fbpx
ದೇವರು

ಕವಡೆ ಬಳಸಿಕೊಂಡು ನೂತನ ಗೃಹಗಳಿಗೆ,ವಾಹನಗಳಿಗೆ, ಕವಡೆಗಳನ್ನು ಕಟ್ಟಿ ದೃಷ್ಟಿದೋಷ ಹಾಗೆ ಹಣ ಕಾಸಿನ ತೊಂದರೆ ನಿವಾರಣೆ ಮಾಡ್ಕೋಬಹುದು ತಿಳಿಯೋಣ ಬನ್ನಿ!

ಸಿರಿ ಸಂಪತ್ತನ್ನು ಸಮೃದ್ಧಿಯಾಗಿ ಇಡುವ ಆ ಮಾತೆಯೇ ಧನಲಕ್ಷ್ಮೀ.ಆ ಜಗನ್ಮಾತೆಯ ಕರುಣೆ,ಕೃಪಾ ಕಟಾಕ್ಷ ಆಗಬೇಕು ಅಂದರೆ ಆ ತಾಯಿಯ ಮನಸ್ಸು ಮೆಚ್ಚಿಸುವ ಹಾಗೆ ಆಕೆಯ ಇಚ್ಛಾನುಸಾರ ಇಷ್ಟ ಆಗುವಂತೆ ನೆಡೆದುಕೊಂಡರೆ ಸಾಕು.ಆಕೆ ಧನ ಕನಕ ರಾಶಿಗಳನ್ನೇ ಮನೆಯಲ್ಲಿ ಸುರಿಸಿ ಸಿರಿವಂತರನ್ನಾಗಿ ಮಾಡುತ್ತಾಳೆ ಎಂದು ಗುರು ಹಿರಿಯರು ಹೇಳುತ್ತಾರೆ.ಧನಕ್ಕೆ ಅಧಿದೇವತೆಯಾದ ಮಹಾಲಕ್ಷ್ಮೀಯನ್ನು ಕೆಲವೊಂದು ರೂಪಗಳಲ್ಲಿ ಪೂಜಿಸುವುದುಂಟು ಅಂತವುಗಳಲ್ಲಿ ಲಕ್ಷ್ಮೀ ಕವಡೆಗಳು ಸಹ ಒಂದಾಗಿದೆ.ಇವುಗಳನ್ನು ಮಹಾಲಕ್ಷ್ಮೀ ಸ್ವರೂಪವೆಂದು ಭಾವಿಸುವ ಲಕ್ಷ್ಮೀ ಕವಡೆಗಳು ಯಾವ ಮನೆಯಲ್ಲಿರುತ್ತದೋ ಆ ಮನೆಯಲ್ಲಿ ಸಿರಿ ಸಂಪತ್ತು ತುಂಬಿರುತ್ತದೆ.ಅದೃಷ್ಟ ದೇವತೆ ಹುಡುಕಿಕೊಂಡು ಬಾಗಿಲನ್ನು ತಟ್ಟುತ್ತಾಳೆ ಎಂದು ಪಂಡಿತರು ಹೇಳುತ್ತಾರೆ.

ಕವಡೆಗಳ ವಿಶೇಷತೆ ಏನು ?

ಪೂರ್ವದಲ್ಲಿ ಕ್ಷೀರ ಸಮುದ್ರ ಮಥನದ ಸಮಯದಲ್ಲಿ ಸಮುದ್ರದಿಂದ ಶ್ರೀ ಮಹಾಲಕ್ಷ್ಮೀ ದೇವಿ, ಶಂಖ, ಚಕ್ರ,ಹಾಗೂ ಕವಡೆಗಳು ವಿಷ,ಅಮೃತ ಉದ್ಭವಿಸಿದವು ಅಂತ ತಿಳಿದಿದೆ.ಅದಕ್ಕೆ ಕವಡೆಗಳನ್ನು ಶ್ರೀ ಮಹಾಲಕ್ಷ್ಮೀ ದೇವಿಯ ಸಹೋದರಿಯಾಗಿ ಶಂಖವನ್ನು ಸಹೋದರನೆಂದು ಉಲ್ಲೇಖಿಸಲಾಗಿದೆ.ಅದಕ್ಕೆ ಕವಡೆಗಳನ್ನು ಲಕ್ಷ್ಮೀ ದೇವಿಯ ಪ್ರತಿರೂಪವಾಗಿ ಭಾವಿಸಿ ಪೂಜಿಸುತ್ತಾರೆ.ಆದ್ದರಿಂದ ಎಲ್ಲಿ ಕವಡೆಗಳು ಇರುವವು ಅಲ್ಲಿ ಶ್ರೀ ಲಕ್ಷ್ಮೀ ನೆಲೆಸಿರುತ್ತಾಳೆ ಎಂದು ಪ್ರತೀತಿ ಹಾಗೂ ಪ್ರಭಲ ವಿಶ್ವಾಸ ಇದೆ.

