fbpx
ಅರೋಗ್ಯ

ಪ್ರಾಣಯಾಮ ಮಾಡೋದ್ರಿಂದ ನೈಸರ್ಗಿಕವಾಗಿ ರಕ್ತ ಶುದ್ದಿ ಆಗುತ್ತೆ ಅಂತ ತಿಳ್ಕೊಂಡ್ಮೇಲೆ ನೀವು ಮಾಡೋಕೆ ಶುರು ಹಚ್ಕೋತಿರಾ !

ಅನುಲೋಮ ವಿಲೋಮ ಎನ್ನುವುದು ಪ್ರಾಣಾಯಾಮದ ಒಂದು ವಿಧಾನವಾಗಿದೆ. ಇದರಲ್ಲಿ ವ್ಯಕ್ತಿಯು ತನ್ನ ಉಸಿರಾಟದ ಕ್ರಿಯೆಗೆ ಹೆಚ್ಚಿನ ಗಮನ ನೀಡುತ್ತಾನೆ. ಇದು ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ರಕ್ತವನ್ನು ನೈಸರ್ಗಿಕ ವಿಧಾನದ ಮೂಲಕ ಶುದ್ದಿಗೊಳಿಸುತ್ತದೆ.ಅನುಲೋಮ ವಿಲೋಮಾದಿಂದ ದೇಹದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ದೇಹದ ಎಲ್ಲಾ ಅಂಗಗಳು ಉತ್ಸಾಹದಿಂದ ಕೆಲಸ ಮಾಡಲು ಶುರು ಮಾಡುತ್ತವೆ. ಇದರ ಜೊತೆಗೆ ಚರ್ಮ ಕೂಡ ಹೊಳಪು ಪಡೆಯುತ್ತದೆ.ಈ ಪ್ರಾಣಾಯಾಮ ಮಾಡಲು ಹಾಸಿಗೆಯ ಮೇಲೆ ಚಕ್ಕಲ ಪಟ್ಟು ಹಾಕಿ ಕುಳಿತುಕೊಳ್ಳಬೇಕು. ಬೆನ್ನು ಮತ್ತು ಕುತ್ತಿಗೆ ನೇರವಾಗಿರಲಿ. ಎಡಗೈ ಮತ್ತು ಎಡ ಮೊಣಕಾಲಿನ ಮೇಲಿರಲಿ.

 

 

 

ಎಡಗೈನ ಹೆಬ್ಬರಳಿಗೆ ತೋರು ಬೆರಳು ಹಾಗೂ ಮದ್ಯದ ಬೆರಳು ತಾಗಿರಬೇಕು. ಬಲಗೈನ ತೋರು ಬೆರಳು ಹಾಗೂ ಮಧ್ಯದ ಬೆರಳು ಮುಚ್ಚಿರಲಿ. ಬಲಗೈ ಹೆಬ್ಬೆರಳಿನಿಂದ ಮೂಗಿನ ಬಲಭಾಗದ ಹೊಳ್ಳೆಯನ್ನು ಮುಚ್ಚಿ, ಎಡ ಹೊಳ್ಳೆಯಿಂದ ನಾಲ್ಕು ಸಂಖ್ಯೆಯನ್ನು ಎಣಿಸುತ್ತ ಉಸಿರು ಎಳೆದುಕೊಳ್ಳಬೇಕು.ನಂತರ ಬಲಗೈನ ಉಂಗುರ ಬೆರಳಿನಿಂದ ಎಡ ಹೊಳ್ಳೆಯನ್ನು ಮುಚ್ಚಿ ಮೂರು ಸಂಖ್ಯೆಯನ್ನು ಎಣಿಸಿದ ನಂತರ ನಿಧಾನವಾಗಿ ಬಲಭಾಗದ ಹೊಳ್ಳೆಯಿಂದ ಉಸಿರು ಬಿಡಿ.ನಂತರ ಎಡ ರಂಧ್ರದಿಂದ ಉಸಿರೆಳೆದುಕೊಂಡು ಬಲ ಹೊಳ್ಳೆಯಿಂದ ಉಸಿರು ಬಿಡಿ. ಇದನ್ನು ಐದು ನಿಮಿಷದಿಂದ ಹದಿನೈದು ನಿಮಿಷಗಳವರೆಗೆ ಮಾಡಬಹುದಾಗಿದೆ.ನಿಯಮದಂತೆ ಈ ಪ್ರಾಣಾಯಾಮ ಅನುಲೋಮ ವಿಲೋಮಾವನ್ನು ಮಾಡಿದ್ದಲ್ಲಿ ಸಾಕಷ್ಟು ಪ್ರಯೋಜನಗಳಿವೆ ಯೋಗ ತಜ್ಞರನ್ನು ಭೇಟಿಯಾಗಿ, ತರಬೇತಿ ಪಡೆದು ಅನುಲೋಮ ವಿಲೋಮ ಶುರು ಮಾಡುವುದು ಸೂಕ್ತವಾಗಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top