fbpx
ದೇವರು

ಶನಿವಾರದಂದು ಹೀಗೆ ಮಾಡಿದರೆ ಸಾಕು ನಿಮ್ಮ ಎಲ್ಲ ಸಮಸ್ಯೆ ಮಾಯವಾಗುವುದು ಖಂಡಿತ:

ಸೂರ್ಯ ದೇವನ ಎರಡನೇ ಹೆಂಡತಿ ಛಾಯಾದೇವಿಗೆ ಜನಿಸಿದ ಸಂತಾನವೇ ಶನಿ .ಶನಿದೇವನ್ನು ಜೀವಿಗಳ ಜಾತಕಚಕ್ರ ಮೇಲೆ ಆತನ ಪ್ರಭಾವವನ್ನು ಹೇಗೆ ತೋರಿಸುತ್ತಾನೆ ಎಂಬುದನು ನಿರೂಪಿಸಲು ಆತನ ಜನನ ಸೂರ್ಯ ಗ್ರಹಣದಂದು ಆಯಿತ್ತು ಎಂದು ಹೇಳುತ್ತದೆ ಶಸ್ತ್ರ.ಪೂರ್ವ ಕಾಲದಲ್ಲಿ ನಾರದ ಮಹಷಿಯು ಶನಿಯನ್ನು ಅತಿಯಾಗಿ ಹೊಗಳುತ್ತಿರುವುದನ್ನು ನೋಡಿ ಕೈಲಾಷವಾಸಿಯಾದ ಶಿವನಿಗೆ ಆ ಹೊಗಳಿಕೆ ಅಷ್ಟು ಇಷ್ಟವಾಗಲಿಲ್ಲ ಅದಕ್ಕೆ ಪ್ರತಿಯಾಗಿ ಶಿವನ್ನು ನಾರದನಿಗೆ ಶನಿ ಅಷ್ಟು ಶಕ್ತಿ ಮತ್ತು ಯುಕ್ತಿಶಾಲಿ ಯಾಗಿದರೆ ಅವನ ಪ್ರಭಾವನ್ನು ತನ್ನ ಮೇಲೆ ತೋರಿಸುವಂತೆ ಹೇಳುತ್ತಾರೆ .ನಾರದ ಮಹಷಿ ಶನಿಯ ಬಳಿ ಚಾಚು ತಪ್ಪದಂತೆ ಈ ವಿಷಯವನ್ನು ಹೇಳುತ್ತಾನೆ.

ಇದನ್ನು ಕೇಳಿದ ಶನಿಗೆ ಒಂದೇ ಒಂದು ಸಲವಾದರೂ ಶಿವನನ್ನ ಹಿಡಿದು ಪೀಡಿಸಬೇಕೆಂದು ನಿರ್ಧಾರ ಮಾಡಿ ,ಶಿವನು ಹೆಚ್ಚಾರವಹಿಸುವಂತೆ ಹೇಳು ಎಂದು ನಾರದನ ಹತ್ತಿರ ಹೇಳುತ್ತಾನೆ.ಹೀಗೆ ಶಿವ ಮತ್ತು ಶನಿಯ ಮಧ್ಯ ಅಂತರ ಕಲಹ ಉಂಟಾಗುತ್ತದೆ.ಮುನ್ನಹೆಚ್ಚರಿಕೆವಹಿಸಿದ ಶಿವನು ಕೈಲಾಶ ಬಿಟ್ಟು ದಂಡಕಾರುಣ್ಯ ಅಡವಿಯ ಒಂದು ಮರದ ಪೊದೆಯಲ್ಲಿ ಅಡಗಿ ಕುಳಿತುಕೊಂಡು ಈ ದಿನ ಕಳೆದರೆ ಶನಿ ತನ್ನನು ಏನು ಮಾಡಲು ಆಗುವುದಿಲ್ಲ ಎಂದು ಅಂದುಕೊಳ್ಳುತ್ತಾನೆ.ಆದರೆ ಬೆಳ್ಳಗೆ ತಾನು ಕಣ್ಣು ತೆಗೆಯುವ ಮುನ್ನ ಶಿವನ ಕಣ್ಣಿನ ಮುಂದೆ ಶನಿ ಬಂದು ನಿಂತಿರುತ್ತಾನೆ .

