಿ ಪಡೆದಿದ್ದು ಜನಜನಿತವಾಗಿತ್ತು . ಇದೀಗ ಮತ್ತೊಮ್ಮೆ ವಿದೇಶದಲ್ಲಿ ಅವರಿಗೆ ಗೌರವ ಸಮರ್ಪಣೆ ನಡೆದಿದ್ದು ಅವರ ಅಭಿಮಾನಿಗಳಿಗೆ ಇದು ಅತಿ ಹೆಚ್ಚು ಖುಷಿಯನ್ನು ತಂದು ಕೊಟ್ಟಿದೆ.

63 ನೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕತಾರ್ ನ್ ಕನ್ನಡ ಸಂಘಟನೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗಹಿಸಿದ ನಟ ದರ್ಶನ್ ಹಾಗೂ ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ರವರಿಗೆ ಕತಾರ್ ನ ಕನ್ನಡ ಸಂಘಟನೆ ಗೌರವ ಸಮರ್ಪಣೆ ಮಾಡಿದೆ.

 

 

 

ಅದರಂತೆ ಅಲ್ಲಿನ ಕನ್ನಡಿಗರು ತಮ್ಮ ಮೆಚ್ಚಿನ ನಟರನ್ನು ನೋಡಿ ಖುಷಿಯಾಗಿದ್ದಾರೆ. ಹಾಗೂ ದರ್ಶನ್ ರವರ ಈ ಸಂಭ್ರಮದ ಕ್ಷಣಗಳನ್ನು ಅವರ ಅಭಿಮಾನಿಗಳು ಟ್ವಿಟ್ಟರ್ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಅಂದಹಾಗೆ, ದರ್ಶನ್ ಸದ್ಯ ‘ಯಜಮಾನ’, ‘ಒಡೆಯ’, ‘ಡಿ 53’ ಹಾಗೂ ‘ಗಂಡುಗಲಿ ಮದಕರಿ ನಾಯಕ’ ಸಿನಿಮಾಗಳಲ್ಲಿ ಬ್ಯುಸಿ ಇದ್ದು . ಅವರ ‘ಕುರುಕ್ಷೇತ್ರ’ ಸಿನಿಮಾ ಬಿಡುಗಡೆಯ ಹಂತದಲ್ಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top