 

 

 

ಕವಡೆಗಳು ದೃಷ್ಟಿ ದೋಷವನ್ನು ನಿವಾರಿಸುತ್ತವೆ.ಅಷ್ಟೇ ಅಲ್ಲದೆ ಧನಾಕರ್ಷಣೆಯ ಶಕ್ತಿಯನ್ನು ಹೊಂದಿವೆ ಎಂದು ಹಿರಿಯರು ಹೇಳುವುದುಂಟು ಆದ್ದರಿಂದ ಕವಡೆಗಳು,ಧನವನ್ನು ಭದ್ರಪಡಿಸುವಲ್ಲಿ ,ಪೂಜಾ ಮಂದಿರದಲ್ಲಿ ಇಟ್ಟು ಪೂಜಿಸುವುದನ್ನು ಇಟ್ಟು ನಾವು ಪೂಜೆ ಮಾಡುವುದನ್ನು ನೋಡುತ್ತೇವೆ.

ಕವಡೆಯಿಂದ ದೃಷ್ಟಿದೋಷ ನಿವಾರಣೆ ಹೇಗೆ ?

ದೃಷ್ಟಿದೋಷ ನಿವಾರಣೆಗೆ ಇವು ಉತ್ತಮ ಎಂದು ಹೇಳಲಾಗಿದೆ. ಅದು ಹೇಗೆ ಎಂದರೆ ನೂತನ ಗೃಹಗಳಿಗೆ,ವಾಹನಗಳಿಗೆ, ಕವಡೆಗಳನ್ನು ಕಟ್ಟಿ ದೃಷ್ಟಿದೋಷ ನಿವಾರಣೆ ಮಾಡಬಹುದು.ಹಾಗೆಯೇ ಪೂರ್ವದಲ್ಲಿ ನಾಣ್ಯ ಅಥವಾ ಖಾಸುಗಳಿಗೆ ಬದಲಾಗಿ ಕವಡೆ ಉಪಯೋಗಿಸುತ್ತಿದ್ದರೆಂದು ಈಗಲೂ ಸಹ ನಾವು ಹೇಳಿರುವುದನ್ನು ಕೇಳಿದ್ದೇವೆ ಕವಡೆ ಖಾಸು ಕೂಡ ಇಲ್ಲ ಎಂದು ರೂಢಿಯಲ್ಲಿ ಇರುವ ಮಾತಾಗಿದೆ.ಇಷ್ಟೊಂದು ವೈಶಿಷ್ಟ್ಯತೆ ಹೊಂದಿರುವ ಲಕ್ಷ್ಮೀ ಕವಡೆಗಳು,ಪ್ರತ್ಯೇಕತೆಗಳು ,ಪ್ರಯೋಜನಗಳನ್ನು ನಾವು ಈಗ ತಿಳಿಯೋಣ.ಕವಡೆಗಳು ವಿವಿಧ ಬಣ್ಣಗಳಲ್ಲಿ ಹಾಗೂ ಆಕಾರಗಳಲ್ಲಿ ಲಭ್ಯವಿದೆ.ಅದರಲ್ಲಿ ಹರಿಷಿನ ಹಚ್ಚಿದ ಬಣ್ಣದಲ್ಲಿ ಮಿಂಚುತ್ತಿರುವ ಕವಡೆಗಳು ಮಹಾಲಕ್ಷ್ಮೀ ಕವಡೆಗಳೆಂದು ಭಾವಿಸುತ್ತಾರೆ.ಕವಡೆಗಳು ಎಲ್ಲಿ ಇದ್ದರು ಅಲ್ಲಿ ಲಕ್ಷ್ಮೀ ಸ್ಥಿರವಾಗಿ ಸ್ಥಾನವನ್ನು ,ಸುಸ್ಥಿರವಾಗಿ ನಿವಾಸವನ್ನು ಏರ್ಪಡಿಸಿಕೊಂಡಿರುತ್ತಾಳೆ ಎಂಬ ಪ್ರತೀತಿ ಇದೆ.

