ಮನೋರಂಜನೆ

ಸುದೀಪ್, ಪುನೀತ್, ದರ್ಶನ್ ಮತ್ತು ಯಶ್‌ ಅವರಲ್ಲಿ ಜಗ್ಗೇಶ್ ವಿಶೇಷ ಮನವಿ- ಏನದು?

ಕನ್ನಡ ಚಿತ್ರರಂಗದ ಬಗ್ಗೆ ಅತಿಹೆಚ್ಚು ಕಾಳಜಿ ಹೊಂದಿರೋ ನಟ ಎಂಬ ಕೀರ್ತಿ ನಿಸ್ಸಂದೇಹವಾಗಿ ಜಗ್ಗೇಶ್ ಅವರಿಗೆ ಸಲ್ಲುತ್ತದೆ. ಈ ವಿಚಾರವನ್ನು ಆಗಾಗ ಜಗ್ಗೇಶ್ ಟ್ವಿಟರ್ ನಲ್ಲೆ ದಾಖಲಿಸುತ್ತಿರುತ್ತಾರೆ..ಓರ್ವ ರಾಜಕಾರಣಿಯಾಗಿ ಅವರ ಬಗ್ಗೆ ನಾನಾ ತಕರಾರುಗಳಿರಬಹುದು ಆದರೆ ಒಂದು ವ್ಯಕ್ತಿಯಾಗಿ ಅವರನ್ನು ಮೆಚ್ಚಿಕೊಳ್ಳದಿರುವವರು ವಿರಳ. ಅದೇನೇ ಸಾಧಿಸಿದರೂ, ಯಾವ ಎತ್ತರ ತಲುಪಿದರೂ ತಮ್ಮ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರೋದನ್ನ ನೋಡೋದೇ ಚೆಂದಾ.

ಇಂಥಾ ಜಗ್ಗೇಶ್ ಇದೀಗ ಕನ್ನಡ ಚಿತ್ರರಂಗದ ಇಂದಿನ ಪೀಳಿಗೆಯ ಸ್ಟಾರ್ ನಟರಾದ ಸುದೀಪ್, ಪುನೀತ್, ದರ್ಶನ್, ಯಶ್ ಹಾಗೂ ಇತರ ನಟರಲ್ಲಿ ಒಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಅದೇನೆಂದರೆ ಎಲ್ಲಾ ಸ್ಟಾರ್ ನಟರುಗಳು ತಮ್ಮ ಮುಂದಿನ ಸಿನಿಮಾಗಳಲ್ಲಿ ತಲಾ ಇಬ್ಬರು ಹಿರಿಯ ನಾಯಕರಿಗೆ ಅವಕಾಶಗಳನ್ನ ನೀಡಬೇಕು ಎಂದು ನವರಸ ನಾಯಕ ಜಗ್ಗೇಶ್ ಅವರು ಮನವಿ ಮಾಡಿಕೊಂಡಿದ್ದಾರೆ.

“ಕನ್ನಡ ಚಿತ್ರರಂಗವನ್ನ ದೊಡ್ಡ ಮಟ್ಟದಲ್ಲಿ ಕರೆದೊಯ್ಯುತ್ತಿರುವ ಯುವಪೀಳಿಗೆಗೆ ಸೇರಿದ ದರ್ಶನ್, ಯಶ್, ಸುದೀಪ್, ಪುನೀತ್ ಮುಂತಾದವರು ನಮ್ಮ ಸಿನಿಮಾ ರಂಗವನ್ನ ಬೆಳೆಸುತ್ತಿದ್ದಾರೆ. ಇಂತಹವರು ತಮ್ಮ ಸಿನಿಮಾಗಳಲ್ಲಿ ಹಿರಿಯ ನಟ-ನಟಿಯರಿಗೆ ಅವಕಾಶಗಳನ್ನ ನೀಡಬೇಕು.. ನಮ್ಮ 8MM ಚಿತ್ರದಲ್ಲಿ ಹಿರಿಯ ಕಲಾವಿದ ಕಿಲ್ಲರ್ ವೆಂಕಟೇಶ್ ಅವ್ರಿಗೆ ಅವಕಾಶ ನೀಡಿದ್ದೇವೆ. ಅದೇ ರೀತಿ ಹಿರಿಯ ಕಲಾವಿದರಿಗೆ ಇಂದಿನ ಪೀಳಿಗೆಯ ಕಲಾವಿದರು ತಮ್ಮ ಸಿನಿಮಾಗಳಲ್ಲಿ ಚಾನ್ಸ್ ಕೊಡಬೇಕು” ಎಂದು ಜಗ್ಗೇಶ್ ಮನವಿ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top