 

 

ಶಿವನು ಶನಿಗೆ ಏನ್ ಆಯಿತು ನಿನ್ನ ಪ್ರತಾಪ ಎಂದು ಕೇಳುತ್ತಾನೆ ಇದಕ್ಕೆ ಪ್ರತಿಯಾಗಿ ಶನಿ ವಿನಯವಾಗಿ ಕೈಲಾಶವಾಸಿ ಯಾದ ನೀವೇ ಕೈಲಾಶ ಬಿಟ್ಟು ಈ ದಂಡ ಕಾರುಣ್ಯ ದಲ್ಲಿ ಇರುವಂತೆ ಆಯಿತು,ಅಷ್ಟರ ಮಟ್ಟಿಗೆ ನಾನು ನಿಮನ್ನು ಇಡಿದಿದ್ದನಲ್ಲ ಎಂದು ಹೇಳುತ್ತದೆ.
ಇದನ್ನು ಕೇಳಿದ ಶಿವನು ಶನಿಯ ಭಕ್ತಿ ,ಶಕ್ತಿಯನ್ನು ಮೆಚ್ಚಿ ಇಂದಿನಿಂದ ನೀನು ಲೋಕದಲ್ಲಿ ಶನೇಶ್ವರ ಎಂದು ಪ್ರಸಿದ್ಧಿ ಪಡೆದು ಪೂಜಿಸಲ್ಪಡುವೆ ,ಶನಿಯ ಪೂಜೆ ಮಾಡಿದರೆ ನೇರವಾಗಿ ಪರಮೇಶ್ವರನ ಕೃಪಿಗೆ ಪಾತ್ರವಾಗುವಂತೆ ವಾರ ನೀಡುತ್ತಾನೆ.ಹೀಗೆ ಶನಿ ಶನೇಶ್ವರ ಎಂದು ಪ್ರಸಿದ್ಧಿ ಯಾಗುತ್ತಾನೆ.ಶನೇಶ್ವರನ್ನು ತನ್ನ ಪ್ರಭಾವದಿಂದ ಜನರು ಬಳಲುವುದನ್ನು ಊಹಿಸಿ ,ಶನಿತ್ರೀಹೋದಶಿ ಎಂದು ತಪಸ್ಸನ್ನು ಕೈಗೊಳ್ಳುತ್ತಾನೆ.ಆ ತಪಸ್ಸಿಗೆ ಮೆಚ್ಚಿದ ದೇವನ್ನು ,ಶನಿಯಪ್ರಭಾವ ದಿಂದ ಬಳಲುತ್ತಿರುವವರು ಎಲ್ಹೆಣ್ಣೆ,ಕರಿ ಎಳ್ಳು,ನೀಲಿ ಶಂಖ ಪುಷ್ವ ಮತ್ತು ಕರಿ ಬಟ್ಟೆ ಗಳನ್ನೂ ಉಪಯೋಗಿಸಿ ಯಾರು ಶನಿ ದೇವರನ್ನು ಪೂಜಿಸುತರೋ ಅವರಿಗೆ ಶನಿದೇವನಿಂದ ಆಗುವ ಅನಾರೋಗ್ಯ ಮೃತ್ಯುಭಯ ಸಮಸ್ಯೆ ಮಾಯವಾಗುತ್ತದೆ.

 

 

 

ನಂತರ ತ್ರೆತಾಯುಗದಲ್ಲಿ ರಾಮನು ,ದ್ವಾಪರ ಯುಗದಲ್ಲಿ ಶ್ರೀ ಕೃಷ್ಣ ಮತ್ತು ಅನೇಕ ಮುನಿಗಳು ಶನಿದೇವನನ್ನು ಪೂಜಿಸಿ ಅವರ ದೋಷ ಪರಿಹಾರ ಮಾಡಿಕೊಡವರೆ.ಶನಿವಾರದಂದು ಎಲ್ಹೆಣ್ಣೆ,ಕರಿ ಎಳ್ಳು,ನೀಲಿ ಶಂಖ ಪುಷ್ವ ಮತ್ತು ಕರಿ ಬಟ್ಟೆ ಗಳನ್ನೂ ಉಪಯೋಗಿಸಿ ಶನಿದೇವರ ಪೂಜೆ ಮಾಡಿದರೆನಿಮ್ಮ ಎಲ್ಲ ದೋಷ ಪರಿಹಾರವಾಗಿ ಶನಿ ದೇವರ ಕೃಪಾ ಕಟಾಕ್ಷ ಪಡೆದುಕೊಳ್ಳಬಹುದು, ಶನಿವಾರದ ದಿನ ಕರಿ ಎಳ್ಳನ್ನು ದಾನ ಮಾಡಿದರೆ ತುಂಬಾ ಒಳ್ಳೆಯದು ಮತ್ತು ಶನಿವಾರದ ದಿನ ಯಾವುದೇ ಕಾರಣಕ್ಕೂ ಕಬ್ಬಿಣ ,ಉಪ್ಪು ,ಕರಿ ಎಳ್ಳು ಮತ್ತು ಕಪ್ಪು ಬಟ್ಟೆಯನ್ನು ಎರವಾಲಾಗಿ ಪಡೆಯಬಾರದು.ಹಾಗೂ ಶನಿವಾರದಂದು ಆಲದ ಮರವನ್ನು ಪ್ರದಕ್ಷಣಿ ಹಾಕುವುದರಿಂದ ಕೂಡ ಶನಿಯ ಕಟಾಕ್ಷ ಜನರ ಮೇಲೆ ಇರುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top