ಪೂಜಾ ಮಂದಿರದ ಬದಿಯಲ್ಲಿ ಅಥವಾ ಕೋಣೆಯಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ಫೋಟೋ ಮುಂದೆ ಅಥವಾ ಮಹಾಲಕ್ಷ್ಮೀ ದೇವಿಯ ವಿಗ್ರಹದೊಂದಿಗೆ ಷಂಖ, ಕವಡೆಗಳನ್ನು ಸಹ ಇಟ್ಟು.ಪೂಜಿಸಿ,ಪ್ರಾರ್ಥಿಸಿ ಆರಾಧಿಸಿದರೆ ಶ್ರೀ ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾಳೆ ಎಂದು ಹೇಳುತ್ತಾರೆ.ಇದು ಅಚಾರವಾಗಿ,ಪದ್ದತಿಯಾಗಿ ನೆಡೆದು ಬಂದಿರುವ ಒಂದು ಪದ್ದತಿಯೂ ಆಗಿದೆ.ಈ ವಿಧದಲ್ಲಿ ಪೂಜಿಸಿ ಆರಾಧಿಸಿದವರಿಗೆ ಶ್ರೀ ಮಹಾಲಕ್ಷ್ಮೀ ಕೃಪಾ ಕಟಾಕ್ಷವಾಗಿ,ಸಿರಿ ,ಸಂಪತ್ತು ಭೋಗ ಬಾಗ್ಯಗಳು ಬಂದು ಒದಗುತ್ತವೆ.ಇನ್ನೂ ಕವಡೆಗಳಲ್ಲಿ ಧನವನ್ನು ಅಥವಾ ಹಣವನ್ನು ಭದ್ರಪಡಿಸುವ ಲಾಕರ್ ಅಥವಾ ಅಲ್ಮಿರಾಗಳಲ್ಲಿ ಇಟ್ಟು ಪೂಜಿಸಿದರೆ ಶ್ರೀ ಮಹಾಲಕ್ಷ್ಮೀ ಸ್ಥಿರವಾಗಿ ಆ ಮನೆಯಲ್ಲಿ ನೆಲೆಸುತ್ತಾಳೆ.ಕವಡೆಗಳು ಇರುವ ಮನೆಯಲ್ಲಿ ಸಿರಿ,ಸಂಪತ್ತು, ಧನ,ಧಾನ್ಯ ಉಕ್ಕಿ ಹರಿಯುತ್ತವೆ. ಅಷ್ಟೇ ಅಲ್ಲದೆ ಕವಡೆಗಳ ನಾದ ಕೇಳಿದರೆ ಸಾಕು ತಾನೇ ತಾನಾಗಿ ಶ್ರೀ ಲಕ್ಷ್ಮೀ ಮನೆಯಲ್ಲಿ ಪ್ರವೇಶಿಸಿ ಬಂದು ಕೂರುತ್ತಾಳೆ ಎನ್ನುವ ನಂಬಿಕೆ ಕೂಡ ಇದೆ.ಈ ಕವಡೆ ಶಿವನ ಜಡೆಯಲ್ಲಿ ,ನಂದೀಶ್ವರನ ಕಂಠದಲ್ಲಿ ಸಹ ಇರುವುದನ್ನು ನೋಡಿದ್ದೇವೆ.ಅಂತೆಯೇ ಸವದತ್ತಿ ಯಲ್ಲಮ್ಮನ ಕಂಠದಲ್ಲಿಯೂ ಸಹ ಈ ಕವಡೆಗಳನ್ನು ನಾವು ಕಾಣಬಹುದು.ಇನ್ನೂ ಕೆಲವು ಕಡೆಗಳಲ್ಲಿ ಕವಡೆಯನ್ನು ಬಳಸುತ್ತಾ ಲಕ್ಷ್ಮೀಯನ್ನು ಆಹ್ವಾನಿಸುವ ಪದ್ದತಿ ಇದೆ.

 

 

 

ವಾಹನಹಗಳಿಗೆ ಕಪ್ಪು ದಾರಗಳಲ್ಲಿ ಕವಡೆಗಳನ್ನು ಕಟ್ಟುತ್ತಾರೆ ಯಾಕೆಂದರೆ ದೃಷ್ಟಿದೋಷ ತಗಲುವುದಿಲ್ಲ,ಯಾವುದೇ ಅನಾಹುತಗಳು ಜರುಗುವುದಿಲ್ಲ ಎನ್ನುವ ನಂಬಿಕೆ.ಕಟ್ಟಡಗಳನ್ನು ಕಟ್ಟುವ ನಿರ್ಮಾಣ ಹಂತದಲ್ಲೂ ಸಹ ಯಾವುದಾದರೂ ಒಂದು ಪ್ರದೇಶದಲ್ಲಿ ಈ ಕವಡೆಗಳನ್ನು ಕಟ್ಟಬೇಕು ಆಗ ನಿರ್ಮಾಣ ಕೂಡ ಸುಗಮವಾಗಿ, ಸಂಪೂರ್ಣವಾಗಿ ಸಾಗುತ್ತದೆ ಎನ್ನುವ ನಂಬಿಕೆ ಕೂಡ ಇದೆ.ನೂತನ ಗೃಹ ಪ್ರವೇಷಿಸುವಾಗ ಒಂದು ಹಳದಿ ಬಟ್ಟೆಯಲ್ಲಿ ಕವಡೆಗಳನ್ನು ಇಟ್ಟು ಮುಖ್ಯ ದ್ವಾರದಲ್ಲಿ ಕಟ್ಟಿದರೆ ಶುಭ ಪ್ರದ.ಲಕ್ಷ್ಮೀ ತಾನೇ ತಾನಾಗಿ ಬಂದು ಮನೆಯಲ್ಲಿ ನೆಲೆಸುತ್ತಾಳೆ ಎನ್ನುವ ಪ್ರತೀತಿ ಇದೆ.ಒಂದು ಹರಿಷಿನದ ಬಟ್ಟೆಯಲ್ಲಿ ಈ ಕವಡೆಗಳನ್ನು ಇಟ್ಟು ಕಟ್ಟಿ ಮಂದಿರದಲ್ಲಿ ಇಟ್ಟು ಶ್ರೀ ಲಲಿತಾ ಸಹಸ್ರನಾಮದೊಂದಿಗೆ ,ಶ್ರೀ ಮಹಾಲಕ್ಷ್ಮೀ ಅಷ್ಟೋತ್ತರದೊಂದಿಗೆ ,ಕುಂಕುಮಾರ್ಚನೆ ಮಾಡುವುದರಿಂದ ಧನಾಕರ್ಷಣೆ ಉಂಟಾಗಿ ಧನವರ್ಷವು ,ಕನಕವರ್ಷವೂ ಉಂಟಾಗುತ್ತದೆ. ಹಣವನ್ನು ಇಡುವ ಸ್ಥಳದಲ್ಲಿ ನಾಣ್ಯಕ್ಕೆ ತಗಲುವಂತೆ ಇಡುವುದರಿಂದ ದಿನೇ ದಿನೇ ಧನಾಭಿವೃದ್ಧಿಯಾಗಿ ಸಿರಿ ಸಂಪತ್ತು ಬಂದು ಒದಗುತ್ತದೆ.

ವಿವಾಹ ವಿಳಂಬ, ಆಲಸ್ಯವಾಗಿರುವವರಿಗೆ ಕವಡೆಗಳನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳುವುದರಿಂದ ಕೂಡ ವಿವಾಹ ಯೋಗವು ಕೂಡಿ ಬರುತ್ತೆ ಕಂಕಣ ಭಾಗ್ಯವೂ ಬೇಗನೆ ಲಭಿಸುತ್ತದೆ.ವಿವಾಹದ ನಂತರ ವಧು ವರರ ಕೈಗೆ ಕವಡೆಯನ್ನು ಕಟ್ಟಿದರೆ ನರ ದೃಷ್ಟಿ (ಮನುಷ್ಯನ ಕೆಟ್ಟ ಕಣ್ಣಿನ ದೃಷ್ಟಿ) ತಗಲುವುದಿಲ್ಲ.ಸಂಸಾರ ಜೀವನ ಸುಖಮಯವಾಗಿ ಸುಗಮವಾಗಿ ಸಾಗುತ್ತದೆ.ವಶೀಕರಣ ಮಂತ್ರವನ್ನು ಪಠಿಸುವಾಗ ಕವಡೆಗಳನ್ನು ಕೈಯಲ್ಲಿ ಹಿಡಿದು ಪಠಿಸಿದರೆ ಶ್ರೇಷ್ಠ.ಎಲ್ಲಿ ಕವಡೆಗಳು ಗಲ ಗಲ ಶಬ್ದ, ಝೆಯಂಕಾರ ನಾದ ಇರುತ್ತದೆಯೋ ಅಲ್ಲಿ ಲಕ್ಷ್ಮೀ ಸದಾ ನೆಲೆಸಿರುತ್ತಾಳೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top